ಗೋವಾ: ಪರ್ಫ್ಯೂಮ್ ಉದ್ಯಮಿ ಮೋನಿಕಾ ಘುರ್ಡೆ ಕೊಲೆ; ಅತ್ಯಾಚಾರ ಶಂಕೆ

ದೇಶದ ಅತ್ಯುತ್ತಮ ಪರ್ಫ್ಯೂಮರ್ ಉತ್ಪಾದಕಿ ಎಂದು ಪ್ರಸಿದ್ಧರಾಗಿದ್ದ ಮೋನಿಕಾ ಘುರ್ಡೆ ಅವರ ಮೇಲೆ ಅತ್ಯಾಚಾರ ನಡೆಸಿ ಭೀಕರವಾಗಿ ...
ಮೋನಿಕಾ ಘುರ್ಡೆ
ಮೋನಿಕಾ ಘುರ್ಡೆ
Updated on: 

ಪಣಜಿ: ದೇಶದ ಅತ್ಯುತ್ತಮ ಪರ್ಫ್ಯೂಮರ್ ಉತ್ಪಾದಕಿ ಎಂದು ಪ್ರಸಿದ್ಧರಾಗಿದ್ದ ಮೋನಿಕಾ ಘುರ್ಡೆ ಅವರ ಮೇಲೆ ಅತ್ಯಾಚಾರ ನಡೆಸಿ ಭೀಕರವಾಗಿ ಹತ್ಯೆ ಮಾಡಲಾಗಿದೆ.

ಗೋವಾದ ಅಪಾರ್ಟ್ ಮೆಂಟ್ ಒಂದರಲ್ಲಿ ಮೋನಿಕಾ ಘುರ್ಡೆ ಒಂಟಿಯಾಗಿ ವಾಸವಾಗಿದ್ದರು. ಆಕೆಯ ಕೈಕಾಲು ಕಟ್ಟಿ. ಆಕೆಯ ಮೇಲೆ ಅತ್ಯಾಚಾರ ನಡೆಸಿ ಅನಂತರ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದುಷ್ಕರ್ಮಿಗಳು ಮೊದಲು ದರೋಡೆ ಮಾಡಿ, ನಂತರ ಕೈಕಾಲು ಕಟ್ಟಿ ಅತ್ಯಾಚಾರ ಮಾಡಿ ಕೊಲೆಗೈದಿರಬಹುದೆಂದು ಪೊಲೀಸರು ಹೇಳಿದ್ದಾರೆ. ಆಕೆಯ ಕುತ್ತಿಗೆ ಮೇಲೆ ಗಾಯದ ಗುರುತುಗಳಿದ್ದು, ಅಪರಿಚಿತರೇ ಈ ಕೃತ್ಯ ನಡೆಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಈ ಸಂಬಂಧ ವಾಚ್ ಮನ್ ನನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆದರೆ ಯಾವುದೇ ಅಪರಿಚಿತರು ಅಪಾರ್ಟ್ ಮೆಂಟ್ ಒಳಗೆ ಪ್ರವೇಶಿಸಿಸಿರುವುದು ತನಗೆ ತಿಳಿದಿಲ್ಲ ಎಂದು ಹೇಳಿಕೆ ನೀಡಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com