ಮೊಂಡುತನ ಪ್ರದರ್ಶಿಸುತ್ತಿರುವ ಪಾಕ್ ಜತೆಗೆ ಸಿಹಿ ಸಂಭ್ರಮ ಬೇಡ: ಬಿಎಸ್ಎಫ್

ದೀಪಾವಳಿ ಹಬ್ಬದ ಅಂಗವಾಗಿ ವಾಘಾ ಗಡಿಯಲ್ಲಿ ಸಂಪ್ರದಾಯದಂತೆ ನಡೆಯುತ್ತಿದ್ದ ಭಾರತ ಮತ್ತು ಪಾಕಿಸ್ತಾನ ಸೇನಾ ಪಡೆಗಳ ಪರಸ್ಪರ ಸಿಹಿ ಹಂಚಿಕೆಗೆ ಭಾರತೀಯ ಸೇನೆ ನಕಾರ ಪ್ರತಿಕ್ರಿಯೆ ನೀಡಿದ್ದು, ಈ ಬಾರಿ ಪಾಕಿಸ್ತಾನ ಜತೆಗೆ ಸಿಹಿ ಸಂಭ್ರಮ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ದೀಪಾವಳಿ ಹಬ್ಬದ ಅಂಗವಾಗಿ ವಾಘಾ ಗಡಿಯಲ್ಲಿ ಸಂಪ್ರದಾಯದಂತೆ ನಡೆಯುತ್ತಿದ್ದ ಭಾರತ ಮತ್ತು ಪಾಕಿಸ್ತಾನ ಸೇನಾ ಪಡೆಗಳ ಪರಸ್ಪರ ಸಿಹಿ ಹಂಚಿಕೆಗೆ ಭಾರತೀಯ ಸೇನೆ ನಕಾರ ಪ್ರತಿಕ್ರಿಯೆ ನೀಡಿದ್ದು, ಈ ಬಾರಿ ಪಾಕಿಸ್ತಾನ ಜತೆಗೆ ಸಿಹಿ ಸಂಭ್ರಮ ಬೇಡ ಎಂದು ಹೇಳಿದೆ.

ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಪಾಕಿಸ್ತಾನ ಸೇನೆ ಪದೇ ಪದೇ ಕದನ ವಿರಾಮವನ್ನು ಉಲ್ಲಂಘಿಸುತ್ತಿದೆ. ಅಲ್ಲದೆ, ಭಾರತೀಯ ಸೇನೆಯನ್ನು ಗುರಿಯಾಗಿಸಿಕೊಂಡು ಅಪ್ರಚೋದಿತ ಗುಂಡಿನ ದಾಳಿಯನ್ನು ನಡೆಸುತ್ತಿದೆ. ಪಾಕಿಸ್ತಾನ ಸೇನೆ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಗೆ ಈ ವರೆಗೂ 7 ಯೋಧರು ಹುತಾತ್ಮರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಸೇನೆಯೊಂದಿಗೆ ಸಿಹಿ ಹಂಚಿಕೆ ಬೇಡ ಎಂದು ಬಿಎಸ್ಎಫ್ ತಿಳಿಸಿದೆ.

ವಾಘಾ ಗಡಿಯಲ್ಲಿ ನಮ್ಮ ಯೋಧರ ಮೇಲೆ ಸಾಕಷ್ಟು ದಾಳಿಗಳು ನಡೆಯುತ್ತಿವೆ. ಹೀಗಾಗಿ ನಾವು ಪಾಕಿಸ್ತಾನದ ಜತೆಗೆ ಸಿಹಿ ಹಂಚಿಕೊಳ್ಳುವುದಿಲ್ಲ. ಪಾಕಿಸ್ತಾನದಿಂದ ಬರುವ ಯಾವುದೇ ಸಿಹಿಯಾಗಲೀ, ಉಡುಗೊರೆಯಾಗಲಿ ಭಾರತ ಸ್ವೀಕರಿಸುವುದಿಲ್ಲ ಎಂದು ಬಿಎಸ್ ಜಿ ಐಜಿ ಅನಿಲ್ ಪಾಲಿವಾಲ್ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com