
ನವದೆಹಲಿ: ಭಾರತೀಯ ಸೇನೆ ನಡೆಸಿದ ಸೀಮಿತ ದಾಳಿ ಕುರಿತಂತೆ ಸಾಕ್ಷ್ಯಾಧಾರ ಕೇಳಿದರೆ, ಸೇನೆಯ ಸಮಗ್ರತೆಯನ್ನು ಪ್ರಶ್ನಿಸಿದ್ದಂತೆ. ದೇಶ ಉತ್ತಮ ನಾಯಕತ್ವದ ಅಡಿಯಲ್ಲಿರುವುದರಿಂದ ಇದಕ್ಕೆ ಹೆದರಿ ನಾಯಕರು ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆಂದು ರಕ್ಷಣಾ ತಜ್ಞ ಎಸ್.ಆರ್. ಸಿನ್ಹೋ ಅವರು ಬುಧವಾರ ಹೇಳಿದ್ದಾರೆ.
ಸೀಮಿತ ದಾಳಿ ಕುರಿತಂತೆ ಸಾಕ್ಷ್ಯಾಧಾರ ಒದಗಿಸುವಂತೆ ಪ್ರತಿಪಕ್ಷಗಳ ನಾಯಕರು ಆಗ್ರಹಿಸುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಭಾರತದಲ್ಲಿರುವ ಕೆಲ ಪಕ್ಷದ ನಾಯಕರು ಸೇನೆ ನಡೆಸಿದ ಸೀಮಿತ ದಾಳಿ ಕುರಿತಂತೆ ಪ್ರಶ್ನೆ ಏತ್ತುತ್ತಿರುವುದು ಹಾಗೂ ಸಾಕ್ಷ್ಯಾಧಾರ ಕೇಳುತ್ತಿರುವುದರಿಂದ ನಾಚಿಕೆಯಾಗುತ್ತಿದೆ. ಜನಪ್ರಿಯತೆ ಗಳಿಸುವ ಸಲುವಾಗಿ ಕೆಲ ನಾಯಕರು ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆಂದು ಅವರು ಹೇಳಿದ್ದಾರೆ.
ದೇಶ ಉತ್ತಮ ನಾಯಕನ ಅಡಿಯಲ್ಲಿ ಅಭಿವೃದ್ಧಿಗೊಳ್ಳುತ್ತಿದೆ ಎಂಬುದು ಅವರಿಗೆ ಗೊತ್ತಿದೆ. ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂಬುದೂ ಅವರಿಗೆ ಗೊತ್ತಿದೆ. ಹೀಗಾಗಿ ಈ ದಾರಿಯನ್ನು ಬಳಸಿಕೊಂಡು ಜನಪ್ರಿಯತೆಗಳಿಸಲು ಯತ್ನಿಸುತ್ತಿದ್ದಾರೆ. ಪಾಕಿಸ್ತಾನ ಕಣ್ಣಿನಲ್ಲಿ ಅವರು ಧನಾತ್ಮಕ ಪ್ರತಿಕ್ರಿಯೆಗಳನ್ನು ಗಳಿಸುವ ಮೂಲಕ ಗೆಲವು ಸಾಧಿಸುತ್ತಿದ್ದಾರೆಂದು ಸಿನ್ಹೋ ಅವರು ಹೇಳಿದ್ದಾರೆ.
Advertisement