ಪಾಕ್ ಕಲಾವಿದರನ್ನು ಮತ್ತೆ ಭಾರತಕ್ಕೆ ಆಹ್ವಾನಿಸಬೇಕು: ಶಶಿ ತರೂರ್

ಪಾಕಿಸ್ತಾನ ಕಲಾವಿದರಿಗೆ ಭಾರತದಲ್ಲಿ ನಿಷೇಧ ಹೇರಬೇಕೆಂಬ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಆಗ್ರಹಕ್ಕೆ ಕಾಂಗ್ರೆಸ್ ನಾಯಕ ಶಶಿ ತರೂರ್ ಅಸಮಾಧಾನ ವ್ಯಕ್ತಪಡಿಸಿದ್ದು, ಪಾಕಿಸ್ತಾನ ಕಲಾವಿದರನ್ನು ಮತ್ತೆ ಭಾರತಕ್ಕೆ ಆಹ್ವಾನಿಸಬೇಕೆಂದು...
ಕಾಂಗ್ರೆಸ್ ನಾಯಕ ಶಶಿ ತರೂರ್
ಕಾಂಗ್ರೆಸ್ ನಾಯಕ ಶಶಿ ತರೂರ್

ಮುಂಬೈ: ಪಾಕಿಸ್ತಾನ ಕಲಾವಿದರಿಗೆ ಭಾರತದಲ್ಲಿ ನಿಷೇಧ ಹೇರಬೇಕೆಂಬ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಆಗ್ರಹಕ್ಕೆ ಕಾಂಗ್ರೆಸ್ ನಾಯಕ ಶಶಿ ತರೂರ್ ಅಸಮಾಧಾನ ವ್ಯಕ್ತಪಡಿಸಿದ್ದು, ಪಾಕಿಸ್ತಾನ ಕಲಾವಿದರನ್ನು ಮತ್ತೆ ಭಾರತಕ್ಕೆ ಆಹ್ವಾನಿಸಬೇಕೆಂದು ಹೇಳಿದ್ದಾರೆ.

ಟಾಟಾ ಲಿಚರೇಚರ್ ಲೈವ್ ಫೆಸ್ಟಿವಲ್ ನಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿರುವ ಅವರು, ಪಾಕಿಸ್ತಾನ ನಟರನ್ನು ಭಾರತಕ್ಕೆ ಮತ್ತೆ ಆಹ್ವಾನಿಸಬೇಕು. ಇದರಿಂದ ದ್ವಿಪಕ್ಷೀಯ ಸಂಬಂಧಗಳು ಗಟ್ಟಿಗೊಳ್ಳುತ್ತದೆ ಎಂದು ಹೇಳಿದ್ದಾರೆ.

ಪಾಕಿಸ್ತಾನದಲ್ಲಿರುವ ಸೃಜನಶೀಲ ಜನರು, ಕಲಾವಿದರು ಹಾಗೂ ಪ್ರಮಾಣಿಕ ಉದ್ಯಮಿಗಳನ್ನು ಭಾರತಕ್ಕೆ ಆಹ್ವಾನಿಸಬೇಕಿದೆ. ಪಾಕಿಸ್ತಾನದಿಂದ ಭಾರತಕ್ಕೆ ಬರುವ ಜನರಿಗೆ ತವರಿನಂತಹ ವಾತಾವರಣವನ್ನು ನಿರ್ಮಾಣ ಮಾಡಬೇಕಿದೆ. ಉಭಯ ದೇಶಗಳ ನಡುವಿನ ದ್ವೇಷ ನಮ್ಮ ಮನಃಸ್ಥಿತಿ ಮೂಲಕ ಬದಲಾಗಬೇಕೆ ವಿನಃ ನೀತಿಗಳ ಮೂಲಕವಲ್ಲ.

ಜನರ ನಡುವಿನ ಸಹಕಾರಗಳು ಎರಡು ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ಹೀಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬರುವ ಕಲಾವಿದರು, ಫ್ಯಾಶನ್ ಡಿಸೈನರ್ ಗಳು ಹಾಗೂ ಪ್ರಾಮಾಣಿಕ ಉದ್ಯಮಿಗಳಿಗೆ ತವರಿನ ರೀತಿಯಲ್ಲಿ ಭಾವನೆ ಹುಟ್ಟುವಂತೆ ವಾತಾವರಣವನ್ನು ನಿರ್ಮಾಣ ಮಾಡಬೇಕಿದೆ ಎಂದಿದ್ದಾರೆ.

ಇದೇ ವೇಳೆ ಪಾಕಿಸ್ತಾನ ಕಲಾವಿದ ಫವಾದ್ ಖಾನ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ 'ಎ ದಿಲ್ ಹೇ ಮುಷ್ಕಿಲ್' ಚಿತ್ರ ವಿವಾದ ಕುರಿತಂತ ಪ್ರತಿಕ್ರಿಯೆ ನೀಡಿರುವ ಅವರು, ಕಾಂಗ್ರೆಸ್ ಮುಖ್ಯಮಂತ್ರಿಗಳು ಯಾರೂ ಈ ರೀತಿಯಾಗಿ ನಡೆದುಕೊಂಡಿರಲಿಲ್ಲ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com