ಪಾಕ್ ಮೇಲೆ ಭಾರತೀಯ ಸೇನೆ ಸೀಮಿತ ದಾಳಿ ನಡೆಸಿಲ್ಲ: ದಾಳಿ ಬಗ್ಗೆ ಪಾಕಿಸ್ತಾನಕ್ಕೇ ಗೊಂದಲ!

ಒಂದೆಡೆ ಗಡಿಯಲ್ಲಿ ಭಾರತೀಯ ಸೇನೆ ಉಗ್ರರ ಕ್ಯಾಂಪ್ ಗಳ ಮೇಲೆ ದಾಳಿ ನಡೆಸುತ್ತಿದ್ದರೆ, ಮತ್ತೊಂದೆಡೆ ದಾಳಿ ಬಗ್ಗೆ ಪಾಕಿಸ್ತಾನದಲ್ಲೇ ಹಲವು ಗೊಂದಲಗಳು ಮೂಡತೊಡಗಿವೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಇಸ್ಲಾಮಾಬಾದ್: ಒಂದೆಡೆ ಗಡಿಯಲ್ಲಿ ಭಾರತೀಯ ಸೇನೆ ಉಗ್ರರ ಕ್ಯಾಂಪ್ ಗಳ ಮೇಲೆ ದಾಳಿ ನಡೆಸುತ್ತಿದ್ದರೆ, ಮತ್ತೊಂದೆಡೆ ದಾಳಿ ಬಗ್ಗೆ ಪಾಕಿಸ್ತಾನದಲ್ಲೇ ಹಲವು ಗೊಂದಲಗಳು ಮೂಡತೊಡಗಿವೆ.

ಪಾಕಿಸ್ತಾನದ ಮೇಲೆ ಭಾರತೀಯ ಸೇನೆಯಿಂದ ಯಾವುದೇ ರೀತಿಯ ಸೀಮಿತ ದಾಳಿ ನಡೆದಿಲ್ಲ. ಗಡಿ ನುಸುಳುವಿಕೆ ಕುರಿತಾಗಿ ಗುಂಡಿನ ದಾಳಿ ನಡೆಸುತ್ತಿದೆ ಎಂದು ಪಾಕಿಸ್ತಾನ ಅಧಿಕಾರಿಗಳು ಹೇಳಿಕೊಂಡಿದ್ದಾರೆ.

ಒಂದೆಡೆ ಭಾರತೀಯ ಸೇನೆಯಿಂದ ಪಾಕಿಸ್ತಾನದ ಮೇಲೆ ಸೀಮಿತ ದಾಳಿ ನಡೆಯುತ್ತಿದ್ದು, ದಾಳಿಯನ್ನು ಖಂಡಿಸುತ್ತೇವೆಂದು ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಶರೀಫ್ ಅವರು ಹೇಳಿದ್ದರೆ ಮತ್ತೊಂದೆಡೆ ತಡರಾತ್ರಿ ಭಾರತೀಯ ಸೇನೆಯಿಂದ ಗುಂಡಿನ ದಾಳಿ ನಡೆದಿದ್ದು, ಪಾಕಿಸ್ತಾನ ಮೇಲೆ ಸೀಮಿತ ದಾಳಿ ನಡೆಸಿಲ್ಲ ಎಂದು ಪಾಕಿಸ್ತಾನ ಆಂತರಿಕ ಸೇವೆ ಸಾರ್ವಜನಿಕ ಸಂಪರ್ಕ ಇಲಾಖೆ ಮಾಹಿತಿ ನೀಡಿದೆ.

ಪಾಕಿಸ್ತಾನ ರಕ್ಷಣಾ ಸಚಿವ ಖ್ವಾಜಾ ಆಸೀಫ್ ಅವರೂ ಕೂಡ, ತಡರಾತ್ರಿ ನಡೆದ ದಾಳಿಯಲ್ಲಿ ಯೋಧರಿಬ್ಬರು ಸಾವನ್ನಪ್ಪಿದ್ದಾರೆ, 9 ಜನರಿಗೆ ಗಾಯಗಳಾಗಿವೆ ಎಂದು ಹೇಳಿದ್ದಾರೆ.

ಪಾಕಿಸ್ತಾನದ ಅಧಿಕಾರಿಗಳು ದಾಳಿ ಬಗ್ಗೆ ತಿಪ್ಪೆ ಸಾರುವ ಕೆಲಸವನ್ನು ಒಂದೆಡೆ ಮಾಡುತ್ತಿದ್ದರೆ, ಮತ್ತೊಂದೆ, ಅಲ್ಲಿನ ಪ್ರಧಾನಿ ಭಾರತಕ್ಕೆ ತಕ್ಕ ಪ್ರತ್ಯುತ್ತ ನೀಡುತ್ತೇವೆಂದು ಎಚ್ಚರಿಕೆ ನೀಡುತ್ತಿದ್ದಾರೆ. ಒಟ್ಟಾರೆ ದಾಳಿ ಬಗ್ಗೆ ಪಾಕಿಸ್ತಾನದಲ್ಲಿಯೇ ಗೊಂದಲ ಸೃಷ್ಟಿಯಾಗಿದೆ ಎನ್ನಲಾಗುತ್ತಿದೆ.

ತುರ್ತು ಸಭೆ ಕರೆದ ನವಾಜ್ ಷರೀಫ್
ಇನ್ನು ಉಗ್ರ ಕ್ಯಾಂಪ್ ಗಳ ಮೇಲೆ ಭಾರತೀಯ ಸೇನೆ ನಡೆಸುತ್ತಿರುವ ದಾಳಿ ಹಿನ್ನೆಲೆಯಲ್ಲಿ ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಷರೀಫ್ ಅವರು ತುರ್ತು ಸಭೆಯನ್ನು ಕರೆದಿದ್ದಾರೆ.

ಪಾಕಿಸ್ತಾನದ ಇಸ್ಲಾಮಾಬಾದ್ ನಲ್ಲು ತುರ್ತು ಸಂಪುಟವನ್ನು ಕರೆಯಲಗಾದಿದ್ದು, ಭಾರತೀಯ ಸೇನೆಯ ದಾಳಿ ಕುರಿತಂತೆ ಮಹತ್ವದ ಚರ್ಚೆ ನಡೆಸಲಿದ್ದಾರೆಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com