ಸೇನೆ ಬಿಡುಗಡೆ ಮಾಡಿರುವ ದಾಖಲೆ
ಸೇನೆ ಬಿಡುಗಡೆ ಮಾಡಿರುವ ದಾಖಲೆ

ಹಂದ್ವಾರ ದಾಳಿಕೋರರು ಪಾಕಿಸ್ತಾನದವರು: ಸೇನೆ ಮಾಹಿತಿ

ಹಂದ್ವಾರ 30 ರಾಷ್ಟ್ರೀಯ ರೈಫಲ್ಸ್ ಸೇನಾ ಶಿಬಿರದ ಮೇಲೆ ದಾಳಿ ನಡೆಸಿದ ಉಗ್ರರು ಪಾಕಿಸ್ತಾನ ಮೂಲದವರೇ ಆಗಿದ್ದಾರೆಂದು ಸೇನಾಧಿಕಾರಿಗಳು ಗುರುವಾರ ಮಾಹಿತಿ...

ಕಾಶ್ಮೀರ: ಹಂದ್ವಾರ 30 ರಾಷ್ಟ್ರೀಯ ರೈಫಲ್ಸ್ ಸೇನಾ ಶಿಬಿರದ ಮೇಲೆ ದಾಳಿ ನಡೆಸಿದ ಉಗ್ರರು ಪಾಕಿಸ್ತಾನ ಮೂಲದವರೇ ಆಗಿದ್ದಾರೆಂದು ಸೇನಾಧಿಕಾರಿಗಳು ಗುರುವಾರ ಮಾಹಿತಿ ನೀಡಿದ್ದಾರೆ.

ಭಾರತೀಯ ಸೇನೆಯನ್ನೇ ಗುರಿಯಾಗಿಸಿಟ್ಟುಕೊಂಡು ದಾಳಿ ನಡೆಸಲು ಸಂಚು ರೂಪಿಸುತ್ತಿರುವ ಉಗ್ರರು ಇಂದೂ ಕೂಡ ಹಂದ್ವಾರದಲ್ಲಿರುವ ಸೇನಾ ನೆಲೆ ಮೇಲೆ ದಾಳಿ ನಡೆಸಿದ್ದಾರೆ. ಉಗ್ರರ ದಾಳಿಗೆ ದಿಟ್ಟ ಉತ್ತರ ನೀಡುತ್ತಿರುವ ಸೇನೆಯು ಇದೀಗ ಮೂವರು ಉಗ್ರರನ್ನು ಸದೆಬಡಿದಿದ್ದಾರೆ. ದಾಳಿಯಲ್ಲಿ ಇಬ್ಬರು ಯೋಧರು ಗಾಯಗೊಂಡಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.

ಸೇನಾ ಶಿಬಿರ ಅತ್ಯಂತ ದೊಡ್ಡ ಪ್ರದೇಶವನ್ನು ಹೊಂದಿದ್ದು, ಮತ್ತಷ್ಟು ಉಗ್ರರು ಅಡಗಿ ಕುಳಿತಿರುವ ಶಂಕೆಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸೇನೆ ತನ್ನ ಕಾರ್ಯಾಚರಣೆಯನ್ನು ಮುಂದುವರೆಸುತ್ತಿದೆ.

ದಾಳಿ ಕುರಿತಂತೆ ಮಾಹಿತಿ ನೀಡಿರುವ ಸೇನಾಧಿಕಾರಿಗಳು, ಉಗ್ರರು ಸೇನಾ ಶಿಬಿರದ ಬಳಿ ಸೇನಾ ಸಮವಸ್ತ್ರವನ್ನು ಧರಿಸಿ ಬಂದಿದ್ದರು. ಉಗ್ರರು ಭಾರೀ ಸಿದ್ಧತೆಗಳೊಂದಿಗೆ ಬಂದಿದ್ದು, ಆತ್ಮಹತ್ಯಾ ದಾಳಿ ನಡೆಸಲು ಸಂಚು ರೂಪಿಸಿದ್ದರು. ಆದರೆ, ಈ ದಾಳಿಯನ್ನು ಸೇನೆ ವಿಫಲಗೊಳಿಸಿದೆ ಎಂದು ಹೇಳಿದ್ದಾರೆ.

ಹತ್ಯೆಯಾದ ಉಗ್ರರ ಬಳಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. 2 ಮೊಬೈಲ್, 4 ರೇಡಿಯೋ ಸೆಟ್ ಗಳು, 3 ಎಕೆ 47, 3 ಜಿಪಿಎಸ್, 9 ಅಂಡರ್ ಬ್ಯಾರಲ್ ಗ್ರೆನೇಡ್ ಲಾಂಚರ್, ಉರ್ದು ಭಾಷೆಯಲ್ಲಿ ಬರೆದಿರುವ ಡೈರಿ, ಪಾಕಿಸ್ತಾನದಲ್ಲಿ ತಯಾರಿ ಮಾಡಲಾಗಿರುವ ಔಷಧಿಗಳು, ಇಂಜೆಕ್ಷನ್ ಗಳು, ಬಿಸ್ಕೆಟ್ ಗಳು, 17 ಮ್ಯಾಗಿಜನ್ ಗಳು, ಮ್ಯಾಪ್ ಗಳು, ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com