ರಫೆಲ್ ಜೆಟ್ ಒಪ್ಪಂದಕ್ಕೆ ಭಾರತ- ಫ್ರಾನ್ಸ್ ಸಹಿ
ನವದೆಹಲಿ: ಫ್ರಾನ್ಸ್ ನಿಂದ 36 ರಾಫೆಲ್ ಫೈಟರ್ ಜೆಟ್ ಗಳನ್ನು ಖರೀದಿಸುವ ಒಪ್ಪಂದಕ್ಕೆ ಭಾರತ ಸಹಿ ಹಾಕಿದೆ.
ಫ್ರೆಂಚ್ ನ ರಕ್ಷಣಾ ಸಚಿವ ಜೀನ್ ಯೆಸ್ ಲೆ ಡ್ರಿಯಾನ್ ನವದೆಹಲಿಗೆ ಆಗಮಿಸಿದ್ದು, ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ರಾಫೆಲ್ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಒಪ್ಪಂದದ ಭಾಗವಾಗಿ ಇನ್ನು ಕೆಲವೇ ತಿಂಗಳುಗಳಲ್ಲಿ ಮೊದಲ ಎರಡು ಬ್ಯಾಚ್ ನ ರಾಫೆಲ್ ಜೆಟ್ ಗಳು ಭಾರತದ ಕೈ ಸೇರಲಿವೆ. ಒಪ್ಪಂದ ನಡೆದ 66 ತಿಂಗಳಲ್ಲಿ ಒಟ್ಟು 36 ರಾಫೆಲ್ ಜೆಟ್ ಗಳು ಭಾರತದ ಕೈಸೇರಲಿವೆ.
ಫ್ರಾನ್ಸ್ ನೊಂದಿಗೆ ಚೌಕಾಶಿ ಮೂಲಕ ಭಾರತ 7.8 ಬಿಲಿಯನ್ ಯುರೋಗಳಿಗೆ 36 ರಾಫೆಲ್ ಜೆಟ್ ಗಳನ್ನು ಖರೀದಿಸುವುದು ಅಂತಿಮವಾಗಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಮಾಡಿಕೊಳ್ಳಲಾಗಿದ್ದ ಒಪ್ಪಂದವನ್ನು ಮೋದಿ ಸರ್ಕಾರ ರದ್ದುಗೊಳಿಸಿ ಹೊಸ ಒಪ್ಪಂದಕ್ಕೆ ಮುಂದಾಗಿದ್ದು, ಇದರಿಂದಾಗಿ ಭಾರತಕ್ಕೆ 750 ಮಿಲಿಯನ್ ಯುರೋಗಳಷ್ಟು ಹಣ ಉಳಿತಾಯವಾಗಲಿದೆ. ಈ ರಾಫೆಲ್ ಮೆಟೊರೊ ಶ್ರೇಣಿಯ (ದೂರವ್ಯಾಪಿ) ಕ್ಷಿಪಣಿಯಾಗಿದ್ದು, 150 ಕಿ.ಮೀ ಸಾಗುವ ಸಾಮರ್ಥ್ಯ ಹೊಂದಿದೆ. ದೃಷ್ಠಿವ್ಯಾಪಿಗೂ ಮಿಗಿಲಾಗಿ ಸಾಗುವ ಸಾಮರ್ಥ್ಯ ಹೊಂದಿರುವ ಈ ಕ್ಷಿಪಣಿಯಲ್ಲಿ ಗುರಿ ತಪ್ಪುವ ಸಾಧ್ಯತೆ ಇತರ ಕ್ಷಿಪಣಿಗಳಿಗಿಂತ ಮೂರುಪಟ್ಟಿ ಕಡಿಮೆ ಇದೆ. ರಾಫೆಲ್ ಜೆಟ್ ಖರೀದಿ ಒಪ್ಪಂದಕ್ಕೆ ಜನವರಿ ತಿಂಗಳಲ್ಲಿ ಪ್ರಾನ್ಸ್ ಮತ್ತು ಭಾರತ ಸರ್ಕಾರಗಳು ಹಣಕಾಸು ವಿಚಾರ ಹೊರತುಪಡಿಸಿ ಸಹಿ ಹಾಕಿದ್ದವು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ