ವಾಘಾ ಗಡಿ: ಭಾರತ-ಪಾಕ್ ಸೈನಿಕರ ಧ್ವಜಗೌರವ ಕಾರ್ಯಕ್ರಮ ರದ್ದುಗೊಳಿಸಿದ ಬಿಎಸ್ಎಫ್
ದೇಶ
ವಾಘಾ ಗಡಿ: ಭಾರತ-ಪಾಕ್ ಸೈನಿಕರ ಧ್ವಜಗೌರವ ಕಾರ್ಯಕ್ರಮ ರದ್ದುಗೊಳಿಸಿದ ಬಿಎಸ್ಎಫ್
ಗಡಿಯಲ್ಲಿ ಪರಿಸ್ಥಿತಿ ಉದ್ವಿಘ್ನಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಭಾರತ ಹಾಗೂ ಪಾಕಿಸ್ದಾನದ ಗಡಿ ವಾಘಾದಲ್ಲಿ ಎಂದಿನಂತೆ ನಡೆಯಬೇಕಿದ್ದ ಉಭಯ ದೇಶಗಳ ಸೈನಿಕರ ಧ್ವಜಗೌರವ ಕಾರ್ಯಕ್ರಮವನ್ನು...
ನವದೆಹಲಿ: ಗಡಿಯಲ್ಲಿ ಪರಿಸ್ಥಿತಿ ಉದ್ವಿಘ್ನಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಭಾರತ ಹಾಗೂ ಪಾಕಿಸ್ದಾನದ ಗಡಿ ವಾಘಾದಲ್ಲಿ ಎಂದಿನಂತೆ ನಡೆಯಬೇಕಿದ್ದ ಉಭಯ ದೇಶಗಳ ಸೈನಿಕರ ಧ್ವಜಗೌರವ ಕಾರ್ಯಕ್ರಮವನ್ನು ಬಿಎಸ್ಎಫ್ ಗುರುವಾರ ರದ್ದುಗೊಳಿಸಿದೆ.
ಪಂಜಾಬ್ ಸೇರಿದಂತೆ ಇನ್ನಿತರೆ ಪ್ರದೇಶಗಳ ಗಡಿಯಲ್ಲಿ ನೆಲೆಸಿರುವ ಜನರನ್ನು ಸ್ಥಳಾಂತರಗೊಳಿಸುವಂತೆ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಈಗಾಗಲೇ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಎಚ್ಚರಿಕೆಯನ್ನು ನೀಡಿದ್ದು, ಗಡಿ ಭಾಗದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ ಎಂದು ತಿಳಿದುಬಂದಿದೆ.
ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿರುವಂತೆಯೇ ಭಾರತ-ಪಾಕಿಸ್ತಾನ ಗಡಿಗೆ ಹೆಚ್ಚುವರಿ ಸೇನಾಪಡೆಗಳನ್ನು ನಿಯೋಜಿಸಲಾಗುತ್ತಿದ್ದು, ಪ್ರಮುಖವಾಗಿ ಪಂಜಾಬ್ ಭಾಗದ ಗಡಿಗಳಲ್ಲಿ ಹೆಚ್ಚುವರಿ ಸೇನಾಪಡೆಗಳನ್ನು ನಿಯೋಜಿಸಲಾಗುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ