ಇಸ್ರೋ ಸಾಧನೆಗೆ ಪ್ರಧಾನಿ, ರಾಷ್ಟ್ರಪತಿಗಳ ಅಭಿನಂದನೆ

ಏಕಕಾಲಕ್ಕೆ 2 ಕಕ್ಷೆಗೆ 8 ಉಪಗ್ರಹಗಳನ್ನು ಉಡಾಯಿಸಿದ ಭಾರತೀಯ ವಿಜ್ಞಾನಿಗಳ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಶ್ಲಾಘಿಸಿದ್ದಾರೆ.
ಇಸ್ರೋದ ಪಿಎಸ್ ಎಲ್ ವಿ-ಸಿ35 ರಾಕೆಟ್ ಉಡಾವಣೆ
ಇಸ್ರೋದ ಪಿಎಸ್ ಎಲ್ ವಿ-ಸಿ35 ರಾಕೆಟ್ ಉಡಾವಣೆ

ನವದೆಹಲಿ: ಏಕಕಾಲಕ್ಕೆ 2 ಕಕ್ಷೆಗೆ 8 ಉಪಗ್ರಹಗಳನ್ನು ಉಡಾಯಿಸಿದ ಭಾರತೀಯ ವಿಜ್ಞಾನಿಗಳ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಶ್ಲಾಘಿಸಿದ್ದಾರೆ.

ಅತ್ತ ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಪಿಎಸ್ ಎಲ್ ವಿ-ಸಿ35 ರಾಕೆಟ್ ಉಡಾವಣೆಯಾಗಿ ಸ್ಕಾಟ್ ಸ್ಯಾಟ್-1 ಉಪಗ್ರಹವನ್ನು ಕಕ್ಷೆಗೆ  ಸೇರಿಸುತ್ತಿದ್ದಂತೆಯೇ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು, 7 ಇತರೆ ಉಪಗ್ರಹಗಳೊಂದಿಗೆ ಭಾರತದ ಬಹುಪಯೋಗಿ ಸ್ಕಾಟ್  ಸ್ಯಾಟ್-1 ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ಎಲ್ಲ ವಿಜ್ಞಾನಿಗಳಿಗೆ ಅಭಿನಂಧನೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

ಅಂತೆಯೇ ವಿಜ್ಞಾನಿಗಳ ಸಾಧನೆಯನ್ನು ಕೊಂಡಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಪಿಎಸ್ ಎಲ್ ವಿ-ಸಿ35 ರಾಕೆಟ್ ಮೂಲಕ ಸ್ಕಾಟ್ ಸ್ಯಾಟ್-1 ಉಪಗ್ರಹವನ್ನು ಯಶಸ್ವಿಯಾಗಿ  ಉಡಾವಣೆ ಮಾಡುವ ಮೂಲಕ ಇಸ್ರೋ ವಿಜ್ಞಾನಿಗಳು ಭಾರತದ ಗೌರವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ವಿಜ್ಞಾನಿಗಳ ಈ ಮಹತ್ತರ ಸಾಧನೆ 125 ಕೋಟಿ ಭಾರತೀಯರ ಹೃದಯಗೆದ್ದಿದ್ದು,  ವಿಶ್ವಮಟ್ಟದಲ್ಲಿ ಭಾರತೀಯ ಗೌರವ ಹೆಚ್ಚಿಸಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com