ಆಂತರಿಕ ಭದ್ರತೆಯಲ್ಲಿರುವ ನ್ಯೂನತೆಗಳನ್ನು ಸರಿ ಮಾಡಬೇಕಿದೆ: ಜೆಡಿ(ಯು)

ದೇಶದಲ್ಲಿರುವ ಆತಂರಿಕ ನ್ಯೂನತೆಗಳನ್ನು ಮೊದಲು ಸರಿಪಡಿಸಿಕೊಳ್ಳಬೇಕಿದ್ದು, ನಮ್ಮ ನಡುವೆಯೇ ಇದ್ದು ರಾಷ್ಟ್ರದ್ರೋಹ ಮಾಡುವ ಜನರನ್ನು ಮೊದಲು ದೇಶದಿಂದ ಹೊರಹಾಕಬೇಕಿದೆ ಎಂದು ಜೆಡಿಯು ಪಕ್ಷ...
ಜೆಡಿಯು ಪಕ್ಷದ ವಕ್ತಾರ ಅಜಯ್ ಅಲೋಕ್
ಜೆಡಿಯು ಪಕ್ಷದ ವಕ್ತಾರ ಅಜಯ್ ಅಲೋಕ್

ಪಾಟ್ನ: ದೇಶದಲ್ಲಿರುವ ಆತಂರಿಕ ನ್ಯೂನತೆಗಳನ್ನು ಮೊದಲು ಸರಿಪಡಿಸಿಕೊಳ್ಳಬೇಕಿದ್ದು, ನಮ್ಮ ನಡುವೆಯೇ ಇದ್ದು ರಾಷ್ಟ್ರದ್ರೋಹ ಮಾಡುವ ಜನರನ್ನು ಮೊದಲು ದೇಶದಿಂದ ಹೊರಹಾಕಬೇಕಿದೆ ಎಂದು ಜೆಡಿಯು ಪಕ್ಷ ಶುಕ್ರವಾರ ಹೇಳಿಕೆ.

ಪಾಕಿಸ್ತಾನ ರಾಯಭಾರಿ ಅಧಿಕಾರಿಗಳ ಬೇಹುಗಾರಿಕೆ ಪ್ರಕರಣ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಜೆಡಿಯು ಪಕ್ಷದ ವಕ್ತಾರ ಅಜಯ್ ಅಲೋಕ್ ಅವರು, ದೇಶದ ರಕ್ಷಣಾ ಇಲಾಖೆ ಮಾಹಿತಿಯನ್ನು ಬೇಹುಗಾರಿಕೆ ಮಾಡಿರುವುದು ನಿಜಕ್ಕೂ ಗಂಭೀರವಾದ ವಿಚಾರ. ಈ ಕುರಿತಂತೆ ಸೂಕ್ತ ರೀತಿಯ ತನಿಖೆಯಾಗಬೇಕಿದೆ ಎಂದು ಹೇಳಿದ್ದಾರೆ.

ಈಗಾಗಲೇ ನಾಲ್ಕು ಮಂದಿಯನ್ನು ಬಂಧನಕ್ಕೊಳಪಡಿಸಲಾಗಿದೆ. ಆದರೆ, ಬಂಧನಕ್ಕೊಳಪಡದ ಜನರ ಕಥೆಯೇನು? ನಮ್ಮಲ್ಲಿಯೇ ಆಂತರಿಕ ಭದ್ರತೆಯ ನ್ಯೂನತೆಗಳಿದ್ದು, ಮೊದಲು ಅದನ್ನು ಸರಿಪಡಿಸಿಕೊಳ್ಳಬೇಕಿದೆ. ದೇಶದ್ರೋಹ ಮಾಡುವ ಜನರನ್ನು ಮೊದಲು ದೇಶದಿಂದಲೇ ಹೊರಹಾಕಬೇಕಿದೆ ಎಂದು ತಿಳಿಸಿದ್ದಾರೆ.

ನಿನ್ನೆಯಷ್ಟೇ ರಕ್ಷಣಾ ಇಲಾಖೆ ಗೌಪ್ಯ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ಬೇಹುಗಾರಿಕೆ ಮಾಡಲಾಗುತ್ತಿದೆ ಎಂದು ಹೇಳಿ ದೆಹಲಿ ಪೊಲೀಸರು ಪಾಕಿಸ್ತಾನ ದೂತವಾಸ ಅಧಿಕಾರಿ ಅಖ್ತರ್ ಹಾಗೂ ರಾಜಸ್ತಾನ ಮೂಲದ ಇಬ್ಬರು ವ್ಯಕ್ತಿಗಳನ್ನು ಬಂಧನಕ್ಕೊಳಪಡಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com