ಹೈದರಾಬಾದ್: ಕಾರು ಪಲ್ಟಿ, ನಾಲ್ವರು ಯಾತ್ರಿಗಳ ಸಾವು

: ಎಸ್ ಯುವಿ ವಾಹನ ಪಲ್ಟಿ ಹೊಡೆದ ಪರಿಣಾಮ ನಾಲ್ವರು ಯಾತ್ರಿಗಳು ಸಾವನ್ನಪ್ಪಿ ಹಲವು ಮಂದಿ ಗಾಯಗೊಂಡಿರುವ ಘಟನೆ ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಯ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಕರ್ನೂಲು: ಎಸ್ ಯುವಿ ವಾಹನ ಪಲ್ಟಿ ಹೊಡೆದ ಪರಿಣಾಮ ನಾಲ್ವರು ಯಾತ್ರಿಗಳು ಸಾವನ್ನಪ್ಪಿ ಹಲವು ಮಂದಿ ಗಾಯಗೊಂಡಿರುವ ಘಟನೆ ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಯ ಚಗಲಮರ್ರಿ ಎಂಬ ಸ್ಥಳದಲ್ಲಿ ನಡೆದಿದೆ.

ಸುಬ್ಬರಾಜು, ರಂಗರಾಜು, ರಾಮಕೃಷ್ಣಮರಾಜು, ಹಾಗೂ ಕನಕರಾಜು ಎಂಬುವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂರ್ತಿ ರಾಜು, ರಾಮಮೋಹನ ರಾಜು, ಹಾಗೂ ಚಾಲಕ ಕೃಷ್ಣಾರಾವ್ ತೀವ್ರವಾಗಿ ಗಾಯಗೊಂಡಿದ್ದಾರೆ. ಇವರೆಲ್ಲರೂ ಹೈದರಾಬಾದ್ ನ ಕುಕ್ಟಪಲ್ಲಿಯವರಾಗಿದ್ದಾರೆ.

ಅಕ್ಟೋಬರ್ 11 ರಂದು ಇವರೆಲ್ಲಾ ತಿರುಪತಿ ಹಾಗೂ ಶ್ರೀಶೈಲಂಗೆ ತೆರಳಿ ವಾಪಸ್ ಬರುವಾಗ ಊಈ ದುರಂತ ಸಂಭವಿಸಿದೆ. ಗಾಯಾಳುಗಳನ್ನು ಕರ್ನೂಲು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com