ನೋಟುಗಳ ರದ್ದತಿಯಿಂದ ಆರ್ಥಿಕ ಅರಾಜಕತೆ: ಶಿವಸೇನೆ

ಅಕ್ರಮ ಹಣವನ್ನು ಬಯಲಿಗೆಳೆಯಲು ತಮಗೆ ಸಹಕರಿಸಬೇಕೆಂಬ ಪ್ರಧಾನಿ ನರೇಂದ್ರ ಮೋದಿ ಅವರ ಭಾವನಾತ್ಮಕ ಮನವಿಯನ್ನು ಬೆಂಬಲಿಸದ ಬಿಜೆಪಿ ಮಿತ್ರ ಪಕ್ಷ ಶಿವಸೇನೆ, ಕೇಂದ್ರ ಸರ್ಕಾರದ ನೋಟುಗಳ ರದ್ದತಿಯ ಕ್ರಮದಿಂದ ಆರ್ಥಿಕ ಅರಾಜಕತೆ ಉಂಟಾಗಿದೆ ಎಂದು ಹೇಳಿದೆ.
ಶಿವಸೇನೆ ಮುಖಂಡ ಉದ್ಧವ್ ಠಾಕ್ರೆ
ಶಿವಸೇನೆ ಮುಖಂಡ ಉದ್ಧವ್ ಠಾಕ್ರೆ
Updated on: 
ಮುಂಬೈ: ಅಕ್ರಮ ಹಣವನ್ನು ಬಯಲಿಗೆಳೆಯಲು ತಮಗೆ ಸಹಕರಿಸಬೇಕೆಂಬ ಪ್ರಧಾನಿ ನರೇಂದ್ರ ಮೋದಿ ಅವರ ಭಾವನಾತ್ಮಕ ಮನವಿಯನ್ನು ಬೆಂಬಲಿಸದ ಬಿಜೆಪಿ ಮಿತ್ರ ಪಕ್ಷ ಶಿವಸೇನೆ, ಕೇಂದ್ರ ಸರ್ಕಾರದ ನೋಟುಗಳ ರದ್ದತಿಯ ಕ್ರಮದಿಂದ ಆರ್ಥಿಕ ಅರಾಜಕತೆ ಉಂಟಾಗಿದೆ ಎಂದು ಹೇಳಿದೆ. 
ನೋಟುಗಳ ರದ್ದತಿಯನ್ನು ವ್ಯವಸ್ಥಿತವಾಗಿ ಜಾರಿ ಮಾಡಲು ಕೇಂದ್ರ ಸರ್ಕಾರ ವಿಫಲವಾಗಿದೆ, ಮೋದಿ ಅವರ ನಡೆ ಕಪ್ಪುಹಣ ಹೊಂದಿರದ ಸಾಮಾನ್ಯ ಜನರರಿಗೂ ಘಾಸಿ ಉಂಟುಮಾಡಿದೆ, ಕಪ್ಪುಹಣ ಹೊಂದಿರುವ ಕೆಲವು ವ್ಯಕ್ತಿಗಳು ಅದನ್ನು ಸುರಕ್ಷಿತವಾಗಿ ವಿದೇಶಿ ಬ್ಯಾಂಕ್ ಗಳಲ್ಲಿ ಇರಿಸಿದ್ದಾರೆ ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾ ಪತ್ರಿಕೆಯಲ್ಲಿ ಬರೆದಿದೆ. 
ಮೋದಿ ವಿರುದ್ಧದ ವಾಗ್ದಾಳಿಯನ್ನು ಮುಂದುವರೆಸಿರುವ ಶಿವಸೇನೆ, ನರೇಂದ್ರ ಮೋದಿ ಅವರು ಪಾಕಿಸ್ತಾನದ ವಿರುದ್ಧ ಕಾರ್ಯಾಚರಣೆ ಮಾಡುವುದನ್ನು ಬಿಟ್ಟು ಭಾರತೀಯ ನಾಗರಿಕರ ವಿರುದ್ಧವೇ ಕಾರ್ಯಾಚರಣೆ ನಡೆಸಲು ಮುಂದಾಗಿದ್ದಾರೆ. ಮೋದಿ ನೇತೃತ್ವದ ಸರ್ಕಾರ ಕೈಗೊಂಡಿರುವ ಕ್ರಮದಿಂದ 125 ಕೋಟಿ ಜನರು ಆಹಾರ ನೀರು ಇಲ್ಲದೇ ಕ್ಯೂನಲ್ಲಿ ನಿಲ್ಲಬೇಕಾಗಿ ಬಂದಿದೆ, ಇಷ್ಟೆಲ್ಲಾ ಆದರೂ ಜನರು ನಿಮ್ಮನ್ನು ಮುಂದಿನ ದಿನಗಳಲ್ಲೂ ಬೆಂಬಲಿಸಬೇಕು ಎನ್ನುತ್ತೀರಾ? ಎಂದು ಶಿವಸೇನೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com