ಭೋಪಾಲ್: ಗುಂಡಿಟ್ಟು ಬಿಜೆಪಿ ಮಹಿಳಾ ಕಾರ್ಯಕರ್ತೆ ಹತ್ಯೆ

ಬಿಜೆಪಿ ಮಹಿಳಾ ಕಾರ್ಯಕರ್ತೆಯೊಬ್ಬರನ್ನು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆಯೊಂದು ಭೋಪಾಲ್ ನಲ್ಲಿ ಬುಧವಾರ ನಡೆದಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಭೋಪಾಲ್: ಬಿಜೆಪಿ ಮಹಿಳಾ ಕಾರ್ಯಕರ್ತೆಯೊಬ್ಬರನ್ನು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆಯೊಂದು ಭೋಪಾಲ್ ನಲ್ಲಿ ಬುಧವಾರ ನಡೆದಿದೆ.

ಜಮಿಲಾ ಖಾನ್ (50) ಹತ್ಯೆಯಾದ ಬಿಜೆಪಿ ಕಾರ್ಯಕರ್ತೆಯಾಗಿದ್ದಾರೆ. ಜಮಿಲಾ ಅವರು ಭೋಪಾಲ್ ನಲ್ಲಿರುವ ಇಂದಿರಾ ಸಹಾಯ್ತಾ ನಗರದ ನಿವಾಸಿಯಾಗಿದ್ದು, ನಿನ್ನೆ ಮನೆಗೆ ಹೋಗುತ್ತಿದ್ದ ಸಮಯದಲ್ಲಿ ಅನಾಮಿಕ ವ್ಯಕ್ತಿಯೋರ್ವ ಜಮಿಲಾ ಅವರ ಮೇಲೆ ಗುಂಡಿ ಹಾರಿಸಿದ್ದಾನೆಂದು ಗೌತಮ್ ನಗರದ ಠಾಣಾಧಿಕಾರಿ ಮುಖ್ತಾರ್ ಖುರೇಶಿ ಅವರು ಹೇಳಿದ್ದಾರೆ.

ವಿಚಾರ ತಿಳಿಯುತ್ತಿದ್ದಂತೆ ಜಮಿಲಾ ಅವರ ಮಗ ಸ್ಥಳಕ್ಕೆ ಆಗಮಿಸಿದ್ದಾನೆ. ಈ ವೇಳೆ ಜಮಿಲಾ ಅವರು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ಆಸ್ಪತ್ರೆಗೆ ದಾಖಲಿಸಿದ್ದಾನೆ. ತಪಾಸಣೆ ನಡೆಸಿದ ವೈದ್ಯರು ಜಮಿಲಾ ಅವರು ಸಾವನ್ನಪ್ಪಿದ್ದಾರೆಂದು ಹೇಳಿದ್ದಾರೆ. ಹತ್ಯೆಯ ಹಿಂದಿರುವ ಉಧ್ದೇಶ ಈ ವರೆಗೂ ತಿಳಿದುಬಂದಿಲ್ಲ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು. ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com