

ನವದೆಹಲಿ: ಭಯೋತ್ಪಾದನೆಯನ್ನು ತಮ್ಮ ರಾಷ್ಟ್ರೀಯ ನೀತಿ ಎಂಬಂತೆ ಕೆಲ ದೇಶಗಳು ಬಳಸಿಕೊಳ್ಳುತ್ತಿವೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಶುಕ್ರವಾರ ಹೇಳಿದ್ದಾರೆ.
ಅಖಿಲ ಭಾರತ ಕ್ರಿಶ್ಚಿಯನ್ ಕೌನ್ಸಿಲ್ ಸಭೆಯಲ್ಲಿ ಮಾತನಾಡಿರುವ ಅವರು, ಪಾಕಿಸ್ತಾನದ ಹೆಸರನ್ನು ಹೇಳದೆಯೇ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ರಾಜ್ಯ ನೀತಿಯೆಂಬಂತೆ ರಾಷ್ಟ್ರಗಳು ಭಯೋತ್ಪಾದನೆ ಬಳಕೆ ಮಾಡಿಕೊಳ್ಳುತ್ತಿದೆ. ಭಯೋತ್ಪಾದನೆ ವಿರುದ್ಧ ಒಗ್ಗೂಡಿ ಇಂತಹ ರಾಷ್ಟ್ರಗಳನ್ನು ಪ್ರತ್ಯೇಕಗೊಳ್ಳುವಂತೆ ಮಾಡಬೇಕೆಂದು ಹೇಳಿದ್ದಾರೆ.
ವಿಚಾರಧಾರೆಗಳು ಹಾಗೂ ಆಲೋಚನೆಗಳ ಕುರಿತು ಕೆಲ ರಾಷ್ಟ್ರಗಳ ನಡುವೆ ವ್ಯತ್ಯಾಸಗಳಿವೆ. ಶಸ್ತ್ರಾಸ್ತ್ರ ಬಳಕೆಯಿಂದ ಯಾವುದೇ ಸಮಸ್ಯೆಗಳು ಬಗೆಹರಿಯಲು ಸಾಧ್ಯವಿಲ್ಲ. ಇಂದು ಜಾಗತಿಕ ಸಮುದಾಯ ಭಯೋತ್ಪಾದನಾ ಸಮಸ್ಯೆಯನ್ನು ಎದುರಿಸುತ್ತಿದೆ. ಹೀಗಾಗಿ ಭಯೋತ್ಪಾದನೆ ವಿರುದ್ಧ ವಿಶ್ವ ಹೋರಾಡಬೇಕಿದೆ ಎಂದು ಅವರು ತಿಳಿಸಿದ್ದಾರೆ.
Advertisement