ಭಾರತ ಪಾಕಿಸ್ತಾನದೊಂದಿಗಿನ ದ್ವಿಪಕ್ಷೀಯ ಸಂಬಂಧ ಕಡಿದುಕೊಳ್ಳಬೇಕು: ಇದು ಶೇ.70 ರಷ್ಟು ಭಾರತೀಯರ ಅಭಿಪ್ರಾಯ

ಜಮ್ಮು-ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ಪಾಕಿಸ್ತಾನ ಭಯೋತ್ಪಾದಕ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಭಾರತ ಪಾಕಿಸ್ತಾನದೊಂದಿಗಿನ ಸಂಬಂಧವನ್ನು ಕಡಿದುಕೊಳ್ಳುವುದು ಸೂಕ್ತ ಎಂದು ಶೇ.70 ರಷ್ಟು ಭಾರತೀಯರು ಅಭಿಪ್ರಾಯಪಟ್ಟಿದ್ದಾರೆ.
ಭಾರತ ಪಾಕಿಸ್ತಾನದೊಂದಿಗಿನ ದ್ವಿಪಕ್ಷೀಯ ಸಂಬಂಧ ಕಡಿದುಕೊಳ್ಳಬೇಕು: ಇದು ಶೇ.70 ರಷ್ಟು ಭಾರತೀಯರ ಅಭಿಪ್ರಾಯ
ಭಾರತ ಪಾಕಿಸ್ತಾನದೊಂದಿಗಿನ ದ್ವಿಪಕ್ಷೀಯ ಸಂಬಂಧ ಕಡಿದುಕೊಳ್ಳಬೇಕು: ಇದು ಶೇ.70 ರಷ್ಟು ಭಾರತೀಯರ ಅಭಿಪ್ರಾಯ

ನವದೆಹಲಿ: ಜಮ್ಮು-ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ಪಾಕಿಸ್ತಾನ ಭಯೋತ್ಪಾದಕ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಭಾರತ ಪಾಕಿಸ್ತಾನದೊಂದಿಗಿನ ಸಂಬಂಧವನ್ನು ಕಡಿದುಕೊಳ್ಳುವುದು ಸೂಕ್ತ ಎಂದು ಶೇ.70 ರಷ್ಟು ಭಾರತೀಯರು ಅಭಿಪ್ರಾಯಪಟ್ಟಿದ್ದಾರೆ.

ಸಮೀಕ್ಷೆಯೊಂದರ ಪ್ರಕಾರ ಸೆ.18 ರಂದು ನಡೆದ ದಾಳಿಯಿಂದ ಭಾರತೀಯರು ಪಾಕಿಸ್ತಾನದ ವಿರುದ್ಧ ತೀವ್ರ ಆಕ್ರೋಶಗೊಂಡಿದ್ದು, ಭಾರತ ಪಾಕಿಸ್ತಾನದೊಂದಿಗೆ ಹೊಂದಿರುವ ಸಾಂಸ್ಕೃತಿಕ ಹಾಗು ಕ್ರೀಡಾ ಸಂಬಂಧವನ್ನು ಕಡಿದುಕೊಳ್ಳಬೇಕು ಎಂದು ಶೇ. 70 ರಷ್ಟು ಜನ ಒತ್ತಾಯಿಸಿದ್ದರೆ, ಶೇ.21 ರಷ್ಟು ಜನರು ಪಾಕಿಸ್ತಾನದೊಂದಿಗಿನ ಸಂಬಂಧವನ್ನು ಮುಂದುವರೆಸಬೇಕು ಎಂದಿದ್ದಾರೆ, ಇನ್ನು ಶೇ.9 ರಷ್ಟು ಜನರು ಗೊತ್ತಿಲ್ಲ ಎಂದು ಹೇಳಿದ್ದಾರೆ.

71,568 ಜನರು ಸಮೀಕ್ಷೆಯಲ್ಲಿ ತಮ್ಮ ಅಭಿಪ್ರಾಯ ತಿಳಿಸಿದ್ದು, ಬಹುತೇಕ ಜನರು ಉರಿ ದಾಳಿಗೆ ಭಾರತೀಯ ಸೇನೆ ನೀಡಿರುವ ಪ್ರತ್ಯುತ್ತರ ಹಾಗು ಎನ್ ಡಿಎ ಕಾರ್ಯವೈಖರಿಯಿಂದ ಸಮಾಧಾನಗೊಂಡಿದ್ದಾರೆ ಎಂದು ಸಮೀಕ್ಷಾ ವರದಿ ತಿಳಿಸಿದೆ. ಉರಿ ದಾಳಿಗೆ ಭಾರತ ಹೇಗೆ ಪ್ರತಿಕ್ರಿಯಿಸಬೇಕು ಎಂಬ ಪ್ರಶ್ನೆಗೆ ಉತ್ತರಿಸಿರುವ ಜನರ ಪೈಕಿ ಶೇ.49 ರಷ್ಟು ಜನರು ಮೊದಲು ಹಫೀಜ್ ಸಯೀದ್ ನಂತಹ ಭಯೋತ್ಪಾದಕರ ವಿರುದ್ಧ ಗೌಪ್ಯ ಕಾರ್ಯಾಚರಣೆ ನಡೆಸಬೇಕು ಎಂದು ಹೇಳಿದ್ದರೆ ಶೇ.44 ರಷ್ಟು ಜನರು ಪಾಕಿಸ್ತಾನದ ವಿರುದ್ಧ ನೇರ ಸೇನಾ ಕಾರ್ಯಾಚರಣೆ ನಡೆಸಬೇಕೆಂಬ ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com