ಕಟ್ಟಿಗೆಗೆ ದುಡ್ಡಿಲ್ಲ, ಕಸದಿಂದಲೇ ಪತ್ನಿಯ ಅಂತ್ಯಕ್ರಿಯೆ ಮಾಡಿದ ಪತಿ

ಪತ್ನಿಯ ಶವ ಸಂಸ್ಕಾರಕ್ಕೆ ಕಟ್ಟಿಗೆ ಕೊಳ್ಳಲೂ ಹಣವಿಲ್ಲದೆ ಸಹಾಯಕ್ಕಾಗಿ ಪರದಾಡಿ ಕೊನೆಗೆ ಯಾವ ದಾರಿಯೂ ಇಲ್ಲದೇ ಅಸಹಾಯಕ ಸ್ಥಿತಿಯಲ್ಲಿ ಪತಿಯೊಬ್ಬ ಕಸದಿಂದಲೇ...
ಕಟ್ಟಿಗೆಗೆ ದುಡ್ಡಿಲ್ಲ, ಕಸದಿಂದಲೇ ಪತ್ನಿಯ ಅಂತ್ಯಕ್ರಿಯೆ ಮಾಡಿದ ಪತಿ
ಕಟ್ಟಿಗೆಗೆ ದುಡ್ಡಿಲ್ಲ, ಕಸದಿಂದಲೇ ಪತ್ನಿಯ ಅಂತ್ಯಕ್ರಿಯೆ ಮಾಡಿದ ಪತಿ
Updated on

ನೀಮುಚ್ (ಮಧ್ಯಪ್ರದೇಶ): ಪತ್ನಿಯ ಶವ ಸಂಸ್ಕಾರಕ್ಕೆ ಕಟ್ಟಿಗೆ ಕೊಳ್ಳಲೂ ಹಣವಿಲ್ಲದೆ ಸಹಾಯಕ್ಕಾಗಿ ಪರದಾಡಿ ಕೊನೆಗೆ ಯಾವ ದಾರಿಯೂ ಇಲ್ಲದೇ ಅಸಹಾಯಕ ಸ್ಥಿತಿಯಲ್ಲಿ ಪತಿಯೊಬ್ಬ ಕಸದಿಂದಲೇ ಪತ್ನಿಯ ಅಂತ್ಯಕ್ರಿಯೆ ಮಾಡಿರುವ ಘಟನೆಯೊಂದು ಮಧ್ಯಪ್ರದೇಶದ ನೀಮುಚ್ ನಲ್ಲಿ ನಡೆದಿದೆ.

ಅನಾರೋಗ್ಯದಿಂದ ಬಳಲುತ್ತಿದ್ದ ನೆಜಿ ಭಾಯ್ (67) ಎಂಬುವವರು ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ ಮೃತಪಟ್ಟಿದ್ದಾರೆ. ಜಗದೀಶ್ ಭೀಲ್ ಈಕೆಯ ಪತಿಯಾಗಿದ್ದು, ಬುಡಕಟ್ಟು ಜನಾಂಗಕ್ಕೆ ಸೇರಿದವರಾಗಿದ್ದಾರೆ.

ಪತ್ನಿ ಮರಣ ಹೊಂದಿದ ನಂತರ ಜಗದೀಶ್ ಆಘಾತಗೊಂಡಿದ್ದರು. ಶವ ಸಂಸ್ಕಾರಕ್ಕೆ ಕಟ್ಟಿಗೆ ಕೊಳ್ಳಲೂ ಇವರ ಬಳಿ ಹಣವಿರಲಿಲ್ಲ. ಹೀಗಾಗಿ ಎಲ್ಲಾ ಜಿಲ್ಲೆಗಳ ಮುನ್ಸಿಪಲ್ ಕಾರ್ಪೋರೇಶನ್ ಬಳಿ ಹೋಗಿ ನರೆವು ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಆದರೆ, ಮನವಿಯನ್ನು ನಿರಾಕರಿಸಿದ ಅಧಿಕಾರಿಗಳು ಜಗದೀಶ್ ಅವರನ್ನು ಆಚೆಗಟ್ಟಿದ್ದಾರೆ.

ನನ್ನ ಪತ್ನಿ ಬೆಳಿಗ್ಗೆ 4 ಗಂಟೆಗೆ ಮೃತಪಟ್ಟಿದ್ದಳು. 7 ಗಂಟೆ ನಂತರ ಮುನ್ಸಿಪಲ್ ಕಾರ್ಪೊರೇಷನ್ ಬಳಿ ಹೋಗಿ ಕಟ್ಟಿಗೆಗೆ ಸಹಾಯ ಮಾಡುವಂತೇ ಬೇಡಿಕೊಂಡೆ. ಆದರೆ, ಮನವಿ ನಿರಾಕರಿಸಿದ ಅವರು ರು.2,500 ಹಣವನ್ನು ನೀಡುವಂತೆ ಕೇಳಿದರು. ಆದರೆ, ನನ್ನ ಬಳಿ ಅಷ್ಟೊಂದು ಹಣವಿರಲಿಲ್ಲ. ನಂತರ ಮುಂದ್ರಾ ನಗರಕ್ಕೆ ಹೋಗಿ ಅಲ್ಲಿ ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡೆ. ಸಹಾಯ ಮಾಡಲು ನಿರಾಕರಿಸಿದ ಅವರು, ಭಿಲ್ ಸಮುದಾಯದ ಕೌನ್ಸಿಲರ್ ನ್ನು ಭೇಟಿಯಾಗುವಂತೆ ತಿಳಿಸಿದರು. ಇದರಂತೆ ಅವರನ್ನು ಭೇಟಿಯಾದಾಗ ಅವರೂ ಕೂಡ ಯಾವುದೇ ಸಹಾಯವನ್ನು ಮಾಡಲಿಲ್ಲ ಎಂದು ಜಗದೀಶ್ ಅವರು ಹೇಳಿಕೊಂಡಿದ್ದಾರೆ.

ಮತ್ತೊಬ್ಬ ಅಧಿಕಾರಿ ಪತ್ನಿಯ ದೇಹವನ್ನು ಹತ್ತಿರದಲ್ಲಿರುವ ನದಿಯೊಂದಕ್ಕೆ ಎಸೆಯುವಂತೆ ತಿಳಿಸಿದರು. ತದನಂತರ ರತ್ನಾಗರ್ಹ್ ಪ್ರದೇಶದಲ್ಲಿ ಪತ್ನಿಯ ಮೃತದೇಹವನ್ನು ಹೂಳಲು ನಿರ್ಧರಿಸಿ ಸ್ಥಳಕ್ಕೆ ಹೋದೆ. ಆದರೆ, ಹೂಳುವುದಕ್ಕೆ ಆರ್ ಎಸ್ಎಸ್ ಸದಸ್ಯನೊಬ್ಬ ವಿರೋಧ ವ್ಯಕ್ತಪಡಿಸಿದ್ದ. ಸ್ಥಳಕ್ಕೆ ಮತ್ತಷ್ಟು ಜನರನ್ನು ಕರೆತಂದು ಕೂಡಲೇ ಸ್ಥಳವನ್ನು ಬಿಟ್ಟು ಹೋಗುವಂತೆ ತಿಳಿಸಿದ.

ಪತ್ನಿ ಸತ್ತು 12 ಗಂಟೆ ಕಳೆದರೂ ಅಂತಿಮ ಸಂಸ್ಕಾರ ಮಾಡಲು ಸಾಧ್ಯವಾಗಲಿಲ್ಲ. ಅಂತಿಮ ಸಂಸ್ಕಾರ ಮಾಡಲು ನನ್ನ ಬಳಿ ಯಾವುದೇ ಆಯ್ಕೆಯಿರಲಿಲ್ಲ. ಇದೇ ವೇಳೆ ಕಳೆದ 22 ದಿನಗಳಿಂದಲೂ ರಸ್ತೆಯೊಂದು ದುರಾವಸ್ಥೆಯಲ್ಲಿರುವುದು ಕಾಣಿಸಿತು. ಇದೇ ರಸ್ತೆಗೆ ಹೋಗಿ ಕಸ ಹಾಗೂ ಪ್ಲಾಸ್ಟಿಕ್ ಬ್ಯಾಗ್ ಮತ್ತು ಸ್ವಲ್ಪ ಕಟ್ಟಿಗೆಯನ್ನು ಸಂಗ್ರಹಿಸಿ ಪತ್ನಿಯ ಅಂತಿಮ ಸಂಸ್ಕಾರವನ್ನು ಮಾಡಿದೆ ಎಂದು ಜಗದೀಶ್ ನೋವಿನಿಂದ ಹೇಳಿಕೊಂಡಿದ್ದಾರೆ.

ನಾವು ಭಿಲ್ ಸಮುದಾಯಕ್ಕೆ ಸೇರಿದವರಾಗಿದ್ದು, ಮರ ಕಡಿದರೆ ಮಾತ್ರವೇ ನಮ್ಮ ಹೊಟ್ಟೆ ತುಂಬುತ್ತದೆ. ಇನ್ನು ಕಟ್ಟಿಗೆ ಕೊಳ್ಳಲು ರು.2,500 ಎಲ್ಲಿಂದ ಬರಬೇಕು. ಹೀಗಾಗಿ ಈ ರೀತಿಯ ನಿರ್ಧಾರ ಕೈಗೊಂಡೆ. ನಮ್ಮ ಕೂಗು ಯಾರಿಗೂ ಕೇಳಿಸುವುದಿಲ್ಲ. ನಮ್ಮ ಸಮಸ್ಯೆಯನ್ನು ಕೇಳಲು ಇಲ್ಲಿ ಯಾರೂ ಇಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com