ಬೆಂಬಲವಿಲ್ಲದೆ ಖಾಲಿ ಕೈಯಲ್ಲಿ ಪಾಕ್'ಗೆ ಹಿಂದಿರುಗಿದ ನವಾಜ್ ಶರೀಫ್: ಸಯೀದ್ ಅಕ್ಬರುದ್ದೀನ್

ಉಗ್ರ ಬುರ್ಹಾನ್ ವಾನಿಯನ್ನು ಪ್ರಶಂಸಿಸಿ ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಿದ್ದ ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಶರೀಫ್ ಯವರಿಗೆ ಯಾವುದೇ ಬೆಂಬಲ ವ್ಯಕ್ತವಾಗದೆ, ಇದೀಗ ಖಾಲಿ ಕೈಯಲ್ಲಿ ಪಾಕಿಸ್ತಾನಕ್ಕೆ...
ವಿಶ್ವಸಂಸ್ಥೆಯ ಭಾರತದ ರಾಯಭಾರಿ ಸಯೀದ್ ಅಕ್ಬರುದ್ದೀನ್
ವಿಶ್ವಸಂಸ್ಥೆಯ ಭಾರತದ ರಾಯಭಾರಿ ಸಯೀದ್ ಅಕ್ಬರುದ್ದೀನ್

ನವದೆಹಲಿ: ಉಗ್ರ ಬುರ್ಹಾನ್ ವಾನಿಯನ್ನು ಪ್ರಶಂಸಿಸಿ ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಿದ್ದ ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಶರೀಫ್ ಯವರಿಗೆ ಯಾವುದೇ ಬೆಂಬಲ ವ್ಯಕ್ತವಾಗದೆ, ಇದೀಗ ಖಾಲಿ ಕೈಯಲ್ಲಿ ಪಾಕಿಸ್ತಾನಕ್ಕೆ ಮತ್ತೆ ಹಿಂದಿರುಗಿದ್ದಾರೆಂದು ವಿಶ್ವಸಂಸ್ಥೆಯ ಭಾರತದ ರಾಯಭಾರಿ ಸಯೀದ್ ಅಕ್ಬರುದ್ದೀನ್ ಅವರು ಶನಿವಾರ ಹೇಳಿದ್ದಾರೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ 136 ರಾಷ್ಟ್ರಗಳು ಭಾಷಣ ಮಾಡಿದ್ದವು. ಪಾಕಿಸ್ತಾನ ದೇಶ ಮಾತ್ರ ತನ್ನ ಭಾಷಣದಲ್ಲಿ ಉಗ್ರ ಬುರ್ಹಾನ್ ವಾನಿ ವಿಚಾರವನ್ನು ಪ್ರಸ್ತಾಪಿಸಿತ್ತು. ಆದರೆ, ಯಾವೊಬ್ಬ ದೇಶ ಕೂಡ ಈ ಬಗ್ಗೆ ಮಾತನಾಡಲಿಲ್ಲ. ಇದರ ಅರ್ಥ ಪಾಕಿಸ್ತಾನ ಪ್ರಧಾನಿಯವರ ಈ ಭಾಷಣಕ್ಕೆ ಯಾವುದೇ ದೇಶಗಳು ಬೆಂಬಲ ನೀಡಲು ಸಿದ್ಧವಿಲ್ಲ ಎಂಬುದನ್ನು ಸೂಚಿಸುತ್ತದೆ. ಹೀಗಾಗಿ ಶರೀಫ್ ಅವರು ಯಾವುದೇ ಬೆಂಬಲವಿಲ್ಲದೆ ಖಾಲಿ ಕೈಯಲ್ಲಿ ಪಾಕಿಸ್ತಾನಕ್ಕೆ ಹಿಂದಿರುಗಿದ್ದಾರೆಂದು ಹೇಳಿದ್ದಾರೆ.

ಭಯೋತ್ಪಾದನೆಯನ್ನು ಮಟ್ಟಹಾಕುವುದರತ್ತ ಭಾರತ ಚಿಂತನೆ ನಡೆಸುತ್ತಿದ್ದು, ಭಾರತದ ಈ ನಿಲುವಿಗೆ ಅಂತರಾಷ್ಟ್ರೀಯ ಸಮುದಾಯದಲ್ಲಿ ಸಾಕಷ್ಟು ಮಟ್ಟದಲ್ಲಿ ಬೆಂಬಲಗಳು ವ್ಯಕ್ತವಾಗುತ್ತಿವೆ. ಭಯೋತ್ಪಾದನೆ ಇಡೀ ವಿಶ್ವಕ್ಕೆ ದೊಡ್ಡ ತಲೆ ನೋವಾಗಿ ಪರಿಣಮಿಸಿದ್ದು, ವಿಶ್ವಸಂಸ್ಥೆಯಲ್ಲಿ ಚರ್ಚೆ ನಡೆಯುವಾಗಲೂ ಭಯೋತ್ಪಾದನೆ ವಿರುದ್ಧ ಸಾಕಷ್ಟು ದೇಶಗಳು ದನಿಗಳು ಎತ್ತುತ್ತಿವೆ. ಒಂದೆಡೆ ಇಡೀ ವಿಶ್ವವೇ ಭಯೋತ್ಪಾದನೆ ವಿರುದ್ಧ ಹೋರಾಡುತ್ತಿದ್ದರೆ, ಮತ್ತೊಂಡೆ ಪಾಕಿಸ್ತಾನ ಮಾತ್ರ ಕಾಶ್ಮೀರದ ವಿಚಾರವಾಗಿ ಪ್ರತ್ಯೇಕವಾಗಿದೆ ಎಂದು ತಿಳಿಸಿದ್ದಾರೆ.

ಈ ಹಿಂದೆ ವಿಶ್ವಸಂಸ್ಥೆ ನಡೆದ 71ನೇ ಅಧಿವೇಶನ ಸಭೆಯಲ್ಲಿ ಮಾತನಾಡಿದ್ದ ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಶರೀಫ್ ಅವರು, ಬುರ್ಹಾನ್ ವಾನಿಯೊಬ್ಬ ಯುವ ನಾಯಕನಾಗಿದ್ದ. ಇಂತಹ ವ್ಯಕ್ತಿಯನ್ನು ಭಾರತೀಯ ಸೇನೆ ಗುಂಡಿಕ್ಕಿ ಹತ್ಯೆ ಮಾಡಿದೆ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com