ಹೆಚ್ಐವಿ ಪೀಡಿತ ಗರ್ಭಿಣಿಗೆ ಚಿಕಿತ್ಸೆ ನೀಡಲು ಆಸ್ಪತ್ರೆ ನಿರಾಕರಣೆ; ಸತ್ತ ಮಗುವಿಗೆ ಜನ್ಮ ನೀಡಿದ ಮಹಿಳೆ

ಪ್ರವಸ ವೇದನೆಯಿಂದ ನರಳುತ್ತಿದ್ದ ಹೆಚ್ ಐವಿ ಪೀಡಿತ ಮಹಿಳೆಯೊಬ್ಬರಿಗೆ ಆಸ್ಪತ್ರೆಯೊಂದು ಚಿಕಿತ್ಸೆ ನೀಡಲು ನಿರಾಕರಿಸಿದ್ದ ಪರಿಣಾಮ ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರಕದೆ ಮಹಿಳೆಯೊಬ್ಬರು...
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆ
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆ

ಬರೇಲಿ: ಪ್ರವಸ ವೇದನೆಯಿಂದ ನರಳುತ್ತಿದ್ದ ಹೆಚ್ ಐವಿ ಪೀಡಿತ ಮಹಿಳೆಯೊಬ್ಬರಿಗೆ ಆಸ್ಪತ್ರೆಯೊಂದು ಚಿಕಿತ್ಸೆ ನೀಡಲು ನಿರಾಕರಿಸಿದ್ದ ಪರಿಣಾಮ ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರಕದೆ ಮಹಿಳೆಯೊಬ್ಬರು ಸತ್ತ ಮಗುವಿಗೆ ಜನ್ಮ ನೀಡಿರುವ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ.

ಕಳೆದ ಶನಿವಾರ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹೆಚ್ ಐವಿ ಪೀಡಿತ ಮಹಿಳೆಯೊಬ್ಬರು ಪ್ರವಸ ವೇದನೆಯಿಂದ ನರಳುತ್ತಿದ್ದರು. ಈ ವೇಳೆ ಆಕೆಯ ಪತಿ ಇಸ್ಲಾಮ್ ನಗರದಲ್ಲಿರುವ ಆಸ್ಪತ್ರೆಯೊಂದಕ್ಕೆ ಕರೆ ತಂದಿದ್ದಾರೆ. ಈ ವೇಳೆ ಪರಿಶೀಲನೆ ನಡೆಸಿರುವ ಅಲ್ಲಿನ ವೈದ್ಯರು ಮಹಿಳೆಗೆ ಹೆಚ್ ಐವಿ ಸೋಂಕು ಇರುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಚಿಕಿತ್ಸೆ ನೀಡಲು ಸಾಧ್ಯವಿಲ್ಲ ಎಂದು ಹೇಳಿ ಬದೌನ್ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವಂತೆ ತಿಳಿಸಿದ್ದಾರೆ.

ಬದೌನ್ ಆಸ್ಪತ್ರೆಗೆ ಕರೆತಂದಾಗ ಅಲ್ಲಿಯೂ ಚಿಕಿತ್ಸೆ ನೀಡಲು ನಿರಾಕರಿಸಿದ್ದರು, ಮೊದಲು ತಪಾಸಣೆ ನಡೆಸಿದ ವೈದ್ಯರು ಪತ್ನಿಗೆ ಏಡ್ಸ್ ಇರುವುದಾಗಿ ಹೇಳಿದರು. ನಂತರ ಚಿಕಿತ್ಸೆ ಕೊಡಲು ಸಾಧ್ಯವಿಲ್ಲ. ರಕ್ತ ನೀಡಬೇಕಿದೆ. ವ್ಯವಸ್ಥೆ ಮಾಡಿ ಎಂದರು. ರಾತ್ರಿಯಾಗುತ್ತಿದ್ದಂತೆ ಪತ್ನಿಯ ಸ್ಥಿತಿ ಚಿಂತಾಜನಕವಾಗಲು ಆರಂಭವಾಯಿತು. ನಂತರ ಆಸ್ಪತ್ರೆಯ ಸಿಬ್ಬಂದಿಗಳು ಬರೇಲಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವಂತೆ ತಿಳಿಸಿದರು.

ಆಸ್ಪತ್ರೆಗೆ ಬೆಳಿಗ್ಗೆ 5 ಗಂಟೆ ಸುಮಾರಿಗೆ ಕರೆ ತರಲಾಯಿತು. ಆಕೆಯ ಸ್ಥಿತಿ ಚಿಂತಾಜನಕವಾಗಿತ್ತು. ನಂತರ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದರು. ಆದರೆ, ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರಕದ ಕಾರಣ ಮಗು ಸತ್ತುಹೋಗಿತ್ತು ಎಂದು ಮಹಿಳೆಯ ಪತಿ ಹೇಳಿಕೊಂಡಿದ್ದಾರೆ.

ಘಟನೆ ಕುರಿತಂತೆ ಬರೇಲಿ ಜಿಲ್ಲಾಸ್ಪತ್ರೆಯ ಅಧಿಕಾರಿ ಡಾ. ಅಲ್ಕಾ ಶರ್ಮಾ ಅವರು ಮಾತನಾಡಿದ್ದು, ರೋಗಿ ಆಸ್ಪತ್ರೆಗೆ ಬರುತ್ತಿದ್ದಂತೆ, ಕೂಡಲೇ ಚಿಕಿತ್ಸೆ ನೀಡಲು ಆರಂಭಿಸಲಾಗಿತ್ತು. ಆಸ್ಪತ್ರೆಗೆ ಬಂದಾಗಲೇ ಮಗು ಸಾವನ್ನಪ್ಪಿತ್ತು. ಹೀಗಾಗಿ ತಾಯಿಯನ್ನು ಉಳಿಸುವ ಪ್ರಯತ್ನವನ್ನು ಮಾಡಲಾಗಿತ್ತು. ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರಕಿದ್ದರೆ, ಮಗುವನ್ನು ಉಳಿಸಬಹುದಿತ್ತು. ಪ್ರಸ್ತುತ ಮಹಿಳೆ ಆರೋಗ್ಯವಾಗಿದ್ದಾರೆಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com