ನೋಯ್ಡಾ: 6 ಶಂಕಿತ ನಕ್ಸಲರ ಬಂಧನ

ನಕ್ಸಲರೊಂದಿಗೆ ಸಂಪರ್ಕಹೊಂದಿದ್ದ 6 ಮಂದಿ ಶಂಕಿತ ನಕ್ಸಲರನ್ನು ಉತ್ತರಪ್ರದೇಶದ ಭಯೋತ್ಪಾದನ ನಿಗ್ರಹ ದಳದ ಅಧಿಕಾರಿಗಳು ಶನಿವಾರ ರಾತ್ರಿ ಬಂಧನಕ್ಕೊಳಪಡಿಸಿದ್ದಾರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ನೋಯ್ಡಾ: ನಕ್ಸಲರೊಂದಿಗೆ ಸಂಪರ್ಕಹೊಂದಿದ್ದ 6 ಮಂದಿ ಶಂಕಿತ ನಕ್ಸಲರನ್ನು ಉತ್ತರಪ್ರದೇಶದ ಭಯೋತ್ಪಾದನ ನಿಗ್ರಹ ದಳದ ಅಧಿಕಾರಿಗಳು ಶನಿವಾರ ರಾತ್ರಿ ಬಂಧನಕ್ಕೊಳಪಡಿಸಿದ್ದಾರೆ.

ನಕ್ಸಲರ ಸಂಪರ್ಕಹೊಂದಿ ನೋಯ್ಡಾದ ನಾಗರಿಕ ಪ್ರದೇಶದಲ್ಲಿದ್ದುಕೊಂಡು ದಾಳಿಗೆ ಸಂಚು ರೂಪಿಸುತ್ತಿದ್ದ 6 ಮಂದಿ ಶಂಕಿತರನ್ನು ಅಧಿಕಾರಿಗಳು ಬಂಧಿಸಿದ್ದಾರೆ.

ದೆಹಲಿಯ ಎನ್ ಸಿಆರ್ ಪ್ರಾಂತ್ಯದಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದ ಈ ನಕ್ಸಲರು ಇದಕ್ಕಾಗಿ ಬಾಂಬ್ ಗಳನ್ನು ತಯಾರು ಮಾಡುವ ಕೆಲಸದಲ್ಲಿ ತೊಡಗಿಕೊಂಡಿದ್ದರು. ಇದರಂತೆ ಖಚಿತ ಮಾಹಿತಿ ಆಧಾರದ ಮೇಲೆ ಎಟಿಎಸ್ ಅಧಿಕಾರಿಗಳು ಶಂಕಿತ ನಕ್ಸಲರನ್ನು ಬಂಧಿಸಿದ್ದಾರೆಂದು ತಿಳಿದುಬಂದಿದೆ.

ಬಂಧಿತ ಶಂಕಿತ ನಕ್ಸಲರಿಂದ ಸಾಕಷ್ಟು ಶಸ್ತ್ರಾಸ್ತ್ರಗಳು ಹಾಗೂ ಸ್ಫೋಟಕ ವಸ್ತುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com