ಜಿಹಾದಿಗಳು-ಸೈನಿಕರ ನಡುವೆ ಭಾರಿ ಗುಂಡಿನ ಕಾಳಗ ನಡೆದಿತ್ತು: ಪಿಒಕೆ ಸ್ಥಳೀಯ ನಿವಾಸಿ ಹೇಳಿಕೆ

ಭಾರತೀಯ ಸೇನೆ ಸೀಮಿತ ದಾಳಿಯನ್ನೇ ನಡೆಸಿಲ್ಲ ಎಂದು ತಿಪ್ಪೆ ಸಾರುತ್ತಿರುವ ಪಾಕಿಸ್ತಾನದ ವಿರುದ್ಧ ಇದೀಗ ಪುರಾವೆಗಳು ಲಭ್ಯವಾಗುತ್ತಿದ್ದು, ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ಸೀಮಿತ ದಾಳಿ ನಡೆಸಿದ್ದು ನಿಜ ಎಂದು ಸ್ವತಃ ಪಿಒಕೆಯಲ್ಲಿರುವ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಭಾರತೀಯ ಸೇನೆ ಸೀಮಿತ ದಾಳಿಯನ್ನೇ ನಡೆಸಿಲ್ಲ ಎಂದು ತಿಪ್ಪೆ ಸಾರುತ್ತಿರುವ ಪಾಕಿಸ್ತಾನದ ವಿರುದ್ಧ ಇದೀಗ ಪುರಾವೆಗಳು ಲಭ್ಯವಾಗುತ್ತಿದ್ದು, ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ಸೀಮಿತ ದಾಳಿ ನಡೆಸಿದ್ದು ನಿಜ ಎಂದು ಸ್ವತಃ ಪಿಒಕೆಯಲ್ಲಿರುವ ಪ್ರತ್ಯಕ್ಷದರ್ಶಿಗಳೇ ಇದೀಗ ಸಾಕ್ಷ್ಯ ನುಡಿದಿದ್ದಾರೆ.

ಸೀಮಿತ ದಾಳಿ ಹಿನ್ನೆಲೆಯಲ್ಲಿ ಖಾಸಗಿ ಪತ್ರಿಕೆಯೊಂದು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ತೆರಳಿ ವರದಿ ಮಾಡಿತ್ತು. ಈ ವೇಳೆ ಭಾರತೀಯ ಸೇನೆ ಸೀಮಿತ ದಾಳಿ ನಡೆಸಿದ್ದು ನಿಜ ಎಂದು ಅಲ್ಲಿನ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆಂದು 'ದಿ ಇಂಡಿಯನ್ ಎಕ್ಸ್'ಪ್ರೆಸ್ ಪತ್ರಿಕೆ' ವರದಿ ಮಾಡಿದೆ.

ಡುಧ್ನಿಯಾಲ್ ನಲ್ಲಿರುವ ಇಬ್ಬರು ಸ್ಥಳೀಯರು ಸೀಮಿತ ದಾಳಿ ಕುರಿತಂತೆ ಸಾಕ್ಷ್ಯ ನುಡಿದಿದ್ದು, ಸೆಪ್ಟೆಂಬರ್ 28 ರಾತ್ರಿ ಮತ್ತು 29 ರಂದು ಭಾರತೀಯ ಸೇನೆ ಹಾಗೂ ಪಾಕಿಸ್ತಾನ ಜಿಹಾದಿಗಳ ನಡುವೆ ಭಾರೀ ಪ್ರಮಾಣದಲ್ಲಿ ಗುಂಡಿನ ಚಕಮಕಿ ನಡೆದಿತ್ತು. ಭಾರತೀಯ ಸೇನೆ ಉಗ್ರರನ್ನು ಹತ್ಯೆ ಮಾಡಿತ್ತು. ಅಲ್-ಹಾವಿ ಬ್ರಿಡ್ಜ್  ಬಳಿ ಉಗ್ರರಿದ್ದ ಹಲವು ತಾಣಗಳನ್ನು ನಾಶಪಡಿಸಿತ್ತು.


ಅಲ್-ಹಾವಿ ಬ್ರಿಡ್ಜ್  ಬಳಿ ಪಾಕಿಸ್ತಾನ ಮೂಲದ ಉಗ್ರರು ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಗಾಗಿ  ಶಸ್ತ್ರಾಸ್ತ್ರಗಳು ಹಾಗೂ ಇನ್ನಿತರೆ ಸ್ಫೋಟಕ ವಸ್ತುಗಳನ್ನು ತಯಾರು ಮಾಡುತ್ತಿದ್ದರು. ಬ್ರಿಡ್ಜ್ ಬಳಿ ನಿಂತರೆ ಈಗಲೂ ನಾಶಗೊಂಡಿರುವ ಜಿಹಾದಿಗಳ ತಾಣಗಳು ಕಾಣಸಿಗುತ್ತವೆ.

ಈ ಸ್ಥಳದ ಮೇಲೆ ಭಾರತೀಯ ಸೇನೆ ದಾಳಿ ಮಾಡಿದ ಉಗ್ರರ ತಾಣಗಳನ್ನು ನಾಶ ಮಾಡಿತ್ತು. ಸೆ.28 ರ ದಾಳಿ ನಂತರ 29ರ ಬೆಳಿಗ್ಗೆ 5-6 ಮೃತದೇಹಗಳು ಸ್ಥಳದಲ್ಲಿದ್ದವು. ಬೆಳಗಿನ ಜಾವ ಟ್ರಕ್ ವೊಂದು ಸ್ಥಳಕ್ಕೆ ಬಂದು ತರಾತುರಿಯಲ್ಲಿ ಮೃತದೇಹಗಳನ್ನು ತೆಗೆದುಕೊಂಡು ಹೋಗಿತ್ತು. ಮೃತದೇಹಗಳನ್ನು ಛಲ್ಹಾನಾದಲ್ಲಿರುವ ಲಷ್ಕರ್ ನೆಲೆಗೆ ತೆಗೆದುಕೊಂಡು ಹೋಗಿರಬಹುದು ಎಂದು ಪ್ರತ್ಯಕ್ಷದರ್ಶಿಗಳು ಹೇಳಿಕೊಂಡಿದ್ದಾರೆ.

ಇನ್ನೂ ಕೆಲ ಮೃತದೇಹಗಳನ್ನು ಸ್ಥಳದಲ್ಲಿಯೇ ಪಾಕಿಸ್ತಾನ ಸೇನೆ ಹಾಗೂ ಇಸಿಸ್ ಉಗ್ರರ ಸಹಾಯದೊಂದಿಗೆ ಸುಟ್ಟು ಹಾಕಲಾಗಿತ್ತು ಎಂದು ಸಾಕ್ಷ್ಯ ನುಡಿದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com