

ನವದೆಹಲಿ: ದೇಶದ ಜನತೆ ಹೊಸ ದಿಕ್ಕಿನ ಕಡೆಗೆ ಎದುರು ನೋಡುತ್ತಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪಾಕಿಸ್ತಾನ ಕುರಿತಂತೆ ನೀಡಿದ್ದ ಹೇಳಿಕೆ ಬೇಸರವನ್ನುಂಟು ಮಾಡಿದೆ ಎಂದು ಜನತಾದಳ (ಸಂಯುಕ್ತ) ಭಾನುವಾರ ಹೇಳಿದೆ,
ಈ ಕುರಿತಂತೆ ಮಾತನಾಡಿರುವ ಜೆಡಿಯು ನಾಯಕ ಕೆಸಿ. ತ್ಯಾಗಿ ಅವರು, ಪಾಕಿಸ್ತಾನ ಭಯೋತ್ಪಾದನೆಯನ್ನು ಪ್ರಾಯೋಜಿಸುತ್ತಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಮೋದಿಯವರು ನಿನ್ನೆ ಏನು ಮಾತನಾಡಿದ್ದಾರೋ ಅದನ್ನು ಇಡೀ ವಿಶ್ವವೇ ಈಗಾಗಲೇ ಮಾತನಾಡಿದೆ. ಮೋದಿಯವರು ಭಾಷಣ ಮಾಡುತ್ತಾರೆಂದರೆ ಜನತೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ. ಈ ನಿರೀಕ್ಷೆಗಳು ನಿನ್ನೆ ಹುಸಿಯಾಗಿದೆ ಎಂದು ಹೇಳಿದ್ದಾರೆ.
ಮೋದಿಯವರು ಭಾಷಣ ಮಾಡುತ್ತಿದ್ದು, ಹೊಸ ನಿರ್ದೇಶನ, ಹೊಸ ದಿಕ್ಕಿನ ಬಗ್ಗೆ ಮಾತನಾಡುತ್ತಾರೆಂದು ಜನರು ನಂಬಿದ್ದರು. ಆದರೆ, ಭಾಷಣದುದ್ದಕ್ಕೂ ಮೋದಿಯವರು ಪಾಕಿಸ್ತಾನದ ಬಗ್ಗೆಯೇ ಮಾತನಾಡಿದ್ದರು. ಇದು ನಿಜಕ್ಕೂ ಬೇಸರವನ್ನುಂಟುಮಾಡಿದೆ ಎಂದು ತಿಳಿಸಿದ್ದಾರೆ.