'ಉರಿ ದಾಳಿ': ಪಾಕ್ ವಿರುದ್ಧ ಜಲ ಯುದ್ಧದ ಸುಳಿವು ನೀಡಿದ ಭಾರತ!

ಪಾಕಿಸ್ತಾನ ಗಡಿಯೊಳಗೆ ನುಸುಳುವ ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿರುವುದು ಸ್ಪಷ್ಟವಾಗಿದೆ ಎಂದು ಹೇಳಿರುವ ಭಾರತ, ತಾನೂ ಸಹ ಪಾಕಿಸ್ತಾನಕ್ಕೆ ಪರೋಕ್ಷ ಹೊಡೆತ ನೀಡುವ ಸುಳಿವು ನೀಡಿದೆ.
ವಿಕಾಸ್ ಸ್ವರೂಪ್
ವಿಕಾಸ್ ಸ್ವರೂಪ್

ನವದೆಹಲಿ: ಪಾಕಿಸ್ತಾನ ಗಡಿಯೊಳಗೆ ನುಸುಳುವ ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿರುವುದು ಸ್ಪಷ್ಟವಾಗಿದೆ ಎಂದು ಹೇಳಿರುವ ಭಾರತ, ತಾನೂ ಸಹ ಪಾಕಿಸ್ತಾನಕ್ಕೆ ಪರೋಕ್ಷ ಹೊಡೆತ ನೀಡುವ ಸುಳಿವು ನೀಡಿದೆ.  

ಭಾರತದ ವಿರುದ್ಧ ಭಯೋತ್ಪಾದನೆಯನ್ನು ನಿರಂತರವಾಗಿ ನಿರಾಕರಿಸುತ್ತಾ ಬಂದಿರುವ ಪಾಕಿಸ್ತಾನ, ಉರಿ ದಾಳಿಯಲ್ಲೂ ತನ್ನ ಪಾತ್ರವನ್ನು ನಿರಾಕರಿಸಿದೆ. ಈ ಹಿನ್ನೆಲೆಯಲ್ಲಿ ಭಾರತ 56- ವರ್ಷಗಳ ಹಳೆಯ ಇಂಡಸ್ ಇಂಡಸ್ ನೀರು ಒಪ್ಪಂದವನ್ನು ಪರಾಮರ್ಶೆಗೆ ಒಳಪಡಿಸುವುದರ ಬಗ್ಗೆ ಸುಳಿವು ನೀಡಿದೆ.

ಇಂಡಸ್ ನೀರು ಒಪ್ಪಂದಗಳಂತಹ ಒಪ್ಪಂದಗಳು ಕೆಲಸ ಮಾಡುವುದಿದ್ದರೆ ಉಭಯ ರಾಷ್ಟ್ರಗಳ ನಡುವೆ ಪರಸ್ಪರ ಸಹಕಾರ, ನಂಬಿಕೆ ಪ್ರಮುಖ ಪಾತ್ರ ವಹಿಸುತ್ತದೆ, ಕೇವಲ ಒಂದು ಕಡೆಯಿಂದ ಮಾತ್ರ ಇಂತಹ ಗಂಭೀರ ಒಪ್ಪಂದಗಳು ಕೆಲಸ ಮಾಡಲು ಸಾಧ್ಯವಿಲ್ಲ ಎಂದು ವಿದೇಶಾಂಗ ಇಲಾಖೆ ವಕ್ತಾರ ವಿಕಾಸ್ ಸ್ವರೂಪ್ ಹೇಳಿದ್ದಾರೆ.

ಪಾಕಿಸ್ತಾನಕ್ಕೆ ಸೌಹಾರ್ದತೆಯ ದೃಷ್ಟಿಯಿಂದ ನಿರಿ ಹಂಚಿಕೆ ಮಾಡಲಾಗುತ್ತಿದೆ ಎಂಬುದನ್ನು ಇಂಡಸ್ ನೀರು ಒಪ್ಪಂದದಲ್ಲೇ ಸ್ಪಷ್ಟಪಡಿಸಲಾಗಿದೆ ಆದ್ದರಿಂದ ಪರಸ್ಪರ ನಂಬಿಕೆ ಇಂತಹ ಒಪ್ಪಂದಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ವಿಕಾಸ್ ಸ್ವರೂಪ್ ತಿಳಿಸಿದ್ದಾರೆ. ಈ ಬಗ್ಗೆ ಮತ್ತಷ್ಟು ಮಾಹಿತಿ ಕೇಳಿದ ಪತ್ರಕರ್ತರಿಗೆ ಹೆಚ್ಚು ಮಾಹಿತಿ ನೀಡಲು ನಿರಾಕರಿಸಿರುವ ವಿಕಾಸ್ ಸ್ವರೂಪ್, ರಾಜತಾಂತ್ರಿಕ ನಡೆಗಳಲ್ಲಿ ಎಲ್ಲವನ್ನೂ ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಭಾರತ ಸರ್ಕಾರ ಪಾಕಿಸ್ತಾನಕ್ಕೆ ಆಂತರಿಕವಾಗಿಯೇ ಹೊಡೆತ ನೀಡಲು ನೀಡಲು ಎಲ್ಲಾ ರೀತಿಯಲ್ಲೂ ಸಜ್ಜಾಗಿದೆ ಎಂಬ ಸುಳಿವು ನೀಡಿದ್ದಾರೆ.
ಇಂಡಸ್ ಪಾತ್ರದಲ್ಲಿ ಹರಿಯುವ ಬಿಯಾಸ್, ರಾವಿ ಮತ್ತು ಸತ್ಲೆಜ್ ನದಿ ನೀರನ್ನು ಪಾಕಿಸ್ತಾನಕ್ಕೆ ಸೌಹಾರ್ದತೆಯ ದೃಷ್ಟಿಯಿಂದ ಬಿಡುಗಡೆ ಮಾಡಲು 1960ರಲ್ಲಿ ಅಂದಿನ ಪ್ರಧಾನಿ ಜವಾಹರ್ ಲಾಲ್ ನೆಹರು ಹಾಗು ಪಾಕ್ ಅಧ್ಯಕ್ಷ ಜನರಲ್ ಅಯೂಬ್ ಖಾನ್ ನಡುವೆ ಸಿಂಧು ನದಿ ನೀರು ಹಂಚಿಕೆ ಒಪ್ಪಂದ ನಡೆದಿತ್ತು. ಭಾರತ- ಪಾಕಿಸ್ತಾನದ ನಡುವೆ ಯುದ್ಧ ನಡೆದ ಸಂದರ್ಭದಲ್ಲೂ ಸಹ ಈ ಒಪ್ಪಂದಕ್ಕೆ ಯಾವುದೇ ರೀತಿಯ ಕುತ್ತು ಬಂದಿರಲಿಲ್ಲ. ಆದರೆ ಈಗ ಪಾಕಿಸ್ತಾನ ನಿರಂತರವಾಗಿ ಭಾರತದ ಮೇಲೆ ಭಯೋತ್ಪಾದಕ ದಾಳಿ ನಡೆಸುತ್ತಿದ್ದು, ಜೊತೆಗೆ ಅದರಲ್ಲಿ ತನ್ನ ಪಾತ್ರವನ್ನು ನಿರಾಕರಿಸುತ್ತಿರುವ ಹಿನ್ನೆಲೆಯಲ್ಲಿ  ಇಂಡಸ್ ನೀರು ಒಪ್ಪಂದವನ್ನು ಪರಾಮರ್ಶೆಗೆ ಒಳಪಡಿಸುವ ಮೂಲಕ ಭಾರತ ಪಾಕಿಸ್ತಾನಕ್ಕೆ ಯುದ್ಧ ಮಾಡದೇ ಬಲವಾದ ಹೊಡೆತ ನೀಡುವ ಸುಳಿವು ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com