ಆಂಧ್ರ-ಒಡಿಶಾ ಗಡಿಯಲ್ಲಿ ಮತ್ತೆ 3 ಮಾವೋವಾದಿಗಳ ಮೃತದೇಹ ಪತ್ತೆ

ಮಾವೋವಾದಿಗಳು ನಡೆಸುತ್ತಿದ್ದ ಸಭೆ ಮೇಲೆ ಪೊಲೀಸರು ನಡೆಸಿದ ಭೀಕರ ಎನ್ ಕೌಂಟರ್ ಪ್ರಕರಣ ಸಂಬಂಧ ಮತ್ತೆ ಮೂವರು ಮಾವೋವಾದಿಗಳ ಮೃತದೇಹಗಳು ಆಂಧ್ರಪ್ರದೇಶ ಮತ್ತು ಒಡಿಶಾ ಗಡಿಯಲ್ಲಿ ಪತ್ತೆಯಾಗಿರುವುದಾಗಿ...
ನಿನ್ನೆ ಪೊಲೀಸರು ನಡೆಸಿದ ಎನ್ ಕೌಂಟರ್ ನಲ್ಲಿ ಹತ್ಯೆಯಾಗಿರುವ ಮಾವೋವಾದಿಗಳು
ನಿನ್ನೆ ಪೊಲೀಸರು ನಡೆಸಿದ ಎನ್ ಕೌಂಟರ್ ನಲ್ಲಿ ಹತ್ಯೆಯಾಗಿರುವ ಮಾವೋವಾದಿಗಳು
Updated on

ವಿಶಾಖಪಟ್ಟಣ: ಮಾವೋವಾದಿಗಳು ನಡೆಸುತ್ತಿದ್ದ ಸಭೆ ಮೇಲೆ ಪೊಲೀಸರು ನಡೆಸಿದ ಭೀಕರ ಎನ್ ಕೌಂಟರ್ ಪ್ರಕರಣ ಸಂಬಂಧ ಮತ್ತೆ ಮೂವರು ಮಾವೋವಾದಿಗಳ ಮೃತದೇಹಗಳು ಆಂಧ್ರಪ್ರದೇಶ ಮತ್ತು ಒಡಿಶಾ ಗಡಿಯಲ್ಲಿ ಪತ್ತೆಯಾಗಿರುವುದಾಗಿ ಮಂಗಳವಾರ ತಿಳಿದುಬಂದಿದೆ.

ಆಂಧ್ರಪ್ರದೇಶ-ಒಡಿಶಾ ಗಡಿಯ ಮಾಲ್ಕಂಗಿರಿ ಪನಸ್ಪತ್ ನಲ್ಲಿರುವ ಅರಣ್ಯ ಪ್ರದೇಶದಲ್ಲಿ ಮೂವರು ಮಾವೋವಾದಿಗಳ ಮೃತದೇಹಗಳು ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಿನ್ನೆ ನಡೆಸಲಾದ ಎನ್ ಕೌಂಟರ್ ಪ್ರದೇಶದ ಹತ್ತಿರದಲ್ಲೇ ಮೂವರು ಮಾವೋವಾದಿಗಳ ಮೃತದೇಹಗಳು ಪತ್ತೆಯಾಗಿದ್ದು, ಮಾವೋವಾದಿಗಳ ಹತ್ಯೆ ನಿನ್ನೆ ನಡೆದ ಎನ್ ಕೌಂಟರ್ ವೇಳೆ ನಡೆದಿದೆಯೋ ಅಥವಾ ಇಂದು ಮತ್ತೆ ಏನಾದರೂ ಗುಂಡಿನ ದಾಳಿ ನಡೆದು ಹತ್ಯೆಯಾಗಿದ್ದಾರೋ ಎಂಬುದರ ಬಗ್ಗೆ ಪೊಲೀಸರು ಇದೀಗ ತನಿಖೆ ನಡೆಸುತ್ತಿದ್ದಾರೆ. ನಿನ್ನೆ ನಡೆದ ಭೀಕರ ಎನ್ ಕೌಂಟರ್ ನಲ್ಲಿ 24 ಮಂದಿ ಮಾವೋವಾದಿಗಳನ್ನು ಹತ್ಯೆ ಮಾಡಲಾಗಿತ್ತು.

ಅರಣ್ಯ ಒಳಭಾಗದಲ್ಲಿ ಘಟನೆ ನಡೆದಿತ್ತು. ಪ್ರಸ್ತುತ ಸಂಪರ್ಕ ಸಮಸ್ಯೆಗಳು ಎದುರಾಗುತ್ತಿದ್ದು, ಮೂರು ಮೃತದೇಹಗಳು ಪತ್ತೆಯಾಗಿರುವುದಾಗಿ ಮಾಹಿತಿಗಳು ಲಭ್ಯವಾಗಿದೆ. ಇಂದು ಹೊಸದಾಗಿ ಗುಂಡಿನ ದಾಳಿಗಳೇನಾದರೂ ನಡೆದಿದೆಯೇ ಎಂಬುದರ ಬಗ್ಗೆ ತನಿಖೆ ನಡೆಸಬೇಕಿದೆ ಎಂದು ವಿಶಾಖಪಟ್ಟಣ ಗ್ರಾಮೀಣ ಭಾಗದ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ದೇವ್ ಶರ್ಮಾ ಅವರು ಹೇಳಿದ್ದಾರೆ.

ನಿನ್ನೆ ಹತ್ಯೆಯಾದ 24 ಮಾವೋವಾದಿಗಳ ಮರಣೋತ್ತರ ಪರೀಕ್ಷೆಗಳು ಈಗಾಗಲೇ ಪೂರ್ಣಗೊಂಡಿದ್ದು, ಮಾವೋವಾದಿಗಳ ಮೃತದೇಹಗಳನ್ನು ಮಾಲ್ಕಂಗಿರಿಯಲ್ಲಿರುವ ಪೊಲೀಸ್ ವರಿಷ್ಠಾಧಿಕಾರಿಯ ಕಚೇರಿಯಲ್ಲಿಯೇ ಇರಿಸಲಾಗಿದೆ. ಹತ್ಯೆಯಾದ ಮಾವೋವಾದಿಗಳ ಸಂಬಂಧಿಕರು ಅಧಿಕಾರಿಗಳನ್ನು ಸಂಪರ್ಕಿಸಿ ಮೃತದೇಹಗಳನ್ನು ಕೊಂಡೊಯ್ಯಬಹುದಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com