ಹಿಂದೂಗಳ ಮೇಲಿನ ದೌರ್ಜನ್ಯದ ವಿರುದ್ಧ ಮುಸ್ಲಿಮರು ದನಿ ಎತ್ತಬೇಕು: ಗುಲಾಮ್ ನಬಿ ಆಜಾದ್

ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ ಹಿಂದೂಗಳ ಮೇಲೆ ದೌರ್ಜನ್ಯಗಳನ್ನು ನಡೆಸಲಾಗುತ್ತಿದ್ದು, ಹಿಂದೂಗಳ ಮೇಲಿನ ದೌರ್ಜನ್ಯದ ವಿರುದ್ಧ ಮುಸ್ಲಿಮರು ದನಿ ಎತ್ತಬೇಕಿದೆ ಎಂದು ಕಾಂಗ್ರೆಸ್ ನಾಯಕ ಗುಲಾಮ್ ನಬಿ ಆಜಾದ್ ಅವರು ಮಂಗಳವಾರ...
ಕಾಂಗ್ರೆಸ್ ನಾಯಕ ಗುಲಾಮ್ ನಬಿ ಆಜಾದ್
ಕಾಂಗ್ರೆಸ್ ನಾಯಕ ಗುಲಾಮ್ ನಬಿ ಆಜಾದ್
Updated on: 

ನವದೆಹಲಿ: ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ ಹಿಂದೂಗಳ ಮೇಲೆ ದೌರ್ಜನ್ಯಗಳನ್ನು ನಡೆಸಲಾಗುತ್ತಿದ್ದು, ಹಿಂದೂಗಳ ಮೇಲಿನ ದೌರ್ಜನ್ಯದ ವಿರುದ್ಧ ಮುಸ್ಲಿಮರು ದನಿ ಎತ್ತಬೇಕಿದೆ ಎಂದು ಕಾಂಗ್ರೆಸ್ ನಾಯಕ ಗುಲಾಮ್ ನಬಿ ಆಜಾದ್ ಅವರು ಮಂಗಳವಾರ ಹೇಳಿದ್ದಾರೆ.

ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಯುವ ಮುಸ್ಲಿಂ ಪಾತ್ರವನ್ನು ಬಲಪಡಿಸುವಿಕೆ ಎಂಬ ವಿಚಾರ ಕುರಿತಂತೆ ನಿನ್ನೆಯಷ್ಟೇ ನ್ಯಾಷನಲ್ ಟ್ರೈಕಲರ್ ಅಸೋಸಿಯೇಷನ್ ಆಫ್ ಇಂಡಿಯಾ ವಿಚಾರ ಸಂಕಿರಣವೊಂದನ್ನು ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಗುಲಾಮ್ ನಬಿ ಆಜಾದ್ ಅವರು ಹಾಜರಿದ್ದರು.

ವಿಚಾರ ಸಂಕಿರಣದಲ್ಲಿ ಮಾತನಾಡಿದ್ದ ಗುಲಾಮ್ ನಬಿ ಆಜಾದ್ ಅವರು, ಮುಸ್ಲಿಮರ ವಿರುದ್ಧ ಸಾಕಷ್ಟು ದೌರ್ಜನ್ಯಗಳು ನಡೆಯುತ್ತಿವೆ. ದಾದ್ರಿಯಲ್ಲಿ ನಡೆದ ಪ್ರಕರಣ ಹಾಗೂ ಜಾರ್ಖಾಂಡ್ ನಲ್ಲಿ ಇಬ್ಬರು ಯುವಕರಿಗೆ ಥಳಿತ ಪ್ರಕರಣಗಳನ್ನು ಗಮನಿಸಬಹುದಾಗಿದೆ. ಇದೀಗ ಹಿಂದೂಗಳ ಮೇಲೆಯೂ ದೌರ್ಜನ್ಯಗಳು ನಡೆಯುತ್ತಿವೆ. ಹಿಂದೂಗಳ ನಡೆಯುತ್ತಿರುವ ದೌರ್ಜನ್ಯಗಳನ್ನು ಪ್ರತೀನಿತ್ಯ ನಾವು ಟಿವಿಗಳಲ್ಲಿ ನೋಡುತ್ತಿದ್ದೇವೆ. ಪಾಕಿಸ್ತಾನ ಹಾಗೂ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಈ ರೀತಿಯ ದೌರ್ಜನ್ಯಗಳು ನಡೆದಾಗ ನಾವೇಕೆ ನಮ್ಮ ದನಿಯನ್ನು ಎತ್ತುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ಇದೇ ವೇಳೆ ಕೇಂದ್ರದ ಆಡಳಿತಾರೂಢ ಎನ್ ಡಿಎ ಸರ್ಕಾರದ ವಿರುದ್ದ ಕಿಡಿಕಾರಿರುವ ಅವರು, ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪ್ರಜಾಪ್ರಭುತ್ವ ಎಂಬುದು ದೇಶದಲ್ಲಿ ಕಣ್ಮರೆಯಾಗುತ್ತಿದೆ. ನೆರೆರಾಷ್ಟ್ರದಲ್ಲಿ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳ ವಿರುದ್ದ ಮುಸ್ಲಿಮರು ದನಿ ಎತ್ತಿದ್ದೇ ಆದರೆ, ಬಿಜೆಪಿಯ ಮುಸ್ಲಿಂ ವಿರೋಧಿ ತಂತ್ರಗಳು ನಾಶವಾಗುತ್ತದೆ. ನಮ್ಮ ಬೆನ್ನಿಗೆ ಹಿಂದೂಗಳು ಹೇಗೆ ನಿಂತಿದ್ದಾರೋ ಹಾಗೆಯೇ ನಾವೂ ಕೂಡ ನಿಲ್ಲಬೇಕು. ಅನ್ಯಾಯದ ವಿರುದ್ಧ ದನಿಯೆತ್ತಬೇಕು ಎಂದಿದ್ದಾರೆ.

ನೋಟು ನಿಷೇಧ ಕುರಿತಂತೆ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಕಪ್ಪುಹಣ ಹೆಸರಿನಲ್ಲಿ ಭಾರತವನ್ನು ಸಂಕಷ್ಟಕ್ಕೆ ಸಿಲುಕಿಸಲಾಗುತ್ತಿದೆ. ಇಂದು ಯಾವುದೇ ದಿನಪತ್ರಿಕೆಗಳು ಹಾಗೂ ಟಿವಿಗಳನ್ನು ನೋಡಿದಾಗ ಎಲ್ಲೆಡೆಯೂ ಮೋದಿಯವರೇ ಕಾಣುತ್ತಿದ್ದಾರೆ. ವಿರೋಧಪಕ್ಷಗಳ ಸುದ್ದಿಗಳು ಎಲ್ಲಿಯೂ ಕಾಣಿಸುತ್ತಿಲ್ಲ. ನಿಷ್ಪಕ್ಷಪಾತ ಮಾಧ್ಯಮಗಳು ಶಾಶ್ವತವಾಗಿರುವುದಿಲ್ಲ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com