ಕಾಶ್ಮೀರದಲ್ಲಿ ಮತ್ತೆ ಉಗ್ರರ ದಾಳಿ: ತಪ್ಪಿಸಿಕೊಂಡಿದ್ದ ಉಗ್ರರಿಂದಲೇ ದಾಳಿ ಶಂಕೆ

ಅ.2 ರಂದು 46 ರಾಷ್ಟ್ರೀಯ ರೈಫಲ್ಸ್ ಸೇನಾ ಶಿಬಿರದ ಮೇಲೆ ದಾಳಿ ನಡೆಸಿದ ಉಗ್ರರೇ ಗುರುವಾರ ಕುಪ್ವಾರದ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿದ್ದಾರೆಂಬ ಶಂಕೆಗಳು ಇದೀಗ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಶ್ರೀನಗರ: ಅ.2 ರಂದು 46 ರಾಷ್ಟ್ರೀಯ ರೈಫಲ್ಸ್ ಸೇನಾ ಶಿಬಿರದ ಮೇಲೆ ದಾಳಿ ನಡೆಸಿದ ಉಗ್ರರೇ ಗುರುವಾರ ಕುಪ್ವಾರದ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿದ್ದಾರೆಂಬ ಶಂಕೆಗಳು ಇದೀಗ ವ್ಯಕ್ತವಾಗತೊಡಗಿದೆ.

ಭಾರತೀಯ ಸೇನೆಯನ್ನೇ ಗುರಿಯಾಗಿಸಿಟ್ಟುಕೊಂಡು ದಾಳಿ ನಡೆಸಲು ಸಂಚು ರೂಪಿಸುತ್ತಿರುವ ಉಗ್ರರು ಇಂದೂ ಕೂಡ ಕಾಶ್ಮೀರದ ಕುಪ್ವಾರದಲ್ಲಿರುವ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿದ್ದಾರೆ. ಉಗ್ರರ ದಾಳಿಗೆ ದಿಟ್ಟ ಉತ್ತರ ನೀಡುತ್ತಿರುವ ಸೇನೆಯು ಮೂವರು ಉಗ್ರರನ್ನು ಸದೆಬಡಿದಿದ್ದಾರೆ.

ಈ ದಾಳಿ ಕುರಿತಂತೆ ಇದೀಗ ಕೆಲ ಶಂಕೆಗಳು ವ್ಯಕ್ತವಾಗತೊಡಗಿದ್ದು, ಬಾರಾಮೂಲ್ಲಾದ ಸೇನಾ ಶಿಬಿರದ ಮೇಲೆ ದಾಳಿ ನಡೆಸಿ ಸೇನಾ ದಾಳಿಗೆ ಉತ್ತರ ನೀಡಲು ಸಾಧ್ಯವಾಗದೆ ಓಡಿಹೋಗಿದ್ದ ಉಗ್ರರೇ ಇಂದು ದಾಳಿ ನಡೆಸಿರಬಹುದು ಎಂದು ಹೇಳಲಾಗುತ್ತಿದೆ.

ಕುಪ್ವಾರದ ಸೇನಾ ನೆಲೆ ಮೇಲೆ ಇಂದು ಉಗ್ರರು ದಾಳಿ ನಡೆಸಿರುವ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅಧಿಕಾರಿಗಳು, ಬೆಳಗಿನ ಜಾವ 5 ಗಂಟೆ ಸುಮಾರಿಗೆ ಉಗ್ರರು ಸೇನಾ ಕ್ಯಾಂಪ್ ಮೇಲೆ ದಾಳಿ ಮಾಡಿದ್ದರು. ಉಗ್ರರ ದಾಳಿಗೆ ಭಾರತೀಯ ಸೇನೆ ದಿಟ್ಟ ಉತ್ತರವನ್ನು ನೀಡುತ್ತಿದೆ ಎಂದು ಹೇಳಿದ್ದಾರೆ.

ದಾಳಿ ಆರಂಭವಾದಾಗ 15-20 ನಿಮಿಷಗಳ ಕಾಲ ಉಗ್ರರು ಹಾಗೂ ಸೇನೆಯ ನಡುವೆ ನಿರಂತರವಾಗಿ ಗುಂಡಿ ಚಕಮಕಿ ನಡೆದಿತ್ತು. ನಂತರ ಕೆಲಸ ನಿಮಿಷ ಕಾಣೆಯಾದ ಉಗ್ರರು  ಅಡಗಿ ಕುಳಿತುಕೊಂಡು ಸೇನೆಯ ಮೇಲೆ ಮತ್ತೆ ದಾಳಿ ಮಾಡಲು ಆರಂಭಿಸಿದ್ದರು. ಉಗ್ರರಿಗಾಗಿ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com