ಧ್ವಜ ಗೌರವ ಕಾರ್ಯಕ್ರಮದ ವೇಳೆ ವಾಘಾ ಗಡಿಯಲ್ಲಿ ಕಲ್ಲು ತೂರಾಟ ನಡೆದಿದ್ದು ನಿಜ: ಬಿಎಸ್ಎಫ್ ಅಧಿಕಾರಿಗಳು
ನವದೆಹಲಿ: ಅಕ್ಟೋಬರ್ 2 ರಂದು ನಡೆದ ಉಭಯ ದೇಶಗಳ ಧ್ವಜ ಗೌರವ ಕಾರ್ಯಕ್ರಮದ ವೇಳೆ ವಾಘಾ ಗಡಿಯಲ್ಲಿ ಕಲ್ಲು ತೂರಾಟ ನಡೆದಿದ್ದು ನಿಜ ಎಂದು ಬಿಎಸ್ಎಫ್ ಅಧಿಕಾರಿಗಳು ಮಂಗಳವಾರ ಸ್ಪಷ್ಟಪಡಿಸಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಬಿಎಸ್ಎಪ್ ಡೈರೆಕ್ಟರ್ ಜನರಲ್ ಕೆ.ಕೆ. ಶರ್ಮಾ ಅವರು, ಅಕ್ಟೋಬರ್. 2ರಂದು ಎಂದಿನಂತೆ ವಾಘಾ ಗಡಿಯಲ್ಲಿ ಧ್ವಜ ಗೌರವ ಕಾರ್ಯಕ್ರಮವನ್ನು ನಡೆಸಲಾಗುತ್ತಿತ್ತು. ಈ ವೇಳೆ ಪಾಕಿಸ್ತಾನದ ಜನರು ಕಲ್ಲು ತೂರಾಟ ನಡೆಸಿ, ಕನಿಷ್ಟ 10 ನಿಮಿಷಗಳ ಕಾಲ ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗಿದ್ದರು ಎಂದು ಹೇಳಿದ್ದಾರೆ.
ಭಾರತೀಯ ಸೇನೆ ಉಗ್ರರ ನೆಲೆಗಳ ಮೇಲೆ ಸೀಮಿತಿ ದಾಳಿ ನಡೆಸಿದ ನಂತರ ಅಂತರಾಷ್ಟ್ರೀಯ ಗಡಿಗಳಲ್ಲಿ ಉದ್ನಿಗ್ನ ವಾತಾವರಣ ನಿರ್ಮಾಣವಾಗಿದೆ. ಆದರೆ, ಯಾವುದೇ ರೀತಿಯ ಗುಂಡಿನ ಚಕಮಕಿಗಳು ನಡೆಯುತ್ತಿಲ್ಲ ಎಂದಿದ್ದಾರೆ.
ಇದೇ ವೇಳೆ ಸೀಮಿತ ದಾಳಿಯ ಬಳಿಕ ಗಡಿಯಲ್ಲಿರುವ ಗ್ರಾಮಸ್ಥರನ್ನು ಬೇರೆಡೆಗೆ ಸ್ಥಳಾಂತರಿಸಲಾಗುತ್ತಿದೆ ಎಂಬ ಸುದ್ದಿ ಕುರಿತಂತೆ ಸ್ಪಷ್ಟನೆ ನೀಡಿರುವ ಅವರು, ಗ್ರಾಮಸ್ಥರನ್ನು ಸ್ಥಳಾಂತರ ಮಾಡುವಂತೆ ಬಿಎಸ್ಎಫ್ ಯಾವುದೇ ಆದೇಶವನ್ನು ನೀಡಿಲ್ಲ ಎಂದು ತಿಳಿಸಿದ್ದಾರೆ.

