ಪ್ರಧಾನಿ ನರೇಂದ್ರ ಮೋದಿ ಅವರು 500-1000 ರುಪಾಯಿ ಮುಖಬೆಲೆಯ ನೋಟುಗಳ ಚಲಾವಣೆ ನಿಷೇಧದ ಬಳಿಕ ಇದೀಗ ಗ್ರಾಹಕರು ಹೊಸ 2000 ಮುಖಬೆಲೆಯ ನೋಟುಗಳನ್ನು ಬ್ಯಾಂಕ್ ಗಳಲ್ಲಿ ಪಡೆದ ನಂತರ ನೋಟಿನೊಂದಿಗೆ ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡುತ್ತಿದ್ದಾರೆ.
ಸಾರ್ವಜನಿಕರಲ್ಲಿ ಇದೀಗ ಹರ್ಷಕ್ಕೆ ಕಾರಣವಾಗಿರುವುದು ನೂತನ 2000-500 ಮುಖಬೆಲೆಯ ನೋಟುಗಳು. ವಿಭಿನ್ನ ಶೈಲಿಯ ನೋಟುಗಳು ಗ್ರಾಹಕರನ್ನು ಆಕರ್ಷಿಸುತ್ತಿದ್ದು ಅದರೊಂದಿಗೆ ಸೆಲ್ಫಿ ತೆಗೆದುಕೊಂಡು ಟ್ವೀಟರ್, ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡುತ್ತಿದ್ದು ಇದೀಗ ವೈರಲ್ ಆಗಿವೆ.
ಬ್ಯಾಂಕ್ ಗಳಲ್ಲಿ 4 ಸಾವಿರ ರುಪಾಯಿ ಅವರೆಗೂ ಹಣವನ್ನು ಬದಲಾವಣಿಸಿಕೊಳ್ಳಬಹುದಾಗಿದ್ದು ಬೆಳಗ್ಗಿನಿಂದಲೇ ಸರತಿ ಸಾಲಿನಲ್ಲಿ ಸಾರ್ವಜನಿಕರು ನಿಂತು ನೂತನ ನೋಟುಗಳನ್ನು ಪಡೆದುಕೊಳ್ಳುತ್ತಿದ್ದಾರೆ.