

ಮುಂಬಯಿ: ಕೊಳಚೆ ಗುಂಡಿಗೆ ಬಿದ್ದು 4 ವರ್ಷದ ಹೆಣ್ಣುಮಗು ಸಾವನ್ನಪ್ಪಿರುವ ಘಟನೆ ಮುಂಬಯಿಯ ಕುಲಾರ್ ನಲ್ಲಿ ನಡೆದಿದೆ.
ಅಕ್ಷತಾ ಕಮಲೇಶ್ ಪಾಲ್ ಮೃತ ದುರ್ದೈವಿ, ನಿನ್ನೆ ಮದ್ಯಾಹ್ನ ಮನೆಗೆ ವಾಪಲಾಗುತ್ತಿರುವಾಗ ಆಕಸ್ಮಿಕವಾಗಿ ಕೊಳಚೆ ಗುಂಡಿಗೆ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ದಳ ಸಿಬ್ಬಂದಿ ಬಾಲಕಿಯ ಮೃತ ದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಆಕಸ್ಮಿಕ ಸಾವು ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.