ಧಾರ್ಮಿಕ ಗುರು ದಲೈ ಲಾಮಾ
ದೇಶ
ನನ್ನನ್ನು ಯಾರಾದರೂ ರಾಕ್ಷಸ ಎಂದು ಕರೆದರೂ ನನಗೆ ಚಿಂತೆಯಿಲ್ಲ: ದಲೈ ಲಾಮಾ
ತಮ್ಮ ಈಶಾನ್ಯ ಭಾರತ ಭೇಟಿ ಬಗ್ಗೆ ಚೀನಾಕ್ಕಿರುವ ಕಳವಳವನ್ನು...
ಬೊಂಬ್ದಿಲಾ(ಅರುಣಾಚಲ ಪ್ರದೇಶ): ತಮ್ಮ ಈಶಾನ್ಯ ಭಾರತ ಭೇಟಿ ಬಗ್ಗೆ ಚೀನಾಕ್ಕಿರುವ ಕಳವಳವನ್ನು ಅಲಕ್ಷಿಸಿರುವ ಟಿಬೆಟಿಯನ್ ಧಾರ್ಮಿಕ ಗುರು ದಲೈಲಾಮಾ, ತಮ್ಮನ್ನು ರಾಕ್ಷಸ ಎಂದು ಅಡ್ಡ ಹೆಸರಿನಿಂದ ಕರೆದರೂ ಕೂಡ ತಮಗೇನು ಸಮಸ್ಯೆಯಿಲ್ಲ ಎಂದಿದ್ದಾರೆ.
ಮಾಧ್ಯಮಗಳೊಂದಿಗೆ ಇಂದು ಮಾತನಾಡಿದ ಅವರು, ತಮ್ಮನ್ನು ಯಾರಾದರೂ ರಾಕ್ಷಸ ಎಂದು ಪರಿಗಣಿಸಿದರೂ ಪರವಾಗಿಲ್ಲ, ತಮಗೇನು ಸಮಸ್ಯೆಯಿಲ್ಲ ಎಂದರು.
ದಲೈಲಾಮಾ ಅವರ ಅರುಣಾಚಲ ಪ್ರದೇಶ ಭೇಟಿಯನ್ನು ನಿನ್ನೆ ಶ್ಲಾಘಿಸಿದ್ದ ಟಿಬೆಟಿಯನ್ ಸರ್ಕಾರ, ಧಾರ್ಮಿಕ ಗುರು ದಲೈಲಾಮಾ ಅವರ ಭೇಟಿ ಕೇವಲ ಧಾರ್ಮಿಕ ಉದ್ದೇಶವಾಗಿರುವುದರಿಂದ ಚೀನಾಕ್ಕೆ ಯಾವ ತೊಂದರೆಯಿದೆ ಎಂದು ಹೇಳಿದ್ದಾರೆ.
ತವಂಗ್ ನ ಜನರು ಅವರನ್ನು ಬೋಧನೆ ಮತ್ತು ಆಶೀರ್ವಾದ ನೀಡಲು ಆಹ್ವಾನಿಸಿದ್ದಾರೆ. ಧಾರ್ಮಿಕ ಮುಖಂಡರಾಗಿ ಅವರು ಭೇಟಿ ನೀಡಿದ್ದಾರೆ. ದಲೈಲಾಮಾ ಅವರು ಇಡೀ ವಿಶ್ವಾದ್ಯಂತ ಸಂಚರಿಸಿ ಬೌದ್ದ ತತ್ವಗಳ, ಅಂತರ ಧರ್ಮೀಯ ಸಾಮರಸ್ಯ, ಶಾಂತಿ ಬಗ್ಗೆ ಬೋಧಿಸುತ್ತಾರೆ. ತಮ್ಮ ಅನುಯಾಯಿಗಳಿರುವ ದೇಶಕ್ಕೆ ಹೋಗುವ ಧಾರ್ಮಿಕ ಮುಖಂಡರಿಗೆ ಚೀನಾ ಪ್ರತಿಭಟನೆ ಮಾಡುವುದರಲ್ಲಿ ಕಾರಣವಿಲ್ಲ ಎಂದು ಟಿಬೆಟಿಯನ್ ಸರ್ಕಾರದ ವಕ್ತಾರ ಸೋನಮ್ ದಗ್ಪೊ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ