ಆಪ್ ಶಾಸಕ ಪವನ್ ಕುಮಾರ್‌ಗೆ 18 ತಿಂಗಳ ಜೈಲು ಶಿಕ್ಷೆ, 1 ಲಕ್ಷ ದಂಡ

ದೆಹಲಿ ಆಮ್ ಆದ್ಮಿ ಪಕ್ಷದ ಶಾಸಕ ಪವನ್ ಕುಮಾರ್ ಶರ್ಮಾಗೆ ಸ್ಥಳೀಯ ನ್ಯಾಯಾಲಯ 18 ತಿಂಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.
ಪವನ್ ಕುಮಾರ್ ಶರ್ಮಾ
ಪವನ್ ಕುಮಾರ್ ಶರ್ಮಾ
Updated on: 
ನವದೆಹಲಿ: ದೆಹಲಿ ಆಮ್ ಆದ್ಮಿ ಪಕ್ಷದ ಶಾಸಕ ಪವನ್ ಕುಮಾರ್ ಶರ್ಮಾಗೆ ಸ್ಥಳೀಯ ನ್ಯಾಯಾಲಯ 18 ತಿಂಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ. 
ಪವನ್ ಒಡೆತನದ ಸ್ಟೀಲ್ ಕಾರ್ಖನೆಯಲ್ಲಿ ಕಾರ್ಮಿಕನೊಬ್ಬ ಮೃತಪಟ್ಟಿದ್ದು, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಹಿನ್ನೆಲೆಯಲ್ಲಿ ಶಾಸಕರ ವಿರುದ್ಧ ನಿರ್ಲಕ್ಷ್ಯ ಧೋರಣೆ ಪ್ರಕರಣವನ್ನು ದಾಖಲಿಸಲಾಗಿತ್ತು. ಪ್ರಕರಣದ ತೀರ್ಪು ಪ್ರಕಟಿಸಿದ ನ್ಯಾಯಾಲಯ ಶಾಸಕರಿಗೆ 18 ತಿಂಗಳ ಕಾಲ ಜೈಲು ಶಿಕ್ಷೆ ವಿಧಿಸಿದ್ದು, 1 ಲಕ್ಷ ರುಪಾಯಿ ದಂಡ ವಿಧಿಸಿದೆ. 
ಪ್ರಕರಣ ಸಂಬಂಧ ಶಿಕ್ಷೆಯ ಪ್ರಮಾಣದ ತೀರ್ಪು ನೀಡುತ್ತಿದ್ದಂತೆ ನ್ಯಾಯಾಲಯದ ಪವನ್ ಗೆ ಜಾಮೀನು ಕೂಡಾ ನೀಡಿದ್ದು ಜೈಲು ಪಾಲಾಗುವುದರಿಂದ ತಪ್ಪಿಸಿಕೊಂಡಿದ್ದಾರೆ. 
2009ರಲ್ಲಿ ಸ್ಟೀಲ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ರಾಮ್ ಕುಮಾರ್ ಎಂಬಾತ ಕರ್ತವ್ಯದ ವೇಳೆ ಅಪಘಾತಕ್ಕೆ ತುತ್ತಾಗಿ ಸಾವನ್ನಪ್ಪಿದ್ದ. ಸಾವಿಗೂ ಮುನ್ನ, ಸೂಕ್ತ ಸ್ಥಿತಿಯಲ್ಲಿಲ್ಲದ ಯಂತ್ರದ ಜತೆ ಕೆಲಸ ಮಾಡುತ್ತಿದ್ದದ್ದೇ ಘಟನೆ ಕಾರಣ ಎಂದು ಪವನ್ ಪೊಲೀಸರಿಗೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಪವನ್ ವಿರುದ್ಧ ಕೇಸು ದಾಖಲಾಗಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com