ಇಸ್ಲಾಂ ವಿವಾದಿತ ಬೋಧಕ ಝಾಕೀರ್ ನಾಯಕ್ ತಂದೆ ವಿಧಿವಶ

ವಿವಾದಾತ್ಮಕ ಇಸ್ಲಾಂ ಧರ್ಮ ಭೋಧಕ ಝಾಕೀರ್ ನಾಯಕ್ ತಂಜೆ ಅಬ್ದುಲ್ ಕರೀಂ ನಾಯಕ್ ಇಂದು ಬೆಳಗ್ಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ....
ಝಾಕೀರ್ ನಾಯಕ್
ಝಾಕೀರ್ ನಾಯಕ್

ಮುಂಬಯಿ: ವಿವಾದಾತ್ಮಕ  ಇಸ್ಲಾಂ ಧರ್ಮ ಭೋಧಕ ಝಾಕೀರ್ ನಾಯಕ್ ತಂಜೆ ಅಬ್ದುಲ್ ಕರೀಂ ನಾಯಕ್ ಇಂದು ಬೆಳಗ್ಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಹಲವು ದಿನಗಳಿಂದ ಅನಾರೋಗ್ಯ ಪೀಡಿತರಾಗಿದ್ದ 87 ವರ್ಷದ ಅಬ್ದುಲ್ ಕರೀಂ ನಾಯಕ್ ಗೆ ಇಂದು ಮುಂಜಾನೆ ಹೃದಯಾಘಾತವಾಗಿದೆ.

ಮಹಾರಾಷ್ಟ್ರದ ರತ್ನಗಿರಿಯಲ್ಲಿ ಜನಿಸಿದ್ದ ಅಬ್ದುಲ್ ಕರೀಂ ನಾಯಕ್ ವೈದ್ಯರಾಗಿದ್ದರು. ಬಾಂಬೆ ಸೈಕಿಯಾಟ್ರಿಕ್ ಸೊಸೈಟಿಯಲ್ಲಿ  ಕೆಲಸ ನಿರ್ವಹಿಸಿದ್ದ ಅವರು, ಶಿಕ್ಷಣ ಕ್ಷೇತ್ರದಲ್ಲೂ ಕೆಲಸ ಮಾಡಿದ್ದರು.

ಆದರೆ ತನ್ನ ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೋಳ್ಳಲು ಝಾಕೀರಾ ನಾಯ್ಕ್ ಗೆ ಸಾಧ್ಯವಾಗುವುದಿಲ್ಲ ಎಂದು ಆತನ ಸಂಬಂಧಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com