66 ನೇ ಜನ್ಮದಿನ: ತಾಯಿಯ ಆಶೀರ್ವಾದ ಪಡೆದ ಪ್ರಧಾನಿ ನರೇಂದ್ರ ಮೋದಿ

ಸೆ.17 ರಂದು 66 ನೇ ವಸಂತಕ್ಕೆ ಕಾಲಿಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಗೆ ತೆರಳಿ ತಾಯಿಯ ಆಶೀರ್ವಾದ ಪಡೆದಿದ್ದಾರೆ.
66 ನೇ ಜನ್ಮದಿನ: ತಾಯಿಯ ಆಶೀರ್ವಾದ ಪಡೆದ ಪ್ರಧಾನಿ ನರೇಂದ್ರ ಮೋದಿ
66 ನೇ ಜನ್ಮದಿನ: ತಾಯಿಯ ಆಶೀರ್ವಾದ ಪಡೆದ ಪ್ರಧಾನಿ ನರೇಂದ್ರ ಮೋದಿ
Updated on: 

ಗಾಂಧಿನಗರ:  ಸೆ.17 ರಂದು 66 ನೇ ವಸಂತಕ್ಕೆ ಕಾಲಿಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಗೆ ತೆರಳಿ ತಾಯಿಯ ಆಶೀರ್ವಾದ ಪಡೆದಿದ್ದಾರೆ.

ಸಹೋದರ ಪಂಕಜ್ ಮೋದಿ ಅವರ ಮನೆಯಲ್ಲಿರುವ ಅವರ ತಾಯಿ ಹೀರಾಬೆನ್ ಅವರನ್ನು ಭೇಟಿ ಮಾಡಿದ್ದು ಆಶೀರ್ವಾದ ಪಡೆದಿರುವ ಪ್ರಧಾನಿ, ಸುಮಾರು 25 ನಿಮಿಷ ತಾಯಿಯೊಂದಿಗೆ ಮಾತನಾಡಿದ್ದಾರೆ. ನಂತರ ಗುಜರಾತ್ ನ ರಾಜಭವನಕ್ಕೆ ತೆರಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ತಮ್ಮ  ಜನ್ಮದಿನವನ್ನು ಗುಜರಾತ್ ನ ಬುಡಕಟ್ಟು ಹಾಗೂ ದಿವ್ಯಾಂಗ ವ್ಯಕ್ತಿಗಳೊಂದಿಗೆ ಆಚರಿಸುತ್ತಿರುವುದು ಈ ಬಾರಿ ವಿಶೇಷವಾಗಿದೆ.    

ಇನ್ನು ಪ್ರಧಾನಿ ಮೋದಿ ತಮ್ಮ ಜನ್ಮದಿನದಂದೇ ಗುಜರಾತ್ ನ ಬುಡಕಟ್ಟು ಜಿಲ್ಲೆಗೆ ನೆರವಾಗುವ ಹಲವು ಯೋಜನೆಗಳನ್ನು ಉದ್ಘಾಟಿಸಲಿದ್ದು, ದಿವ್ಯಾಂಗರಿಗೆ ಸಹಾಕಾರಿಯಾಗುವ ಉಪಕರಣಗಳನ್ನು ವಿತರಿಸಲಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com