ಬೆಂಗಳೂರಿನಲ್ಲಿ ಕಳೆದ ತಿಂಗಳು ನಡೆದ ಹಾರಾಜು ಪ್ರಕ್ರಿಯೆಯಲ್ಲಿ 2 ಕೋಟಿ ಮೊತ್ತಕ್ಕೆ ಹಾರಾಜಿಗಿದ್ದ ಇಶಾಂತ್ ರನ್ನು ಯಾವುದೇ ಫ್ರಾಂಚೈಸಿ ತಂಡಗಳು ಖರೀದಿಸಿರಲಿಲ್ಲ. ಇದೀಗ ಐಪಿಎಲ್ ನಲ್ಲಿ ಐದನೇ ಫ್ರಾಂಚೈಸಿಯೊಂದಿಗೆ ಇಶಾಂತ್ ಆಡಲಿದ್ದಾರೆ. ಇದಕ್ಕೂ ಮುನ್ನ ಕೊಲ್ಕತ್ತಾ ನೈಟ್ ರೈಡರ್ಸ್, ಡೆಕ್ಕನ್ ಚಾರ್ಜಸ್, ಸನ್ ರೈಸರ್ಸ್ ಹೈದರಾಬಾದ್ ಮತ್ತು ರೈಸಿಂಗ್ ಪುಣೆ ಸೂಪರ್ ಗೈಂಟ್ಸ್ ತಂಡವನ್ನು ಪ್ರತಿನಿಧಿಸಿದ್ದರು.