ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ ಪ್ರಧಾನಿ ಮೋದಿ

ಸೋಮವಾರ 83ನೇ ವಸಂತಕ್ಕೆ ಕಾಲಿಟ್ಟ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಹುಟ್ಟುಹಬ್ಬದ...
ಪ್ರಧಾನಿ ಮೋದಿ, ಮನಮೋಹನ್ ಸಿಂಗ್(ಸಂಗ್ರಹ ಚಿತ್ರ)
ಪ್ರಧಾನಿ ಮೋದಿ, ಮನಮೋಹನ್ ಸಿಂಗ್(ಸಂಗ್ರಹ ಚಿತ್ರ)
Updated on: 
ನವದೆಹಲಿ: ಸೋಮವಾರ 83ನೇ ವಸಂತಕ್ಕೆ ಕಾಲಿಟ್ಟ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. 
"ಡಾ. ಮನಮೋಹನ್‌ ಸಿಂಗ್‌ ಜೀ ಅವರಿಗೆ ಹುಟ್ಟುಹಬ್ಬದ ಶುಭಾಶಯ; ದೇವರು ಅವರಿಗೆ ದೀರ್ಘ‌ ಆಯುರಾರೋಗ್ಯವನ್ನು ಕರುಣಿಸಲಿ' ಎಂದು ಪ್ರಧಾನಿ ಮೋದಿ ಟ್ವೀಟ್‌ ಮಾಡಿದ್ದಾರೆ.
ಪ್ರಧಾನಿ ಕಾರ್ಯಾಲಯ ತಿಳಿಸಿರುವಂತೆ ಮೋದಿ ಅವರು ಮನಮೋಹನ್‌ ಸಿಂಗ್‌ ಅವರಿಗೆ ವೈಯಕ್ತಿಕವಾಗಿ ಫೋನ್‌ ಕರೆ ಮಾಡಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ ಎನ್ನಲಾಗಿದೆ.
ಆರ್ಥಿಕ ತಜ್ಞರು ಆಗಿರುವ ಡಾ.ಮನಮೋಹನ್ ಸಿಂಗ್ ಅವರು 2004ರಿಂದ 2014ರವರೆಗೆ ಸತತ ಎರಡು ಬಾರಿ ದೇಶದ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com