ಭಾರತದ ವಿರುದ್ಧ ನೀರನ್ನೇ ಅಸ್ತ್ರವಾಗಿಟ್ಟುಕೊಂಡಿರುವ ಚೀನಾದಲ್ಲಿದೆ 87 ಸಾವಿರ ಜಲಾಶಯಗಳು!

ಪಾಕಿಸ್ತಾನದ ಮಿತ್ರ ರಾಷ್ಟ್ರ, ಭಾರತದ ನೆರೆ ರಾಷ್ಟ್ರ ಚೀನಾ ಮಾತ್ರ ಭಾರತದ ವಿರುದ್ಧ ನೀರನ್ನೇ ಅಸ್ತ್ರವಾಗಿ ಬಳಕೆ ಮಾಡುವುದರಲ್ಲಿ ಅನುಮಾನವಿಲ್ಲ.
ಭಾರತದ ವಿರುದ್ಧ ನೀರನ್ನೇ ಅಸ್ತ್ರವಾಗಿಟ್ಟುಕೊಂಡಿರುವ ಚೀನಾದಲ್ಲಿದೆ 87 ಸಾವಿರ ಜಲಾಶಯಗಳು!
ಭಾರತದ ವಿರುದ್ಧ ನೀರನ್ನೇ ಅಸ್ತ್ರವಾಗಿಟ್ಟುಕೊಂಡಿರುವ ಚೀನಾದಲ್ಲಿದೆ 87 ಸಾವಿರ ಜಲಾಶಯಗಳು!

ನವದೆಹಲಿ: ಪಾಕಿಸ್ತಾನಕ್ಕೆ ಪರೋಕ್ಷ ಹೊಡೆತ ನೀಡುವ ಸುಳಿವು ನೀಡಿರುವ ಭಾರತ ಇಂಡಸ್ ನೀರು ಒಪ್ಪಂದ ಪರಾಮರ್ಶೆಗೆ ಒಳಪಡಿಸಿ ಜಲಯುದ್ಧದ ಎಚ್ಚರಿಕೆ ನೀಡಿತ್ತು. ಭಾರತ ಪಾಕಿಸ್ತಾನದ ವಿರುದ್ಧ ನೀರನ್ನು ಅಸ್ತ್ರವಾಗಿ ಬಳಕೆ ಮಾಡುತ್ತದೆಯೋ ಇಲ್ಲವೋ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ ಪಾಕಿಸ್ತಾನದ ಮಿತ್ರ ರಾಷ್ಟ್ರ, ಭಾರತದ ನೆರೆ ರಾಷ್ಟ್ರ ಚೀನಾ ಮಾತ್ರ ಭಾರತದ ವಿರುದ್ಧ ನೀರನ್ನೇ ಅಸ್ತ್ರವಾಗಿ ಬಳಕೆ ಮಾಡುವುದರಲ್ಲಿ ಅನುಮಾನವಿಲ್ಲ. ಇದಕ್ಕೆ ಪೂರಕವಾಗಿ ಚೀನಾದಲ್ಲಿ 87 ಸಾವಿರ ಜಲಾಶಯಗಳಿವೆ ಎಂಬ ಮಾಹಿತಿ ಬಹಿರಂಗವಾಗಿದೆ.

ಚೀನಾದ 87 ಸಾವಿರ ಜಲಾಶಯಗಳ ಪೈಕಿ ಟಿಬೆಟ್ ನಲ್ಲೆ ಬಹುತೇಕ ಜಲಾಶಯಗಳಿದ್ದು, ಭಾರತದ ವಿರುದ್ಧ ಚೀನಾಗೆ ಇದು ಕಾರತಂತ್ರದ ಲಾಭವಾಗಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಏಷ್ಯಾದ ಇತರ ರಾಷ್ಟ್ರಗಳು ಒಗ್ಗಟ್ಟಾಗಿ ಚೀನಾವನ್ನು ಗಡಿ ನೀರು ಹಂಚಿಕೆ ಒಪ್ಪಂದಕ್ಕೆ ಸಹಿಹಾಕುವಂತೆ ಒತ್ತಾಯಿಸಬೇಕು ಈ ಮೂಲಕ ಚೀನಾದ ಎಗ್ಗಿಲ್ಲದ ಜಲಾಶಯ ನೀತಿಗೆ ಅಂಕುಶ ಹಾಕಬೇಕೆಂದು ತಜ್ಞರು ಕರೆ ನೀಡಿದ್ದಾರೆ.

ಚೀನಾ ವಶದಲ್ಲಿರುವ ಟಿಬೆಟ್ ಏಷ್ಯಾದ 10 ಪ್ರಮುಖ ನದಿಗಳ ಮೂಲವಾಗಿದ್ದು, ವಿಶ್ವದ ಶೇ.25 ರಷ್ಟು ಜನಸಂಖ್ಯೆ ಇದರ ಮೇಲೆಯೇ ಅವಲಂಬಿತವಾಗಿದೆ. ಪರಿಸರ ಕಾರಣಗಳಿಂದ ಅಷ್ಟೇ ಅಲ್ಲದೆ ಟಿಬೆಟ್ ನಲ್ಲಿ ಚೀನಾ ನಿರ್ಮಿಸುತ್ತಿರುವ ಜಲಾಶಯಗಳು ಕಾರ್ಯತಂತ್ರದ ದೃಷ್ಟಿಯಿಂದಲೂ ನಮಗೆ ಅಪಾಯಕಾರಿಯಾಗಿದ್ದು ಇವುಗಳನ್ನು ಭಾರತದ ವಿರುದ್ಧ ಯುದ್ಧಗಳಲ್ಲಿ ಬಳಸಿಕೊಳ್ಳುವ ಸಾಧ್ಯತೆ ಇದೆ ಎಂದು ಜೆಎನ್ ಯು ಪ್ರೊ. ಮಿಲಾಪ್ ಚಂದ್ರ ಶರ್ಮ ಅಂತಾರಾಷ್ಟ್ರೀಯ ಮಟ್ಟದ ಸೆಮಿನಾರ್ ನಲ್ಲಿ ಅಭಿಪ್ರಾಯಪಟ್ಟಿದ್ದು,  ಟಿಬೆಟ್ ವಿಷಯವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸ್ತಾಪಿಸಲು ಭಾರತಕ್ಕೆ ಇದು ಸೂಕ್ತ ಸಮಯ ಎಂದಿದ್ದಾರೆ.
 
ಸ್ಟೂಡೆಂಟ್ಸ್ ಫಾರ್ ಫ್ರೀ ಟಿಬೆಟ್- ಇಂಡಿಯಾ ಪ್ರಾರಂಭಿಸಿರುವ 'ಟಿಬೆಟ್ ನದಿಗಳು ಏಷ್ಯಾದ ಜೀವನಾಡಿ' (Tibet's Rivers, Asia's Lifeline) ಅಭಿಯಾನದ ಕಾರ್ಯಕರ್ತರು, ಭಾರತದ ತಜ್ಞರು,  ಥೈಲ್ಯಾಂಡ್, ಬಾಂಗ್ಲಾದೇಶ, ಟಿಬೇಟ್ ನ ತಜ್ಞರು ಚೀನಾ ಜಲಾಶಯಗಳ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದು, ಚೀನಾ ನಿರ್ಮಿಸಿರುವ ಜಲಾಶಯಗಳು ನೇರವಾಗಿ ಅಥವಾ ಪರೋಕ್ಷವಾಗಿ 2 ಬಿಲಿಯನ್ ಜನರ ಮೇಲೆ ಪರಿಣಾಮ ಬೀರುತ್ತಿದೆ ಎಂದು ಎಚ್ಚರಿಸಿದ್ದಾರೆ.

ರಾಜತಾಂತ್ರಿಕ ವಿಷಯದಲ್ಲಿ ಚೀನಾ ನದಿಯ ನೀರನ್ನು ಚೌಕಾಶಿ ವಿಷಯವನ್ನಾಗಿ ಬಳಸಿಕೊಳ್ಳುತ್ತದೆ ಎಂದು ಆರೋಪಿಸಿರುವ ಥೈಲ್ಯಾಂಡ್ ನ ಮೆಕಾಂಗ್ ನದಿ ಕಾರ್ಯಕರ್ತ ಅನಾಸಕ್ ಫೋಸ್ತ್ರೀಕುನ್  ಚೀನಾ ಮೆಕಾಂಗ್ ನದಿಯ ಮೇಲ್ಭಾಗದಲ್ಲಿ 7 ಜಲಾಶಯ ಸೇರಿದಂತೆ ಒಟ್ಟು 21 ಜಲಾಶಯಗಳನ್ನು ನಿರ್ಮಿಸಿದೆ. ಸಾಲ್ವೀನ್ ನದಿಗೆ 24 ಜಲಾಶಯಗಳನ್ನು ನಿರ್ಮಿಸಿದೆ. ಇಂಡಸ್ ನದಿಗೆ 2 ಜಲಾಶಯ, ಬ್ರಹ್ಮಪುತ್ರ ನದಿಗೆ 11 ಜಲಾಶಯಗಳನ್ನು ನಿರ್ಮಿಸಿದೆ. ಭಾರತ ಒಂದು ವೇಳೆ ಪಾಕಿಸ್ತಾನದ ಮೇಲೆ ನೀರನ್ನು ಅಸ್ತ್ರವಾಗಿ ಪ್ರಯೋಗಿಸದೆ ಇರಬಹುದು ಆದರೆ ಚೀನಾ ಭಾರತದ ವಿರುದ್ಧ ನೀರನ್ನು ಅಸ್ತ್ರವಾಗಿ ಪರಿಗಣಿಸುವುದಿಲ್ಲ ಎಂಬುದಕ್ಕೆ ಖಾತ್ರಿ ಇಲ್ಲ ಎಂದಿದ್ದಾರೆ. ಟಿಬೆಟ್ ನಿಂದ ಸಾಕಷ್ಟು ಸಂಪನ್ಮೂಲಗಳನ್ನು ಕಸಿಯಲಾಗುತ್ತಿದೆ. ಆದರೆ ಅದರ ಬದಲಾಗಿ ಟಿಬೇಟ್ ಗೆ ಸೌಲಭ್ಯಗಳನ್ನು ಒದಗಿಸಲಾಗುತ್ತಿಲ್ಲ ಎಂಬ ಆರೋಪವೂ ಕೇಳಿಬರುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com