ಬೇರೆ ಪಕ್ಷದ ಒಳ್ಳೆಯ ನಾಯಕರು ಆಮ್ ಆದ್ಮಿ ಪಕ್ಷಕ್ಕೆ ಸೇರಬೇಕು: ಮನೀಶ್ ಸಿಸೋಡಿಯಾ

ಗೋವಾ ಚುನಾವಣೆಗೆ ಸಿದ್ಧತೆ ನಡೆಸಿಕೊಳ್ಳುತ್ತಿರುವ ಆಮ್ ಆದ್ಮಿ ಪಕ್ಷ ಅಲ್ಲಿನ ಆರ್ ಎಸ್ಎಸ್ ನ ಭಿನ್ನಮತೀಯ ಬಣವನ್ನು ಸೆಳೆಯಲು ಯತ್ನಿಸಿದ್ದು, ಬೇರೆ ಪಕ್ಷದಲ್ಲಿರುವ ಒಳ್ಳೆಯ ನಾಯಕರು ಆಮ್ ಆದ್ಮಿ ಪಕ್ಷವನ್ನು ಸೇರಬೇಕು ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕರೆ ನೀಡಿದ್ದಾರೆ.
ಮನಿಶ್ ಸಿಸೋಡಿಯಾ
ಮನಿಶ್ ಸಿಸೋಡಿಯಾ
Updated on: 

ಪಣಜಿ: ಗೋವಾ ಚುನಾವಣೆಗೆ ಸಿದ್ಧತೆ ನಡೆಸಿಕೊಳ್ಳುತ್ತಿರುವ ಆಮ್ ಆದ್ಮಿ ಪಕ್ಷ ಅಲ್ಲಿನ ಆರ್ ಎಸ್ಎಸ್ ನ ಭಿನ್ನಮತೀಯ ಬಣವನ್ನು ಸೆಳೆಯಲು ಯತ್ನಿಸಿದ್ದು, ಬೇರೆ ಪಕ್ಷದಲ್ಲಿರುವ ಒಳ್ಳೆಯ ನಾಯಕರು ಆಮ್ ಆದ್ಮಿ ಪಕ್ಷವನ್ನು ಸೇರಬೇಕು ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕರೆ ನೀಡಿದ್ದಾರೆ.

ಎರಡು ದಿನಗಳ ಗೋವಾ ಪ್ರವಾಸದಲ್ಲಿರುವ ದೆಹಲಿ ಉಪಮುಖ್ಯಮಂತ್ರಿ ಮನಿಶ್ ಸಿಸೋಡಿಯಾ, ಗೋವಾದಲ್ಲಿ ಆಮ್ ಆದ್ಮಿ ಪಕ್ಷದ ಪರ ಒಲವಿದ್ದು, ಬಿಜೆಪಿ ನಾಯಕರನ್ನು ಆಲಿಬಾಬಾ 40 ಕಳ್ಳರು ಎಂದು ಹೇಳಲಾಗುತ್ತದೆ ಎಂದು ವ್ಯಂಗ್ಯವಾಡಿದ್ದಾರೆ. 
ಬಿಜೆಪಿ ಸರ್ಕಾರದ ವಿರುದ್ಧ ಟೀಕೆ ಮಾಡಿರುವ ಆರ್ ಎಸ್ ಎಸ್ ನ ಭಿನ್ನಮತೀಯ ನಾಯಕ ಸುಭಾಷ್ ವೆಲಿಂಗ್ಕರ್ ಅವರನ್ನು ಬೆಂಬಲಿಸುವ ವಿಚಾರವಾಗಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಮನಿಶ್ ಸಿಸೋಡಿಯಾ, ಆಮ್ ಆದ್ಮಿ ಪಕ್ಷ ಬಿಜೆಪಿ ಹಾಗೂ ಕಾಂಗ್ರೆಸ್ ಗೆ ಸವಾಲಾಗಿ ಪರಿಣಮಿಸಿದೆ. ಬೇರೆ ಪಕ್ಷಗಳಲ್ಲಿರುವ ಒಳ್ಳೆಯ ನಾಯಕರು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಬೇಕೆಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com