ಒಡಿಶಾ: ಸತ್ತ ಶಿಶುವಿನ ಹೆರಿಗೆ ನಂತರ ಮೃತಪಟ್ಟ ಬುಡಕಟ್ಟು ಮಹಿಳೆ

ಮತ್ತೊಂದು ಆಘಾತಕಾರಿ ಘಟನೆಯೊಂದರಲ್ಲಿ, 102 ಆಂಬ್ಯುಲೆನ್ಸ್ ಪಡೆಯಲು ಮಂಚದಲ್ಲಿ ಹೊತ್ತುಕೊಂಡು...
ಹೆರಿಗೆ ನೋವು ಕಾಣಿಸಿಕೊಂಡಾಗ ಧನೇಯಳನ್ನು ಮಂಚದಲ್ಲಿ ಕೂರಿಸಿಕೊಂಡು ಆಸ್ಪತ್ರೆಗೆ ಕರೆದೊಯ್ಯುತ್ತಿರುವುದು.
ಹೆರಿಗೆ ನೋವು ಕಾಣಿಸಿಕೊಂಡಾಗ ಧನೇಯಳನ್ನು ಮಂಚದಲ್ಲಿ ಕೂರಿಸಿಕೊಂಡು ಆಸ್ಪತ್ರೆಗೆ ಕರೆದೊಯ್ಯುತ್ತಿರುವುದು.
ರಾಯಗಢ: ಮತ್ತೊಂದು ಆಘಾತಕಾರಿ ಘಟನೆಯೊಂದರಲ್ಲಿ, 102 ಆಂಬ್ಯುಲೆನ್ಸ್ ಪಡೆಯಲು ಮಂಚದಲ್ಲಿ ಹೊತ್ತುಕೊಂಡು ಹೋಗುತ್ತಿರುವಾಗ ಮಹಿಳೆಯೂ ತೀರಿಹೋದ ಘಟನೆ ರಾಯಗಢ ಜಿಲ್ಲೆಯಲ್ಲಿ ನಡೆದಿದೆ. ಮಹಿಳೆ ಬುಡಕಟ್ಟು ಜನಾಂಗಕ್ಕೆ ಸೇರಿದವರಾಗಿದ್ದು, ರಾಜ್ಯದಲ್ಲಿ ಜನರಿಗೆ ಸರಿಯಾದ ಆರೋಗ್ಯ ಸೇವೆ ಸಿಗುವಲ್ಲಿನ ನ್ಯೂನತೆಯನ್ನು ಇದು ಎತ್ತಿ ತೋರಿಸುತ್ತದೆ.
ಮಹಿಳೆಯನ್ನು ಧನೇಯ ಹನ್ಶಬಾನ್ಶು ಎಂದು ಗುರುತಿಸಲಾಗಿದ್ದು, ರಾಯಗಢ ಜಿಲ್ಲೆಯ ಗಾಗುಡಿಮಾಲಾ ಗ್ರಾಮಕ್ಕೆ ಸೇರಿದವಳಾಗಿದ್ದಾಳೆ. ಜಿಲ್ಲಾ ಕೇಂದ್ರ ಆಸ್ಪತ್ರೆಗೆ ಕರೆದೊಯ್ಯುತ್ತಿರುವಾಗ ದಾರಿಮಧ್ಯೆಯೇ ಅಸುನೀಗಿದ್ದಾಳೆ. ಅದಕ್ಕೆ ಮುನ್ನ ಆಕೆಯ ಹೊಟ್ಟೆಯಲ್ಲಿ ಮಗು ಸತ್ತು ಹೋಗಿತ್ತು. ಕಲ್ಯಾಣ್ ಸಿಂಗ್ ಪುರ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಗುವಿನ ಹೆರಿಗೆಯಾದ ನಂತರ ಆಕೆಯ ದೇಹ ಸ್ಥಿತಿ ಇನ್ನೂ ಹದಗೆಟ್ಟಿತ್ತು. ಹೀಗಾಗಿ ಜಿಲ್ಲಾಸ್ಪತ್ರೆಗೆ ಆಕೆಯನ್ನು ಸಂಬಂಧಿಕರು ಮಂಚದಲ್ಲಿ ಕೂರಿಸಿಕೊಂಡು ಕರೆದೊಯ್ಯುತ್ತಿದ್ದರು. ಈ ವೇಳೆ ಮಾರ್ಗ ಮಧ್ಯದಲ್ಲಿ ಅಸುನೀಗಿದ್ದಾಳೆ.
ಧನೆಯಾಳಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಆಕೆಯ ಪತಿ, 102 ತುರ್ತು ಆಂಬ್ಯುಲೆನ್ಸ್ ಸೇವೆಗೆ ಕರೆ ಮಾಡಿದ್ದರಂತೆ. ಆದರೆ ಮನೆ ತನಕ ಆಂಬ್ಯುಲೆನ್ಸ್ ಬರುವುದಿಲ್ಲವೆಂದು ಮನೆಯಿಂದ 2 ಕಿಲೋ ಮೀಟರ್ ದೂರದವರೆಗೆ ಮಂಚದಲ್ಲಿ ಕೂರಿಸಿಕೊಂಡು ಸಮುದಾಯ ಆಸ್ಪತ್ರೆಗೆ ಕರೆದೊಯ್ದರಂತೆ. ಅಲ್ಲಿ ಧನೆಯಾ ಸತ್ತ ಶಿಶುವಿಗೆ ಜನ್ಮ ನೀಡಿದ್ದಳು. ನಂತರ ವಿಪರೀತ ರಕ್ತಸ್ರಾವವಾಗುತ್ತಿತ್ತು. ಅಲ್ಲಿಂದ ಜಿಲ್ಲಾಸ್ಪತ್ರೆಗೆ ಕರೆದೊಯ್ಯುತ್ತಿರುವಾಗ ಮಾರ್ಗ ಮಧ್ಯೆಯೇ ತೀರಿಹೋದಳು. 
ಸರಿಯಾದ ಸಮಯಕ್ಕೆ ನಮ್ಮ ಮನೆಬಾಗಿಲಿಗೆ ಆಂಬ್ಯುಲೆನ್ಸ್ ಬರದ ಕಾರಣ ನಮಗೆ ಆಕೆಯನ್ನು ಬದುಕಿಸಲು ಸಾಧ್ಯವಾಗಲಿಲ್ಲ. ತಿಂಗಳು ತುಂಬುವ ಮೊದಲೇ ಹೆರಿಗೆಯಾದ್ದರಿಂದ ತೀವ್ರ ನೋವು ಇತ್ತು. ಆಕೆ ಡಿಸೆಂಬರ್ 7ರಂದು ಹೆರಿಗೆಯಾಗುವ ದಿನಾಂಕವನ್ನು ವೈದ್ಯರು ನೀಡಿದ್ದರು. ಇನ್ನು ಆ ಗ್ರಾಮಕ್ಕೂ ಕೂಡ ವಾಹನ ಓಡಾಡುವ ರಸ್ತೆಯಿಲ್ಲ. ಅಗತ್ಯವಿದ್ದಲ್ಲಿ  ತುರ್ತುಸೇವೆಗೆ ಕೊರತೆಯಿದೆ ಎನ್ನುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com