ಬಿಜೆಪಿ ವಿರುದ್ಧ ದ್ವೇಷಪೂರಿತ ಭಾಷಣ: ನ್ಯಾಷನಲ್ ಕಾನ್ಫರೆನ್ಸ್ ನಾಯಕನ ವಿರುದ್ಧ 'ಯೋಗಿ' ನೋಟಿಸ್

ಬಿಜೆಪಿ ಪಕ್ಷದ ವಿರುದ್ಧ ಸುಧೀರ್ಘವಾಗಿ ದ್ವೇಷಪೂರಿತ ಭಾಷಣೆ ಮಾಡುತ್ತಿರುವ ನ್ಯಾಷನಲ್ ಕಾನ್ಫರೆನ್ಸ್ ನಾಯಕನ ವಿರುದ್ಧ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನೋಟಿಸ್ ಜಾರಿ...
ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
Updated on: 
ಲಖನೌ:  ಬಿಜೆಪಿ ಪಕ್ಷದ ವಿರುದ್ಧ ನಿರಂತರವಾಗಿ ದ್ವೇಷಪೂರಿತ ಭಾಷಣೆ ಮಾಡುತ್ತಿರುವ ನ್ಯಾಷನಲ್ ಕಾನ್ಫರೆನ್ಸ್ ನಾಯಕನ ವಿರುದ್ಧ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನೋಟಿಸ್ ಜಾರಿ ಮಾಡಿದ್ದಾರೆ. 
ನ್ಯಾಷನಲ್ ಕಾನ್ಫರೆನ್ಸ್ ವಕ್ತಾರ ಜುನೈದ್ ಅಜೀಮ್ ಮಟ್ಟು ವಿರುದ್ಧ ಯೋಗಿ ಆದಿತ್ಯನಾಥ್ ಅವರು ಲೀಗಲ್ ನೋಟಿಸ್ ಜಾರಿದ್ದಾರೆಂದು ತಿಳಿದುಬಂದಿದೆ. 
ಸತ್ತ ಮುಸ್ಲಿಂ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿ ಎಂದು ಯೋಗಿ ಆದಿತ್ಯನಾಥ್ ಅವರು ಹಿಂದೂಗಳಿಗೆ ಕರೆ ನೀಡಿದ್ದಾರೆಂಬ ಹೇಳಿಕೆಯನ್ನು ಹಿಡಿದು, ಯೋಗಿ ಆದಿತ್ಯನಾಥ್ ಹಾಗೂ ಬಿಜೆಪಿ ವಿರುದ್ಧ ಅಜೀಮ್ ಮಟ್ಟು ಅವರು ದ್ವೇಷವನ್ನು ಹರಡುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಹೀಗಾಗಿ ಯೋಗಿ ಆದಿತ್ಯನಾಥ್ ಅವರು ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆಂದು ಹೇಳಲಾಗುತ್ತಿದೆ. 
ಉದ್ದೇಶಪೂರ್ವಕವಾಗಿಯೇ ಬಿಜೆಪಿ ವಿರುದ್ಧ ದ್ವೇಷಪೂರಿತ ಭಾಷಣವನ್ನು ಮಾಡುತ್ತಿದ್ದು, ಹೇಳಿಕೆ ಸಂಬಂಧ ಇನ್ನೆರಡು ವಾರಗಳೊಳಗಾಗಿ ಕ್ಷಮೆಯಾಚಿಸಬೇಕು, ಇಲ್ಲವೇ ಕಾನೂನಿನ ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ ಎಂದು ತಿಳಿದುಬಂದಿದೆ. 
ಇನ್ನು ನೋಟಿಸ್ ಸಂಬಂಧ ಹೇಳಿಕೆ ನೀಡಿರುವ ಮಟ್ಟು ಅವರು, ಮುಸ್ಲಿಮರ ವಿರುದ್ಧ ಬಹಿರಂಗವಾಗಿಯೇ ಹಿಂಸಾಚಾರ ಸೃಷ್ಟಿಸುತ್ತಿರುವವರು ನನ್ನ ವಿರುದ್ಧ ನೋಟಿಸ್ ಜಾರಿ ಮಾಡಿದ್ದಾರೆ. ಯೋಗಿ ಆದಿತ್ಯನಾಥ್ ಅವರು ಖ್ಯಾತಿ ಹಾಗೂ ಕುಖ್ಯಾತಿ ಕುರಿತ ಅರ್ಥವನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆಂಬುದು ಇದರಿಂದ ಅರ್ಥವಾಗುತ್ತದೆ ಎಂದು ಹೇಳಿದ್ದಾರೆ. 
ಯೋಗಿ ಆದಿತ್ಯನಾಥ್ ಅವರು ಬೆದರಿಕೆ ಮತ್ತು ಕಿರುಕುಳಗಳನ್ನೇ ರಾಜಕೀಯ ಶಸ್ತ್ರಾಸ್ತ್ರಗಳಾಗಿ ಬಳಸಿಕೊಳ್ಳುತ್ತಿದ್ದಾರೆ. ಮುಸ್ಲಿಮರ ವಿರುದ್ಧ ಬಹಿರಂಗವಾಗಿಯೇ ಬೆದರಿಕೆ ಹಾಕಿದ್ದಾರೆ. ವಕೀಲರ ಮುಖಾಂತರ ನಾನು ನೋಟಿಸ್ ಗೆ ಉತ್ತರ ನೀಡುತ್ತೇನೆ. ವಕೀಲರು ನೋಟಿಸ್ ನ್ನು ಪರಿಶೀಲಿಸುತ್ತಿದ್ದಾರೆ. ಸೂಕ್ತ ರೀತಿಯಲ್ಲಿಯೇ ನೋಟಿಸ್ ಗೆ ಉತ್ತರ ನೀಡುತ್ತೇನೆಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com