ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಭಾರತದಲ್ಲಿ ಬರೋಬ್ಬರೀ 125.18 ಕೋಟಿ ಖೋಟಾ ನೋಟ್ ಸೀಜ್

2012 ರಿಂದ 2014ರ ವರೆಗೆ ಭಾರತದಲ್ಲಿ ಸರಿ ಸುಮಾರು 125.18 ಕೋಟಿ ರು ಮೌಲ್ಯದ ನಕಲಿ ನೋಟು ಸೀಜ್ ಆಗಿದೆ ಎಂದು ವರದಿ ...

ನವದೆಹಲಿ: 2012 ರಿಂದ 2014ರ ವರೆಗೆ ಭಾರತದಲ್ಲಿ ಸರಿ ಸುಮಾರು 125.18 ಕೋಟಿ ರು ಮೌಲ್ಯದ ನಕಲಿ ನೋಟು ಸೀಜ್ ಆಗಿದೆ ಎಂದು ವರದಿ ತಿಳಿಸಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ದೇಶಾದ್ಯಂತ ನಡೆಸಿದ ಕಾರ್ಯಾಚರಣೆಯಲ್ಲಿ 3,656 ಜನರನ್ನು ಬಂಧಸಿ 125 ಕೋಟಿ ಗೂ ಹೆಚ್ಚು ಖೋಟಾ ನೋಟು ವಶಪಡಿಸಿಕೊಂಡಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆ ದಳ ಜನವರಿಯಲ್ಲಿ ಗೃಹ ಸಚಿವಾಲಯಕ್ಕೆ ವರದಿ ನೀಡಿದೆ.

ಭಾರತ ನಕಲಿನೋಟುಗಳ ದಂಧೆಯ ವಿರಾಟರೂಪಕ್ಕೆ ಸಾಕ್ಷಿಯಾಗಿದೆ. ಖೋಟಾನೋಟು ದಂಧೆ ಮತ್ತು ಚಲಾವಣೆಯಲ್ಲಿ ರಾಷ್ಟ ರಾಜಧಾನಿ ದೆಹಲಿ ಅಗ್ರಸ್ತಾನದಲ್ಲಿದ್ದು, 40,39 ಕೋಟಿ ರೂ.ಗಳ ನಕಲಿ ಕರೆನ್ಸಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಎರಡನೇ ಸ್ಥಾನಗಳಲ್ಲಿ ಮಹಾರಾಷ್ಟ್ರ (14.54 ಕೋಟಿ ರೂ.ಗಳು) ಇದೆ. 2012-13ರಲ್ಲಿ ಆ ರಾಜ್ಯದಲ್ಲಿ 702 ಎಫ್‍ಐಆರ್‍ಗಳನ್ನು ದಾಖಲಿಸಿಕೊಂಡು 561 ಜನರನ್ನು ಬಂಧಿಸಲಾಗಿದೆ.

ನಂತರದ ಸ್ಥಾನಗಳಲ್ಲಿ ಉತ್ತರಪ್ರದೇಶ(11.55 ಕೋಟಿ ರೂ.ಗಳು), ತಮಿಳುನಾಡು(10.83 ಕೋಟಿ ರೂ.ಗಳು), ಕರ್ನಾಟಕ(7.22 ಕೋಟಿ ರೂ.ಗಳು, ಗುಜರಾತ್ (14.54 ಕೋಟಿ ರೂ.ಗಳು) ಮತ್ತು ಆಂಧ್ರಪ್ರದೇಶ (6.22 ಕೋಟಿ ರೂ.ಗಳು)-ಈ ರಾಜ್ಯಗಳಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ. 

ಈ ಅವಧಿಯಲ್ಲಿ ಖೊಟಾನೋಟುಗಳ ವಿರುದ್ಧ ನಡೆದ ಕಾರ್ಯಾಚರಣೆಗಳಲ್ಲಿ ಸಿಬಿಐ ಮತ್ತು ಎನ್‍ಐಎ ತನಿಖಾ ಸಂಸ್ಥೆಗಳು ಭಾಗವಹಿಸಿದ್ದವು.

Related Stories

No stories found.

Advertisement

X
Kannada Prabha
www.kannadaprabha.com