ಬಹ್ರೇನ್'ಗೆ ತೆರಳಿದ ರಾಜನಾಥ ಸಿಂಗ್: ಭಯೋತ್ಪಾದನೆ ಕುರಿತು ಮಾತುಕತೆ ಸಾಧ್ಯತೆ

ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಬಹ್ರೇನ್'ಗೆ ತೆರಳಿದ್ದು, ಭಯೋತ್ಪಾದನೆ ಕುರಿತಂತೆ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆಂದು ಭಾನುವಾರ ಮೂಲಗಳಿಂದ...

ನವದೆಹಲಿ: ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಬಹ್ರೇನ್'ಗೆತೆರಳಿದ್ದು, ಭಯೋತ್ಪಾದನೆ ಕುರಿತಂತೆ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆಂದು ಭಾನುವಾರ ಮೂಲಗಳಿಂದತಿಳಿದುಬಂದಿದೆ.

ರಾಜನಾಥ ಸಿಂಗ್ ಅವರ ಮೂರುದಿನಗಳ ಕಾಲದ ಗಲ್ಫ್ ರಾಷ್ಟ್ರ ಭೇಟಿ ಇಂದಿನಿಂದ ಆರಂಭವಾಗಿದ್ದು, ಬಹ್ರೇನ್'ಗೆ ಭೇಟಿನೀಡುತ್ತಿದ್ದಂತೆ ಅಲ್ಲಿನ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಭಯೋತ್ಪಾದನಾ ಸಮಸ್ಯೆಯನ್ನುಮಟ್ಟಹಾಕುವ ಕುರಿತಂತೆ ಮಾತುಕತೆ ನಡೆಸಲಿದ್ದಾರೆಂದು ಹೇಳಲಾಗುತ್ತಿದೆ.

ಈಗಾಗಲೇ ಮನಾಮಾಗೆ ಭೇಟಿ ನೀಡಿರುವ ಅವರು, ಶೀಘ್ರದಲ್ಲೇ ಬಹ್ರೇನ್ ನಾಯಕ ಹಮದ್ ಬಿನ್ಇಸಾ ಅಲ್ ಖಲೀಫಾ, ಅಲ್ಲಿನ ಪ್ರಧಾನಮಂತ್ರಿ ಖಲೀಫಾ ಬಿನ್ ಸಲ್ಮಾನ್ ಅಲ್ ಖಲೀಫಾ ಮತ್ತು ಆಂತರಿಕಸಚಿವ ರಷಿದ್ ಬಿನ್ ಅಬ್ದುಲ್ಲಾ ಅಲ್ ಖಲೀಫಾರನ್ನು ಭೇಟಿ ಮಾಡಿ ದ್ವಿಪಕ್ಷೀಯ ಮಾತುಕತೆಯನ್ನುನಡೆಸಲಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನ ಸೇನೆ ಕದನ ವಿರಾಮಉಲ್ಲಂಘಿಸುತ್ತಿದ್ದು, ಭಾರತೀಯ ಸೇನೆ ಮೇಲೆ ಅಪ್ರಚೋದಿತ ಗುಂಡಿನ ದಾಳಿಯನ್ನು ನಡೆಸುತ್ತಿದೆ. ಈವಿಚಾರವನ್ನೂ ರಾಜನಾಥ್ ಸಿಂಗ್ ಅವರು ಬಹ್ರೇನ್ ನಾಯಕರೊಂದಿಗೆ ಚರ್ಚೆ ನಡೆಸಲಿದ್ದಾರೆಂದುತಿಳಿದುಬಂದಿದೆ,

ಬಹ್ರೇನ್ ಭೇಟಿ ನೀಡುವುದಕ್ಕೂ ಮುನ್ನ ಹೇಳಿಕೆ ನೀಡಿರುವ ರಾಜನಾಥ್ ಸಿಂಗ್ ಅವರು,ಭಾರತ ಮತ್ತು ಬಹ್ರೇನಾ ರಾಷ್ಟ್ರಗಳ ನಡುವೆ ಉತ್ತಮ ದ್ವಿಪಕ್ಷೀಯ ಸಂಬಂಧಗಳಿದ್ದು, ಆರ್ಥಿಕ ಹಾಗೂಸಾಂಸ್ಕೃತಿಕವಾಗಿಯೂ ಉತ್ತಮ ಸಂಬಂಧವನ್ನು ಹೊಂದಿದೆ.

ಬಹ್ರೇನ್ ಗೆ ಭೇಟಿ ನೀಡುತ್ತಿದ್ದಂತೆಯೇ ಅಲ್ಲಿನ ಉನ್ನತ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದೇನೆ.ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧ, ಭಯೋತ್ಪಾದನೆ ಮಟ್ಟಹಾಕುವ ಕುರಿತಂತೆ ಚರ್ಚೆ ನಡೆಸಲಾಗುತ್ತದೆಎಂದು ಹೇಳಿದ್ದಾರೆ.

ಮೂರು ದಿನಗಳ ಭೇಟಿ ವೇಳೆ ಬಹ್ರೇನ್ ನಲ್ಲಿರುವ ಭಾರತೀಯ ಸಮುದಾಯದಜನತೆಯನ್ನುದ್ದೇಶಿಸಿ ರಾಜನಾಥ ಸಿಂಗ್ ಅವರು ಮಾತನಾಡಲಿದ್ದಾರೆಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com