ಏರ್ ಇಂಡಿಯಾ ವಿಮಾನದ ಊಟದಲ್ಲಿ ಸತ್ತ ಜಿರಳೆ ಪತ್ತೆ

ಏರ್‌ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕರೊಬ್ಬರಿಗೆ ನೀಡಿದ್ದ ಊಟದಲ್ಲಿ ಸತ್ತ ಜಿರಳೆ ಪತ್ತೆಯಾಗಿದೆ....
ಏರ್ ಇಂಡಿಯಾ ವಿಮಾನದಲ್ಲಿ ನೀಡಿದ್ಧ ಊಟದಲ್ಲಿ ಪತ್ತೆಯಾದ ಜಿರಳೆ
ಏರ್ ಇಂಡಿಯಾ ವಿಮಾನದಲ್ಲಿ ನೀಡಿದ್ಧ ಊಟದಲ್ಲಿ ಪತ್ತೆಯಾದ ಜಿರಳೆ
Updated on

ಹೈದರಾಬಾದ್: ಏರ್‌ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕರೊಬ್ಬರಿಗೆ ನೀಡಿದ್ದ ಊಟದಲ್ಲಿ ಸತ್ತ ಜಿರಳೆ ಪತ್ತೆಯಾಗಿದೆ.

ಹೈದರಾಬಾದ್‌ನಿಂದ ನವದೆಹಲಿಮೂಲಕ ಶಿಕಾಗೊಗೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ನಡೆದಿರುವ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ವಿಮಾನಯಾನ ಸಂಸ್ಥೆ ತನಿಖೆಗೆ ಆದೇಶಿಸಿದೆ.

ವಿಮಾನದಲ್ಲಿ ಆಹಾರ ಸರಬರಾಜು ನಿರ್ವಹಿಸುತ್ತಿರುವ ಕೇಟರರ್‌ಗೂ ತಕ್ಷಣ ನೋಟಿಸ್‌ ನೀಡಿದೆ. ಸಂತ್ರಸ್ತ ಪ್ರಯಾಣಿಕ ರಾಹುಲ್‌ ರಘುವಂಶಿ ಅವರು ಊಟದಲ್ಲಿ ಜಿರಳೆ ಇರುವುದನ್ನು ಚಿತ್ರ ಸಮೇತ ಟ್ವೀಟ್‌ ಮಾಡಿದ್ದಾರೆ.

ಏರ್‌ ಇಂಡಿಯಾವು ಈ ಪ್ರಮಾದಕ್ಕಾಗಿ ಪ್ರಯಾಣಿಕರಲ್ಲಿ ಕ್ಷಮೆ ಯಾಚಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದೆ. ಜೊತೆಗೆ ಮುಂಬಯಿ ಮೂಲದ ಗೌರಮೇಟ್ ಸಂಸ್ಥೆಗೆ 1 ಲಕ್ಷ ರೂ ದಂಡ ನೀಡಿ ಎಚ್ಚರಿಕೆ ನೀಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com