ಆ್ಯಸಿಡ್ ದಾಳಿ
ದೇಶ
ಗಂಡ ಮರುಮದುವೆಯಾಗಿದ್ದಕ್ಕೆ ಪತ್ನಿಯಿಂದ ಆ್ಯಸಿಡ್ ದಾಳಿ
ಪತಿ ಮರು ಮದುವೆಯಾಗಿದ್ದಕ್ಕೆ ನೊಂದ ಪತ್ನಿ ಆತನ ಮೇಲೆ ಆ್ಯಸಿಡ್ ದಾಳಿ ನಡೆಸಿರುವ ಘಟನೆ ಜಮ್ಮುವಿನಲ್ಲಿ ನಡೆದಿದೆ.
ಜಮ್ಮು: ಪತಿ ಮರು ಮದುವೆಯಾಗಿದ್ದಕ್ಕೆ ಬೇಸರಗೊಂಡ ಪತ್ನಿ ಆತನ ಮೇಲೆ ಆ್ಯಸಿಡ್ ದಾಳಿ ನಡೆಸಿರುವ ಘಟನೆ ಜಮ್ಮುವಿನಲ್ಲಿ ನಡೆದಿದೆ.
ಜಮ್ಮುವಿನ ಖಥುವಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಪತಿ ಮೊಹಮ್ಮದ್ ದಿನ್ ಮೇಲೆ ಪತ್ನಿ ಶಮೀಮಾ ಅಖ್ತರ್ ಆ್ಯಸಿಡ್ ಎರಚಿದ್ದಾಳೆ.
ಕಳೆದ ಹತ್ತು ವರ್ಷಗಳ ಹಿಂದೆ ಇವರಿಬ್ಬರು ದಾಂಪತ್ಯಕ್ಕೆ ಕಾಲಿರಿಸಿದ್ದು, ಮಗಳ ಸಹಾಯ ಪಡೆದು ಗಂಡನ ಮೇಲೆ ಆ್ಯಸಿಡ್ ಹಾಕಿದ್ದು, ಆ್ಯಸಿಡ್ ದಾಳಿಯಿಂದಾಗಿ ಮೊಹಮ್ಮದ್ ದಿನ್ ಗಂಭೀರವಾಗಿ ಗಾಯಗೊಂಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ