ಭಾರತ ಅತ್ಯಾಧುನಿಕ ಎಂ777 ಹೊವಿಟ್ಜರ್ ಖರೀದಿ! ಚೀನಾಗೆ ನಡುಕ

ಅತ್ಯಾಧುನಿಕ ಎಂ777 ಹೊವಿಟ್ಜರ್ ತೋಪುಗಳನ್ನು ಖರೀದಿಸಲು ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ...
ಎಂ777 ಹೂವಿಟ್ಜರ್
ಎಂ777 ಹೂವಿಟ್ಜರ್
ನವದೆಹಲಿ: ಅತ್ಯಾಧುನಿಕ ಎಂ777 ಹೊವಿಟ್ಜರ್ ತೋಪುಗಳನ್ನು ಖರೀದಿಸಲು ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭದ್ರತೆಗೆ ಸಂಬಂಧಿಸಿದ ಸಂಪುಟ ಸಮಿತಿ ಒಪ್ಪಿಗೆ ನೀಡಿದ್ದು ಈ ಮೂಲಕ ಗಡಿಯಲ್ಲಿ ಆಗಾಗ ಕಿರಿಕಿರಿ ನೀಡು ಚೀನಾಗೆ ನಡುಕ ಹುಟ್ಟಿಸಲು ಭಾರತ ದಿಟ್ಟ ನಿರ್ಧಾರ ಕೈಗೊಂಡಿದೆ. 
ಅಮೆರಿಕ ನಿರ್ಮಾಣದ 145 ಅತ್ಯಾಧುನಿಕ ಎಂ777 ಹೂವಿಟ್ಜರ್ ತೋಪುಗಳನ್ನು 5 ಸಾವಿರ ಕೋಟಿ ರೂಪಾಯಿ ಮೊತ್ತದಲ್ಲಿ ಖರೀದಿಸಲು ನಿರ್ಧರಿಸಲಾಗಿದ್ದು ಮುಂದಿನ ವಾರವೇ ಅಮೆರಿಕದೊಂದಿಗೆ ಒಡಂಬಡಿಕೆ ಏರ್ಪಡುವ ಸಾಧ್ಯತೆ ಇದೆ. 
ಪರಿಸ್ಥಿತಿಗೆ ತಕ್ಕಂತೆ ಈ ತೋಪುಗಳನ್ನು ಬಳಸಿಕೊಳ್ಳಬಹುದಾಗಿದೆ. ಭೂಮಿ ಹಾಗೂ ವೈಮಾನಿಕವಾಗಿ ಈ ತೋಪಿನ ಮೂಲಕ ದಾಳಿ ನಡೆಸಬಹುದು. ಅತ್ಯಂತ ಕಡಿದಾದ ಪ್ರದೇಶದಲ್ಲೂ ಈ ತೋಪುಗಳನ್ನು ಸಾಗಿಸಬಹುದಾಗಿದೆ. ಬಿಡಿ ಭಾಗಗಳಾಗಿ ವಿಭಜಿಸಿ, ಸ್ಥಳಕ್ಕೆ ಕೊಂಡೊಯ್ದು ನಂತರ ಜೋಡಿಸಬಹುದು. 
ಬಿಎಇ ಸಿಸ್ಟಮ್ಸ್ ಎಂಬ ಕಂಪನಿ ಎಂ777 ಹೊವಿಟ್ಜರ್ ತೋಪುಗಳನ್ನು ಉತ್ಪಾದಿಸುತ್ತದೆ. 145ರಲ್ಲಿ 25 ತೋಪುಗಳು ಕಂಪನಿಯ ಅಮೆರಿಕ ಘಟಕದಲ್ಲಿ ತಯಾರಾಗಲಿದ್ದು ಇನ್ನುಳಿದ 120 ತೋಪುಗಳನ್ನು ಮೇಕ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ ಭಾರತದಲ್ಲೇ ತಯಾರಾಗಲಿವೆ. ಈ ಕುರಿತು ಮಹಿಂದ್ರಾ ಹಾಗೂ ಬಿಎಇ ನಡುವೆ ಒಪ್ಪಂದ ಏರ್ಪಡಲಿದೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com