

ನವದೆಹಲಿ: ವಿವಾದಿತ ದೇವಮಾನವ ಅಸಾರಾಂ ಬಾಪು ಎಮ್ಸ್ ನ ನರ್ಸ್ ಒಬ್ಬರನ್ನ ಹೊಗಳುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾನೆ.
ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಜೈಲು ಹಕ್ಕಿಯಾಗಿರುವ ಅಸಾರಾಂ ಬಾಪು ಆರೋಗ್ಯ ತಪಾಸಣೆಗಾಗಿ ದೆಹಲಿ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಅಸಾರಾಂ ಗೆ ಬೆಳಗಿನ ಉಪಹಾರ ನೀಡಲು ಬಂದ ನರ್ಸ್ ಒಬ್ಬರನ್ನು ಅಸಾರಾಂ ಬಾಪು ಹಾಡಿ ಹೊಗಳಿದ್ದಾನೆ. ಬ್ರೆಡ್ ಗೆ ಬೆಣ್ಣೆಯ ಅವಶ್ಯಕತೆ ಇಲ್ಲ, ನೀನೇ ಬೆಣ್ಣೆಯ ಹಾಗಿದ್ದೀಯಾ, ನಿನ್ನ ಕೆನ್ನೆ ಕೆಂಪು ಸೇಬಿನ ಹಾಗಿದೆ.ನೀನು ಕಾಶ್ಮೀರಿ ಹುಡುಗಿಯೇ ಆಗಿರಬೇಕು ಎಂದು 71 ವರ್ಷದ ಆಸಾರಾಂ ಬಾಪು ಹೊಗಳಿದ್ದಾನೆ ಎಂದು ವರದಿಯಾಗಿದೆ.
ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂದು 2013 ರ ಆಗಸ್ಟ್ 20 ರಂದು ಅಸಾರಾಂ ಬಾಪು ವಿರುದ್ಧ ಅಪ್ರಾಪ್ತೆಯೊಬ್ಬಳು ದೂರು ದಾಖಲಿಸಿದ್ದಳು. ಈ ಹಿನ್ನೆಲೆಯಲ್ಲಿ ಅಸಾರಾಂ ಬಾಪುವನ್ನು ಬಂಧಿಸಿರುವ ಪೊಲೀಸರು ಜೋಧ್ ಪುರದ ಜೈಲಿನಲ್ಲಿರಿಸಿದ್ದಾರೆ.