ಉರಿ ಉಗ್ರ ದಾಳಿ: ಪಾಕ್ ವಿರುದ್ಧ ಪ್ರತೀಕಾರ ತೆಗೆದುಕೊಳ್ಳಿ: ಕೇಂದ್ರಕ್ಕೆ ಶಿವಸೇನೆ

ಉರಿ ಸೆಕ್ಟರ್ ಮೇಲೆ ದಾಳಿ ಮಾಡಿ 18 ಯೋಧರನ್ನು ಬಲಿ ಪಡೆದುಕೊಂಡಿರುವ ಪಾಕಿಸ್ತಾನದ ವಿರುದ್ದ ಪ್ರತೀಕಾರ ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಶಿವಸೇನೆ...
ಶಿವಸೇನೆ
ಶಿವಸೇನೆ

ಮುಂಬೈ: ಉರಿ ಸೆಕ್ಟರ್ ಮೇಲೆ ದಾಳಿ ಮಾಡಿ 18 ಯೋಧರನ್ನು ಬಲಿ ಪಡೆದುಕೊಂಡಿರುವ ಪಾಕಿಸ್ತಾನದ ವಿರುದ್ದ ಪ್ರತೀಕಾರ ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಶಿವಸೇನೆ ಆಗ್ರಹಿಸಿದೆ.

ಈ ಕುರಿತಂತೆ ತನ್ನ ಮುಖವಾಣಿ ಸಾಮ್ನಾದಲ್ಲಿ ಬರೆದುಕೊಂಡಿರುವ ಶಿವಸೇನೆಯು. ದಾಳಿ ಮಾಡುತ್ತಿರುವ ಇಸ್ಲಾಮಾಬಾದ್ ಗೆ ಸೇನಾ ಭಾಷೆಯಿಂದಷ್ಟೇ ಅರ್ಥ ಮಾಡಿಸಬೇಕಿದೆ. ಪಾಕಿಸ್ತಾನ ಲಜ್ಜೆಗೆಟ್ಟ ದೇಶವಾಗಿದ್ದು, ಕೇವಲ ಮಾತಿನ ಮೂಲಕ ಅದನ್ನು ಸೋಲಿಸುವುದಲ್ಲ, ಸೇನಾ ಭಾಷೆಯಿಂದ ಅರ್ಥ ಮಾಡಿಸಬೇಕಾಗಿದೆ ಎಂದು ಹೇಳಿಕೊಂಡಿದೆ.

ಪಾಕಿಸ್ತಾನ ಭಯೋತ್ಪಾದನಾ ದೇಶವಾಗಿದ್ದು, ಭಯೋತ್ಪಾದನಾ ದೇಶವೆಂದು ಘೋಷಣೆ ಮಾಡುವುದಕ್ಕೆ ಶ್ರಮವೇಕೆ ಪಡಬೇಕು? ಪಾಕಿಸ್ತಾನದ ಬಣ್ಣ ಇಡೀ ವಿಶ್ವಕ್ಕೆ ತಿಳಿದಿದೆ. ಅಧಿಕಾರಕ್ಕೆ ಬರುವಾಗ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನೀಡಿದ್ದ ಭರವಸೆಗಳು ಇಂದು ಎಲ್ಲಿಗೆ ಹೋಗಿದೆ?...ಉರಿ ಸೆಕ್ಟರ್ ನಲ್ಲಿ ಉಗ್ರರು ದಾಳಿ ಮಾಡಿದ್ದಾರೆ. ಆದರೆ, ಮೋದಿಯವರು ತಾವು ನೀಡಿದ್ದ ಒಂದು ಭರವಸೆಗೂ ಬದ್ಧರಾಗಿಲ್ಲ.

ಉರಿ ದಾಳಿ ಹಿಂದೆ ಇರುವವರನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಬಿಡುವುದಿಲ್ಲ. ಶಿಕ್ಷೆ ನೀಡಿಯೇ ತೀರುತ್ತೇವೆ. ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿ ಹುತಾತ್ಮರಾದ ಎಲ್ಲಾ ಯೋಧರಿಗೂ ಸೆಲ್ಯೂಟ್ ಮಾಡುತ್ತೇನೆ. ಯೋಧರ ಕುಟುಂಬಸ್ಥರ ಕುರಿತಂತೆ ಸಂತಾಪ ಸೂಚಿಸುತ್ತೇನೆಂದು ಟ್ವಿಟರ್ ನಲ್ಲಿ ಮೋದಿಯವರು ಹೇಳಿದ್ದರು.

ಇದೇ ರೀತಿಯಾಗಿ ಪಠಾಣ್ ಕೋಟ್ ದಾಳಿ ನಡೆದಾಗಲು ಟ್ವಿಟರ್ ನಲ್ಲಿ ಹೇಳಿಕೊಂಡಿದ್ದರು. ಇದರಿಂದ ಏನಾಯಿತು? ಪ್ರತೀಕಾರ ತೀರಿಸಿಕೊಳ್ಳುವ ಬದಲು ಅದೇ ರಾಷ್ಟ್ರದ ಜೊತೆಗೆ ಉತ್ತಮ ಸಂಬಂಧ ಹೊಂದಲು ಪ್ರಯತ್ನಗಳನ್ನು ನಡೆಸಲಾಯಿತು. ಪಠಾಣ್ ಕೋಟ್ ದಾಳಿ ವೇಳೆ ಯೋಧರ ತ್ಯಾಗ ಇಂದು ವ್ಯರ್ಥವಾಗಿದೆ. ಪಠಾಣ್ ಕೋಟ್ ದಾಳಿ ನಡೆದಾಗಲೂ ಪಾಕಿಸ್ತಾನಕ್ಕೆ ಸೂಕ್ತ ಪಾಠವನ್ನು ಕಲಿಸಲಾಗುತ್ತದೆ ಎಂದು ಹೇಳಲಾಗಿತ್ತು. ಈಗಲೂ ಇದೇ ಹೇಳಿಕೆಯನ್ನೇ ನೀಡಲಾಗುತ್ತಿದೆ ಎಂದು ಹೇಳಿದೆ.

ಇದೇ ವೇಳೆ ಮಹಾಭಾರತದ ಒಂದು ಭಾಗವನ್ನು ಉದಾಹರಣೆಯಾಗಿ ನೀಡಿರುವ ಶಿವಸೇನೆಯು, ದ್ರೌಪದಿಯ ಮಾನ ಹರಣ ಮಾಡಿದ ಕೀಚಕನ ವಿರುದ್ಧ ಭೀಮ ಪ್ರತೀಕಾರ ತೀರಿಸಿಕೊಂಡಿದ್ದ. ಇದೇ ರೀತಿಯಲ್ಲಿಯೇ ಭಾರತ ಪಾಕಿಸ್ತಾನದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಬೇಕಿದೆ ಎಂದು ಹೇಳಿಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com