ಗಣೇಶ ವಿಸರ್ಜನೆ ವೇಳೆ ಪೇದೆಯನ್ನು ನೀರಿನಲ್ಲಿ ಮುಳುಗಿಸಲು ಯತ್ನಿಸಿದ ಕಾರ್ಯಕರ್ತ

ಗಣೇಶ ವಿಗ್ರಹ ವಿಸರ್ಜನೆಯ ಕೊಳದಲ್ಲಿ ಕಾರ್ಯಕರ್ತನೊಬ್ಬ ಪೊಲೀಸ್ ಸಿಬ್ಬಂದಿಯೊರ್ವನನ್ನು ನೀರಿನಲ್ಲಿ ಮುಳುಗಿಸಲು ಯತ್ನಿಸಿದ ವಿಡಿಯೋ ಇದೀಗ ವೈರಲ್...
ಪೊಲೀಸ್ ಪೇದೆಯನ್ನು ನೀರಿನಲ್ಲಿ ಮುಳುಗಿಸಲು ಯತ್ನಿಸಿದ ದೃಶ್ಯ
ಪೊಲೀಸ್ ಪೇದೆಯನ್ನು ನೀರಿನಲ್ಲಿ ಮುಳುಗಿಸಲು ಯತ್ನಿಸಿದ ದೃಶ್ಯ
ಮುಂಬೈ: ಗಣೇಶ ವಿಗ್ರಹ ವಿಸರ್ಜನೆಯ ಕೊಳದಲ್ಲಿ ಕಾರ್ಯಕರ್ತನೊಬ್ಬ ಪೊಲೀಸ್ ಸಿಬ್ಬಂದಿಯೊರ್ವನನ್ನು ನೀರಿನಲ್ಲಿ ಮುಳುಗಿಸಲು ಯತ್ನಿಸಿದ ವಿಡಿಯೋ ಇದೀಗ ವೈರಲ್ ಆಗಿದೆ. 
ಮುಂಬೈ ಸಮೀಪದ ಕಲ್ಯಾಣ್ ನಲ್ಲಿನ ವಿಸರ್ಜನೆಯ ಕೊಳದಲ್ಲಿ ಗಣೇಶ್ ಬಿಡುವ ವೇಳೆ ಪೊಲೀಸ್ ಪೇದೆ ನಿತಿನ್ ದಗೋಡೆ ಅವರನ್ನು ಕಾರ್ಯಕರ್ತನೊಬ್ಬ ನೀರಿನಲ್ಲಿ ಮುಳುಗಿಸಿ ಒತ್ತಿ ಹಿಡಿದಿದ್ದಾನೆ. ಈ ವೇಳೆ ಪೇದೆ ತಮ್ಮ ಜೀವ ಉಳಿಸಿಕೊಳ್ಳಲು ಒದ್ದಾಡಿ ಮೇಲೆ ಬಂದಿದ್ದಾರೆ. ನೀರಿನ ಮೇಲೆ ಬಂದ ಪೇದೆಯನ್ನು ಕಾರ್ಯಕರ್ತ ಅವರ ತಲೆಯನ್ನು ಮತ್ತೆ ನೀರಿನಲ್ಲಿ ಒತ್ತಿದ್ದಾನೆ. ಬಳಿಕ ಆತನಿಂದ ತಪ್ಪಿಸಿಕೊಂಡ ಪೇದೆ ಮತ್ತೆ ನೀರಿನಿಂದ ಮೇಲೆ ಬಂದು ಆತನನ್ನು ದಡಕ್ಕೆ ಎಳೆದುಕೊಂಡು ಬಂದರು.
ಈ ವೇಳೆ ಅಲ್ಲೆ ಇದ್ದ ಮತ್ತಿಬ್ಬರು ಕಾರ್ಯಕರ್ತರು ಪೇದೆ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಇದೆಲ್ಲವನ್ನು ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. 
ಗಣೇಶ್ ವಿಗ್ರಹ ವಿಸರ್ಜನೆಯ ವೇಳೆ ಜನ ಸಮೂಹವನ್ನು ನಿಯಂತ್ರಿಸಲು ಪೊಲೀಸ್ ಪೇದೆ ದೊಗಾಡೆ ಅವರು ಲಾಠಿ ಪ್ರಯೋಗಿಸಿದ್ದಾರೆ. ಈ ಜಿದ್ದಿನಿಂದಾಗಿ ಕಾರ್ಯಕರ್ತ ದೊಗಾಡೆಯನ್ನು ನೀರಿನಲ್ಲಿ ಮುಳುಗಿಸಲು ಯತ್ನಿಸಿದ್ದಾನೆ ಎನ್ನಲಾಗಿದೆ. ಸದ್ಯ ಕಾರ್ಯಕರ್ತನ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com