ಉತ್ತರ ಪ್ರದೇಶ ರೈಲು ದುರಂತ: ಪರಿಹಾರ ಘೋಷಿಸಿದ ಮಧ್ಯಪ್ರದೇಶ ಮುಖ್ಯಮಂತ್ರಿ

ಉತ್ತರಪ್ರದೇಶದ ಪುಖರಾಯಾ ಬಳಿ ಸಂಭವಿಸಿದ ಭೀಕರ ರೈಲು ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ಸಂತಾಪ ಸೂಚಿಸಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು, ಮೃತರ ಕುಟುಂಬಗಳಿಗೆ ರು. 2 ಲಕ್ಷ ಪರಿಹಾರ...
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್

ಭೂಪಾಲ್: ಉತ್ತರಪ್ರದೇಶದ ಪುಖರಾಯಾ ಬಳಿ ಸಂಭವಿಸಿದ ಭೀಕರ ರೈಲು ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ಸಂತಾಪ ಸೂಚಿಸಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು, ಮೃತರ ಕುಟುಂಬಗಳಿಗೆ ರು. 2 ಲಕ್ಷ ಪರಿಹಾರ ಧನವನ್ನು ಘೋಷಣೆ ಮಾಡಿದ್ದಾರೆ.

ದುರ್ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ದುರಂತದಲ್ಲಿ ಸಾವನ್ನಪ್ಪಿದ ಕುಟುಂಬಗಳಿಗೆ ತಲಾ ರು.2 ಲಕ್ಷ ಹಣವನ್ನು ಪರಿಹಾರವಾಗಿ ಮಧ್ಯಪ್ರದೇಶ ಸರ್ಕಾರದ ವತಿಯಿಂದ ನೀಡಲಾಗುತ್ತದೆ ಹಾಗೂ ಗಾಯಾಳುಗಳಿಗೆ ರು.50 ಸಾವಿರ ಹಣವನ್ನು ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ಈಗಾಗಲೇ ಸ್ಥಳಕ್ಕೆ ಛತ್ತರ್ಪುರ ಎಸ್ ಪಿ, ಜಿಲ್ಲಾಧಿಕಾರಿ, ರಕ್ಷಣಾ ದಳ ಹಾಗೂ ವೈದ್ಯಕೀಯ ದಳವನ್ನು ಕಳುಹಿಸಲಾಗಿದ್ದು, ಗಾಯಾಳುಗಳಿಗೆ ಉಚಿತವಾಗಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮೃತರು ಹಾಗೂ ಗಾಯಾಳುಗಳ ಕುಟುಂಬಗಳ ಜೊತೆಗೆ ಸರ್ಕಾರವಿರುತ್ತದೆ.

ಈಗಾಗಲೇ ನಾವು ಸಹಾಯವಾಣಿ ಕೇಂದ್ರಗಳನ್ನು ಆರಂಭ ಮಾಡಲಾಗಿದ್ದು, ಭೋಪಾಲ್ ನ ಜನರು, 1079 ಸಂಖ್ಯೆ ಮೂಲಕ ಸಂಪರ್ಕ ಮಾಡಬಹುದಾಗಿದೆ. ಈ ದೂರವಾಣಿ ಮೂಲಕ ಜನರಿಗೆ ಸಹಾರ ಹಾಗೂ ಪರಿಹಾರ ಕೆಲಸಗಳನ್ನು ಸರ್ಕಾರ ಮಾಡಲಿದೆ. ಇದಲ್ಲದೆ, ಛತ್ತರ್ಪುರ ದಲ್ಲೂ 07682 241500.ಸಹಾಯವಾಣಿ ಕೇಂದ್ರವನ್ನು ತೆರಯಲಾಗಿದೆ. ಜನರ ಕಷ್ಟವನ್ನು ಕಡಿಮೆ ಮಾಡಲು ಸರ್ಕಾರ ಪ್ರಯತ್ನ ಪಡುತ್ತಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com