ಗಡಿಯಲ್ಲಿನ ವಾಸ್ತವಾಂಶದ ಕುರಿತು ಪರಿಕ್ಕರ್'ಗೆ ಅರಿವೇ ಇಲ್ಲ: ಕಾಂಗ್ರೆಸ್

ಗಡಿ ಪರಿಸ್ಥಿತಿ ಕುರಿತಂತೆ ಮಾತನಾಡುತ್ತಿರುವ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರಿಗೆ ಗಡಿಯಲ್ಲಿನ ವಾಸ್ತವಾಂಶದ ಕುರಿತು ಅರಿವೇ ಇಲ್ಲ ಎಂದು ಕಾಂಗ್ರೆಸ್ ಶನಿವಾರ ಹೇಳಿದೆ...
ಕಾಂಗ್ರೆಸ್ ನಾಯಕ ಪಿ.ಸಿ. ಚಾಕೋ
ಕಾಂಗ್ರೆಸ್ ನಾಯಕ ಪಿ.ಸಿ. ಚಾಕೋ

ನವದೆಹಲಿ: ಗಡಿ ಪರಿಸ್ಥಿತಿ ಕುರಿತಂತೆ ಮಾತನಾಡುತ್ತಿರುವ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರಿಗೆ  ಗಡಿಯಲ್ಲಿನ ವಾಸ್ತವಾಂಶದ ಕುರಿತು ಅರಿವೇ ಇಲ್ಲ ಎಂದು ಕಾಂಗ್ರೆಸ್ ಶನಿವಾರ ಹೇಳಿದೆ.

ನಿನ್ನೆಯಷ್ಟೇ ಗೋವಾದ ರ್ಯಾಲಿಯೊಂದರಲ್ಲಿ ಮಾತನಾಡಿದ್ದ ಮನೋಹರ್ ಪರಿಕ್ಕರ್ ಅವರು, ಸೀಮಿತ ದಾಳಿ ಬಳಿಕ ಗಡಿಯಲ್ಲಿ ಪರಿಸ್ಥಿತಿ ಉದ್ನಿಗ್ನವಾಗಿತ್ತು. ಪಾಕಿಸ್ತಾನ ಸೈನಿಕರು ಪದೇಪದೇ ಕದನ ವಿರಾಮ ಉಲ್ಲಂಘನೆ ಮಾಡುವುದು, ಅಪ್ರಚೋದಿತ ಗುಂಡಿನ ದಾಳಿಯನ್ನು ನಡೆಸುತ್ತಿದ್ದರು. ಪಾಕಿಸ್ತಾನದ ಈ ವರ್ತನೆಗೆ ಭಾರತೀಯ ಸೇನೆ ದಿಟ್ಟ ಉತ್ತರವನ್ನು ನೀಡಿದೆ. ಅವರ ದಾಳಿಗೆ ನಾವು ನೀಡುತ್ತಿದ್ದ ಪ್ರತ್ಯುತ್ತರ ಅತ್ಯಂತ ಶಕ್ತಿಶಾಲಿಯಾಗಿತ್ತು. ಹೀಗಾಗಿ ಗಡಿಯಲ್ಲಿ ಕಳೆದೆರಡು ದಿನಗಳಿಂದ ಗುಂಡಿನ ದಾಳಿಗಳು ನಡೆಯುತ್ತಿಲ್ಲ ಎಂದು ಹೇಳಿದ್ದರು.

ಪರಿಕ್ಕರ್ ಅವರ ಈ ಹೇಳಿಕೆಗೆ ತೀವ್ರವಾಗಿ ಕಿಡಿಕಾಡಿರುವ ಕಾಂಗ್ರೆಸ್ ನಾಯಕ ಪಿ.ಸಿ. ಚಾಕೋ ಅವರು, ಗಡಿಯಲ್ಲಿನ ವಾಸ್ತವಾಂಶದ ಬಗ್ಗೆ ಹಾಗೂ ಭಾರತೀಯ ಸೇನೆ ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಪರಿಕ್ಕರ್ ಅವರಿಗೆ ಅರಿವಿಲ್ಲ ಎಂದು ತಿಳಿಸಿದ್ದಾರೆ.

ಗಡಿಯಲ್ಲಿ ಏನಾಗುತ್ತಿದೆ ಎಂಬುದರ ಅರಿವೇ ಇಲ್ಲದ ರಕ್ಷಣಾ ಸಚಿವರನ್ನು ನಾವು ಹೊಂದಿದ್ದೇವೆ. ಸೀಮಿತ ದಾಳಿ ನಡೆಸಿದ ಬಳಿಕ ಪಾಕಸ್ತಾನದಿಂದ ಸಾಕಷ್ಟು ಸಮಸ್ಯೆಗಳನ್ನು ಭಾರತೀಯ ಯೋಧರು ಎದುರಿಸುತ್ತಿದ್ದಾರೆ. ಎಡೆಬಿಡದೆ ಪಾಕಿಸ್ತಾನ ಸೇನೆ ಭಾರತೀಯ ಸೇನಾ ನೆಲೆಗಳ ಮೇಲೆ ಶೆಲ್ ಗಳ ದಾಳಿಯನ್ನು ನಡೆಸುತ್ತಿದೆ. ಭಾರತೀಯ ಯೋಧನ್ನು ಹತ್ಯೆ ಮಾಡುತ್ತಿದ್ದಾರೆ. ಯೋಧನ ದೇಹವನ್ನು ತುಂಡು ತುಂಡು ಮಾಡಿ ಪಾಕಿಸ್ತಾನ ಸೈನಿಕರು ತಮ್ಮ ವಿಕೃತ ರೂಪವನ್ನು ಪ್ರದರ್ಶಿಸುತ್ತಿದ್ದಾರೆ.

ಇಷ್ಟೆಲ್ಲಾ ನಡೆಯುತ್ತಿದ್ದರೂ ನಮ್ಮ ರಕ್ಷಣಾ ಸಚಿವರೂ ಮಾತ್ರ ಗಡಿಯಲ್ಲಿ ಕಳೆದೆರಡು ದಿನಗಳಿಂದ ಗುಂಡಿನ ದಾಳಿ ನಡೆದಿಲ್ಲ ಎಂದು ಹೇಳುತ್ತಿದ್ದಾರೆ. ಗಡಿಯಲ್ಲಿರುವ ವಾಸ್ತವಾಂಶ ಹಾಗೂ ಸೈನಿಕರ ಸಮಸ್ಯೆಗಳನ್ನು ಪರಿಕ್ಕರ್ ಅವರು ಎಷ್ಟರ ಮಟ್ಟಿಗೆ ಅರ್ಥಮಾಡಿಕೊಂಡಿದ್ದಾರೆಂಬುದು ಈ ಹೇಳಿಕೆಯಿಂದಲೇ ತಿಳಿಯುತ್ತಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com