ಆರ್‍‍ಜೆಡಿ ಮಾಜಿ ಸಂಸದ ಶಹಾಬುದ್ದೀನ್ ಜಾಮೀನು ರದ್ದು ಕೋರಿ ಸುಪ್ರೀಂಗೆ ಬಿಹಾರ ಸರ್ಕಾರ ಮನವಿ

ವಿವಾದಿತ ಆರ್ ಜೆಡಿ ಪ್ರಭಾವಿ ನಾಯಕ ಮೊಹಮ್ಮದ್ ಶಹಾಬುದ್ದೀನ್ ಬಿಡುಗಡೆದೆ ಸಂಬಂಧಿಸಿದಂತೆ ತೀವ್ರ ಟೀಕೆಗೆ ಗುರಿಯಾಗಿದ್ದ ನಿತಿಶ್ ಕುಮಾರ್...
ಶಹಾಬುದ್ದೀನ್
ಶಹಾಬುದ್ದೀನ್
Updated on: 
ಪಾಟ್ನಾ: ವಿವಾದಿತ ಆರ್ ಜೆಡಿ ಪ್ರಭಾವಿ ನಾಯಕ ಮೊಹಮ್ಮದ್ ಶಹಾಬುದ್ದೀನ್ ಬಿಡುಗಡೆದೆ ಸಂಬಂಧಿಸಿದಂತೆ ತೀವ್ರ ಟೀಕೆಗೆ ಗುರಿಯಾಗಿದ್ದ ನಿತಿಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರ, ಇದೀಗ ಆರ್‍‍ಜೆಡಿ ಮಾಜಿ ಸಂಸದನ ಜಾಮೀನು ರದ್ದು ಕೋರಿ ಸುಪ್ರೀಂ ಕೋರ್ಟ್ ಮನವಿ ಸಲ್ಲಿಸಲು ನಿರ್ಧರಿಸಿದೆ.
ಈ ಮಧ್ಯೆ, ಪ್ರತಿಪಕ್ಷ ಎನ್ ಡಿಎ ಪತ್ರಕರ್ತ ರಾಜ್ ದಿಯೊ ರಂಜನ್ ಕೊಲೆ ಪ್ರಕರಣ ಸಂಬಂಧ ಶಹಾಬುದ್ದೀನ್ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದೆ. ಈ ಎಲ್ಲಾ ಬೆಳವಣಿಗಗಳ ನಂತರ ಆರ್ ಜೆಡಿ ನಾಯಕ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಮುಂದಾಗಿದೆ.
11 ವರ್ಷಗಳ ಕಾರಾಗೃಹ ಶಿಕ್ಷೆ ಅನುಭವಿಸಿದ ನಂತರವೂ ಅವರ ಜಾಮೀನಿನ ಬಗ್ಗೆ ರಾಜ್ಯ ಸರ್ಕಾರಕ್ಕೆ ತೃಪ್ತಿ ಇರದಿದ್ದರೆ ಸಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಬಹುದು ಎಂದು ಜೆಡಿಯು ವಕ್ತಾರ ಅಜಯ್ ಅಲೋಕ್ ಅವರು ಹೇಳಿದ್ದಾರೆ. 
ಈ ಹಿಂದೆಯೇ ಹಲವು ಈ ಬಾರಿ ರಾಜ್ಯ ಸರ್ಕಾರಗಳು ಈ ರೀತಿ ಮಾಡಿವೆ. ಈಗ ಶಹಾಬುದ್ದೀನ್ ಪ್ರಕರಣದಲ್ಲೂ ಅದನ್ನು ಅನುಸರಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ರಾಜ್ ದಿಯೊ ರಂಜನ್ ಕೊಲೆ ಪ್ರಕರಣ ಹಾಗೂ ಸಿವಾನ್‍  ಎಂಬಲ್ಲಿ ನಡೆದ ಸಹೋದರರ ಹತ್ಯೆ ಪ್ರಕರಣದಲ್ಲಿನ ಸಾಕ್ಷಿದಾರರನ್ನು ಹತ್ಯೆಗೈದ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಶಹಾಬುದ್ದೀನ್ ಕಳೆದ ಶನಿವಾರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. 
ಶಹಾಬುದ್ದೀನ್‌ ಬಿಡುಗಡೆಗೆ ಸಂಬಂಧಿಸಿದಂತೆ ನಿತಿಶ್ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೆ ಟ್ವೀಟರ್‌ ನಂತಹ ಸಾಮಾಜಿಕ ತಾಣಗಳಲ್ಲಿ ಭಾರೀ ಟೀಕೆಗಳು ವ್ಯಕ್ತವಾಗಿದ್ದವು. 40 ಕೇಸ್‌ ಹೊಂದಿರುವ ವ್ಯಕ್ತಿ ಬಿಡುಗಡೆಯಾಗಿದ್ದು ,ಲಾಲು-ನಿತಿಶ್‌ ಸರಕಾರಕ್ಕೆ ನಾಚಿಕೆಯಾಗಬೇಕು ಎಂದು ಟೀಕಿಸಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com