ಪಾಕ್ ಮೂಲದ ಹಿಂದೂ ಬಾಲಕಿಗೆ ದೆಹಲಿ ಶಾಲೆಯಿಂದ ಪಾಠ; ಸುಷ್ಮಾ ಭರವಸೆ

ಪಾಕಿಸ್ತಾನ ಮೂಲದ ಹಿಂದೂ ಬಾಲಕಿಗೆ ದೆಹಲಿಯಲ್ಲಿ ಪ್ರವೇಶ ಕೊಡಿಸುವುದಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಭಾನುವಾರ ಭರವಸೆ ನೀಡಿದ್ದಾರೆ...
ಪಾಕ್ ಮೂಲದ ಹಿಂದೂ ಬಾಲಕಿಗೆ ದೆಹಲಿ ಶಾಲೆಯಿಂದ ಪಾಠ; ಸುಷ್ಮಾ ಭರವಸೆ
ಪಾಕ್ ಮೂಲದ ಹಿಂದೂ ಬಾಲಕಿಗೆ ದೆಹಲಿ ಶಾಲೆಯಿಂದ ಪಾಠ; ಸುಷ್ಮಾ ಭರವಸೆ

ನವದೆಹಲಿ: ಪಾಕಿಸ್ತಾನ ಮೂಲದ ಹಿಂದೂ ಬಾಲಕಿಗೆ ದೆಹಲಿಯಲ್ಲಿ ಪ್ರವೇಶ ಕೊಡಿಸುವುದಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಭಾನುವಾರ ಭರವಸೆ ನೀಡಿದ್ದಾರೆ.

ಮಧು ಎಂಬ ಬಾಲಕಿ ಪಾಕಿಸ್ತಾನಿ ಎಂಬ ಕಾರಣಕ್ಕೆ ದೆಹಲಿ ಶಾಲೆಯಲ್ಲಿ ಪ್ರವೇಶ ನೀಡುತ್ತಿಲ್ಲ ಎಂದು ಹೇಳಿ ಕೆಲ ದಿನಗಳ ಹಿಂದಷ್ಟೇ ಖಾಸಗಿ ವಾಹಿನಿಯೊಂದರಲ್ಲಿ ಸುದ್ದಿ ಪ್ರಸಾರವಾಗಿತ್ತು.

ಇದರಂತೆ ಶುಕ್ರವಾರ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದ ಸುಷ್ಮಾ ಸ್ವರಾಜ್ ಅವರು ಶಾಲಾ ಪ್ರವೇಶಾತಿ ಕುರಿತಂತೆ ಸುದ್ದಿಯನ್ನು ನೋಡಿದ್ದೇನೆ. ಶನಿವಾರ ಸಂಜೆ 7 ಗಂಟೆಗೆ ಬಾಲಕಿಯನ್ನು ಭೇಟಿಯಾಗಲಿದ್ದೇನೆಂದು ಹೇಳಿದ್ದರು. ಇದರಂತೆ ಬಾಲಕಿಯನ್ನು ನಿನ್ನೆ ಭೇಟಿ ಮಾಡಿರುವ ಸುಷ್ಮಾ ಸ್ವರಾಜ್ ಅವರು ದೆಹಲಿ ಶಾಲೆಯಲ್ಲಿ ಪ್ರವೇಶ ಕೊಡಿಸುವುದಾಗಿ ಭರವಸೆ ನೀಡಿದ್ದಾರೆಂದು ತಿಳಿದುಬಂದಿದೆ.

ಸುಷ್ಮಾ ಸ್ವರಾಜ್ ಅವರ ಭರವಸೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಬಾಲಕಿ ಮಧು, ನಾನು ಪಾಕಿಸ್ತಾನದವಳಾಗಿದ್ದರಿಂದ ನನ್ನ ಬಳಿ ಆಧಾರ್ ಕಾರ್ಡ್ ಇಲ್ಲವೆಂದು ಶಾಲೆಯಲ್ಲಿ ಪ್ರವೇಶ ನೀಡುತ್ತಿರಲಿಲ್ಲ. ಶಾಲಾ ಪ್ರವೇಶ ಕುರಿತಂತೆ ಸುಷ್ಮಾ ಸ್ವರಾಜ್ ಅವರು ಕರೆ ಮಾಡಿದ್ದರು. ಪ್ರವೇಶ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. ಈ ಬಗ್ಗೆ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರ ಬಳಿಯೂ ಮಾತುಕತೆ ನಡೆಸಿದ್ದಾರೆ. ಸೋಮವಾರ ಪ್ರವೇಶ ದೊರೆಯುವ ವಿಶ್ವಾಸವಿದೆ ಎಂದು ಹೇಳಿದ್ದಾಳೆ,

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com